/newsfirstlive-kannada/media/post_attachments/wp-content/uploads/2024/06/Darshan_Shivanna.jpg)
ಬೆಂಗಳೂರು: ಕೊಲೆ ಕೇಸಲ್ಲಿ ಜೈಲು ಸೇರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಸ್ಯಾಂಡಲ್ವುಡ್ ಹಿರಿಯ ನಟ ಡಾ. ಶಿವರಾಜ್ಕುಮಾರ್ ಮಾತಾಡಿದ್ದಾರೆ. ಕೃತ್ಯದ ಬಗ್ಗೆ ಮೊದಲ ಬಾರಿಗೆ ರಿಯಾಕ್ಟ್ ಮಾಡಿರೋ ಶಿವಣ್ಣ ತಮ್ಮ ನೋವು ಹೊರಹಾಕಿದ್ದಾರೆ.
ಏನು ಮಾಡಕ್ಕೆ ಆಗಲ್ಲ, ಎಲ್ಲವೂ ಹಣೆಬರಹ. ನನಗೆ ದರ್ಶನ್ ಮತ್ತು ರೇಣುಕಾಸ್ವಾಮಿ ಫ್ಯಾಮಿಲಿಯನ್ನು ನೆನೆಸಿಕೊಂಡರೆ ಬಹಳ ನೋವಾಗುತ್ತೆ. ಕೇಸ್ ತನಿಖೆ ಹಂತದಲ್ಲಿದೆ, ಹಾಗಾಗಿ ನಾವೇನು ಮಾತಾಡೋದು ತಪ್ಪು ಎಂದರು.
ಯಾರ ಜೀವನದಲ್ಲೂ ಈ ರೀತಿ ಘಟನೆ ನಡೆಯಬಾರದು. ಎಲ್ಲವೂ ಹಣೆಬರಹ. ತನಿಖೆ ನಡೆಯುತ್ತಿದೆ. ತಪ್ಪು ಎಂದು ಸಾಬೀತಾದ್ರೆ ಶಿಕ್ಷೆ ಆಗಲಿದೆ. ನನಗಂತೂ ತುಂಬಾ ನೋವಾಗ್ತಿದೆ. ಬಹಳ ಬೇಸರ ಕೂಡ ಇದೆ. ಏನು ಮಾಡೋದು ಎಲ್ಲವೂ ವಿಧಿಯಾಟ. ನಾವು ಏನ್ ಮಾಡ್ತೀವಿ ಸರೀನಾ ಎಂದು ಒಂದು ಸಲ ಯೋಚನೆ ಮಾಡಬೇಕು. ಯಾಕಪ್ಪ ಹಿಂಗಾಯ್ತು ಎಂದು ಬೇಸರ ಆಗುತ್ತೆ ಎಂದರು.
ಇದನ್ನೂ ಓದಿ:‘ಎಲ್ಲಾ ಹಣೆಬರಹ ಏನೂ ಮಾಡೋಕೆ ಆಗಲ್ಲ..’ ದರ್ಶನ್ ಪ್ರಕರಣದ ಬಗ್ಗೆ ಶಿವಣ್ಣ ಪ್ರತಿಕ್ರಿಯೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ