Advertisment

ಪುಟ್ಟಕ್ಕನ ಸಾಧನೆಗೆ ಮತ್ತೊಂದು ಗರಿ.. ಹಿರಿಯ ನಟಿ ಉಮಾಶ್ರೀಗೆ ಅಭಿನಂದನೆಗಳ ಮಹಾಪೂರ

author-image
admin
Updated On
ಮೊದಲ ಬಾರಿಗೆ ಯಕ್ಷಗಾನದಲ್ಲೂ ಅಭಿನಯಿಸಿದ ಉಮಾಶ್ರೀ.. ಮಂಥರೆಯಾಗಿ ಮನಗೆದ್ದ ಪುಟ್ಟಮಲ್ಲಿ
Advertisment
  • ರಂಗಭೂಮಿ, ಕಲೆ ಮತ್ತು ಸಮಾಜ ಸೇವೆ ವಿಭಾಗದಲ್ಲಿ ಈ ಗೌರವ
  • ನಟಿ ಉಮಾಶ್ರೀ ಸೇರಿ ಮೂವರಿಗೆ ಗೌರವ ಡಾಕ್ಟರೇಟ್ ಘೋಷಣೆ
  • ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪ್ರಧಾನ

ಬೆಂಗಳೂರು: ಕನ್ನಡ ರಂಗಭೂಮಿ, ಚಲನಚಿತ್ರ ರಂಗದ ಹಿರಿಯ ಕಲಾವಿದೆ ಹಾಗು ಮಾಜಿ ಸಚಿವೆ ಉಮಾಶ್ರೀ ಅವರು ಈಗ ಡಾಕ್ಟರ್ ಆಗುತ್ತಿದ್ದಾರೆ. ಉಮಾಶ್ರೀ ಅವರಿಗೆ ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಘೋಷಣೆ ಮಾಡಿದೆ.

Advertisment

ಇದನ್ನೂ ಓದಿ: EXCLUSIVE: ಪ್ಲೀಸ್​​ ಕಣೇ.. ಆ ಫೋಟೋ ಕಳಿಸಲಾ? ರೇಣುಕಾಸ್ವಾಮಿ ಪವಿತ್ರಾಗೆ ಕಳಿಸುತ್ತಿದ್ದ ಮೆಸೇಜ್‌ ಏನೇನು? 

ಶ್ರೀಕೃಷ್ಣ ದೇವರಾಯ ವಿವಿಯಿಂದ ಈ ಬಾರಿ ನಟಿ ಉಮಾಶ್ರೀ ಸೇರಿ ಮೂವರಿಗೆ ಗೌರವ ಡಾಕ್ಟರೇಟ್ ಘೋಷಣೆ ಮಾಡಲಾಗಿದೆ.

publive-image

ರಂಗಭೂಮಿ, ಕಲೆ ಮತ್ತು ಸಮಾಜ ಸೇವೆ ವಿಭಾಗದಲ್ಲಿ ಸಾಧನೆಗೈದ ನಟಿ ಉಮಾಶ್ರೀ, ಕೈಗಾರಿಕೆ ಮತ್ತು ಸಮಾಜ ಸೇವೆ ವಿಭಾಗದಲ್ಲಿ ಕೈ ಜೋಡಿಸಿದ ಎಸ್.ಕೆ.ಮೋದಿ, ಧಾರ್ಮಿಕ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ನಿರಂತರ ಸೇವೆಗಾಗಿ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಚಂದ್ರಮೌಳೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ.

Advertisment

ನಾಳೆ ಶ್ರೀಕೃಷ್ಣದೇವರಾಯ ವಿವಿ ಆವರಣದಲ್ಲಿ ನಡೆಯುವ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಉಮಾಶ್ರೀ ಸೇರಿ ಮೂವರಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment