newsfirstkannada.com

ಬೇಂದ್ರೆಯವರ ಒಡನಾಡಿಯಾಗಿದ್ದ ಹಿರಿಯ ಸಾಹಿತಿ ಗುರುಲಿಂಗ ಕಾಪಸೆ ನಿಧನ

Share :

Published March 27, 2024 at 12:02pm

Update March 27, 2024 at 12:03pm

    96ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಹಿರಿಯ ಸಾಹಿತಿ ಗುರುಲಿಂಗ ಕಾಪಸೆ

    ಮರಾಠಿಯಿಂದ ಅನೇಕ ಕೃತಿಗಳನ್ನು ಕನ್ನಡ ಅನುವಾದ ಮಾಡಿದ ಸಾಹಿತಿ

    ಕನ್ನಡ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರೂ ಆಗಿದ್ದರು ಗುರುಲಿಂಗ ಕಾಪಸೆ

ಧಾರವಾಡ: ಹಿರಿಯ ಸಾಹಿತಿ ಗುರುಲಿಂಗ ಕಾಪಸೆ(96) ನಿಧನರಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ.

ನಾಡಿನ ಹೆಸರಾಂತ ಸಾಹಿತಿಯಾಗಿದ್ದ ಕಾಪಸೆ ಧಾರವಾಡ ಸಪ್ತಾಪುರ ದುರ್ಗಾ ಕಾಲೋನಿಯ ನಿವಾಸಿ. ಕನ್ನಡ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರೂ ಆಗಿದ್ದರು. ಮೂಲತಃ ಇವರು ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲೋಣಿ ಬಿಕೆ ಗ್ರಾಮದವರು.

ಮರಾಠಿಯಿಂದ ಕನ್ನಡಕ್ಕೆ ಅನುವಾದ

ಗುರುಲಿಂಗ ಕಾಪಸೆ 1928ರ ಎಪ್ರಿಲ್ 2ರಂದು ಜನಿಸಿದರು. ಈ ಸಾಹಿತಿ ಮಧುರ ಚೆನ್ನರ ಜೀವನ ಹಾಗೂ ಕೃತಿಗಳ ಕುರಿತು ಅಪಾರ ಅಧ್ಯಯನ ಮಾಡಿದರು. ಮಧುರ ಚೆನ್ನರ ಕುರಿತಾಗಿಯೇ ಮಹಾಪ್ರಬಂಧ ರಚಸಿದ್ದಾರೆ. ಮಧುರ ಚೆನ್ನ, ಅಕ್ಕಮಹಾದೇವಿ, ಅರವಿಂದರು, ಬಸವೇಶ್ವರ, ಹಲಸಂಗಿ ಗೆಳೆಯರು ಇವರ ಪ್ರಮುಖ ಕೃತಿಗಳು. ಮರಾಠಿಯಿಂದ ಅನೇಕ ಕೃತಿಗಳನ್ನು ಕನ್ನಡ ಅನುವಾದ ಮಾಡಿದ್ದಾರೆ. ಮಕ್ಕಳ ಸಾಹಿತ್ಯದಲ್ಲಿ ಅನೇಕ ಕೃತಿಗಳ ರಚನೆ ಮಾಡಿದ್ದಾರೆ.

ಶಿಕ್ಷಕರಾಗಿ ಸೇವೆ ಆರಂಭ

ಗುರುಲಿಂಗ ಕಾಪಸೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಬೇಂದ್ರೆ, ಮಧುರ ಚೆನ್ನ ಸೇರಿದಂತೆ ಪ್ರಖ್ಯಾತ ಸಾಹಿತಿಗಳ ಒಡನಾಡಿಯಾಗಿದ್ದ ಕಾಪಸೆ 1945ರಲ್ಲಿ ತಮ್ಮ 18ನೇ ವಯಸ್ಸಿನಲ್ಲಿಯೇ ತಮ್ಮೂರಿನಲ್ಲಿ ಶಿಕ್ಷಕರಾಗಿ ಸೇವೆ ಆರಂಭಿಸಿದರು. ಕಾಲಾಂತರದಲ್ಲಿ ಧಾರವಾಡಕ್ಕೆ ಬಂದು ನೆಲೆಸಿದರು.

ಇದನ್ನೂ ಓದಿ: ತೋಳಗಳ ದಾಳಿ; 21 ಕುರಿಮರಿ, 10 ಮೇಕೆ ಮರಿಗಳು ಸಾವು

ಇಂದು ಮಧ್ಯಾಹ್ನ 2ರವರೆಗೆ ಗುರುಲಿಂಗ ಕಾಪಸೆ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ದುರ್ಗಾ ಕಾಲೋನಿಯ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೇಂದ್ರೆಯವರ ಒಡನಾಡಿಯಾಗಿದ್ದ ಹಿರಿಯ ಸಾಹಿತಿ ಗುರುಲಿಂಗ ಕಾಪಸೆ ನಿಧನ

https://newsfirstlive.com/wp-content/uploads/2024/03/Gurulinga-kapase.jpg

Load More