/newsfirstlive-kannada/media/post_attachments/wp-content/uploads/2024/08/Uttarpradesh-Serial-Killer.jpg)
ಲಖನೌ: ಅಬ್ಬಾ.. 14 ತಿಂಗಳಲ್ಲಿ ಒಂದೇ ರೀತಿಯಲ್ಲಿ 9 ಮಹಿಳೆಯರ ಬರ್ಬರ ಹತ್ಯೆ. ಕಬ್ಬಿನ ಗದ್ದೆಗಳಲ್ಲಿ ಒಂಟಿಯಾಗಿ ಕೆಲಸ ಮಾಡುವ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಕೊಲೆ ಮಾಡುತ್ತಿದ್ದ ಸೀರಿಯಲ್ ಕಿಲ್ಲರ್ ಅನ್ನು ಬಂಧಿಸುವಲ್ಲಿ ಉತ್ತರಪ್ರದೇಶ ಪೊಲೀಸರು ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಮೈ ಮೇಲೆ ಸೀರೆ ಇರಲ್ಲ, ಆದ್ರೂ ರೇಪ್ ಆಗಿರಲ್ಲ; ಒಂದೇ ರೀತಿ 9 ಮಹಿಳೆಯರ ಹತ್ಯೆ; ಬೆಚ್ಚಿ ಬೀಳಿಸಿದ ಸ್ಯಾರಿ ಕಿಲ್ಲರ್!
ಉತ್ತರಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಈ ವಿಕೃತ ಹತ್ಯಾ ಸರಣಿ ನಡೆದಿದ್ದು, ಹಂತಕನನ್ನು ಹುಡುಕುವುದೇ ಪೊಲೀಸರಿಗೆ ಅತಿದೊಡ್ಡ ಸವಾಲಾಗಿತ್ತು. ಕೊಲೆಗಾರನ ಗುರುತು ಪತ್ತೆ ಹಚ್ಚಲು ಪೊಲೀಸರು ರೇಖಾಚಿತ್ರ ಬಿಡುಗಡೆ ಮಾಡಿದ್ದರು. 300 ಜನ ಪೊಲೀಸರನ್ನು ನಿಯೋಜಿಸಿ ಸರಣಿ ಹತ್ಯೆ ರಹಸ್ಯ ಬೇಧಿಸಲು ಪೊಲೀಸರು ಮುಂದಾಗಿದ್ದರು. ಇದೀಗ ಸೀರಿಯಲ್ ಕಿಲ್ಲರ್ ಆರೋಪಿ ಕುಲದೀಪ್ ಅನ್ನು ಬರೇಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯು ಮಹಿಳೆಯರ ಸೀರೆಯಿಂದಲೇ ಅವರ ಕುತ್ತಿಗೆ ಬಿಗಿದು ಹತ್ಯೆ ಮಾಡುತ್ತಿದ್ದ. ಕಬ್ಬಿನ ಗದ್ದೆಗಳಲ್ಲಿ ಒಂಟಿಯಾಗಿ ಕೆಲಸ ಮಾಡುವ ಮಹಿಳೆಯರನ್ನೇ ಗುರಿಯಾಗಿಸಿ ಸರಣಿ ಹತ್ಯೆ ನಡೆದಿತ್ತು. 14 ತಿಂಗಳಲ್ಲಿ 9 ಮಂದಿ ಮಹಿಳೆಯರನ್ನು ಒಂದೇ ರೀತಿ ಕೊಲೆ ಮಾಡಿ ಆರೋಪಿ ಪರಾರಿಯಾಗುತ್ತಿದ್ದ. ಕಳೆದ 14 ತಿಂಗಳಿನಿಂದ ನಿಗೂಢ ಕೊಲೆಗಳನ್ನು ಭೇದಿಸಲಾಗದೇ ಪರದಾಡಿದ್ದ ಪೊಲೀಸರು ಕೊನೆಗೂ ಹಂತಕನನ್ನು ಸೆರೆ ಹಿಡಿದಿದ್ದಾರೆ.
ಇದನ್ನೂ ಓದಿ: ಫಸ್ಟ್ ನೈಟ್‌ನಲ್ಲೇ ಮಚ್ಚಿನಿಂದ ಹೊಡೆದಾಟ.. ವಧು-ವರರ ಸಾವಿನ ಕೇಸ್‌ಗೆ ಹೊಸ ಟ್ವಿಸ್ಟ್; ಅಸಲಿಗೆ ಆಗಿದ್ದೇನು?
ಕುಲದೀಪ್ ಕೊಲೆಗೆ ಕಾರಣವೇನು?
9 ಮಹಿಳೆಯರನ್ನು ಕೊಲೆ ಮಾಡಿರುವ ಸರಣಿ ಹಂತಕ ಕುಲದೀಪ್‌ಗೆ ಮದುವೆಯಾಗಿತ್ತು. ಹೆಂಡತಿಯು ಗಂಡನನ್ನು ಬಿಟ್ಟು ತವರು ಮನೆಗೆ ಹೊರಟು ಹೋಗಿದ್ದಳು. ಹೆಂಡತಿಯಿಂದ ದೂರವಾದ ಕುಲದೀಪ್ ಮಾನಸಿಕವಾಗಿ ವಿಕೃತನಾಗಿದ್ದ. ಹೆಂಡತಿ ಬಿಟ್ಟು ಹೋಗಿದ್ದಕ್ಕೆ ಮಹಿಳೆಯರ ಮೇಲೆ ಸಿಟ್ಟಾಗಿದ್ದ ಕುಲದೀಪ್, ಈ ಸಿಟ್ಟಿನಿಂದಲೇ ಕಬ್ಬಿನ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರಪ್ರದೇಶದ ಬರೇಲಿ ಜಿಲ್ಲೆಯ 2 ಪೊಲೀಸ್ ಠಾಣೆಯ ವ್ಯಾಪ್ತಿಯ 25 ಕಿಮೀ ವ್ಯಾಪ್ತಿಯಲ್ಲಿ 9 ಮಹಿಳೆಯರನ್ನು ಹತ್ಯೆ ಮಾಡಲಾಗಿತ್ತು. ಕಬ್ಬಿನ ಗದ್ದೆಯಲ್ಲಿ ಕೊಲೆ ಮಾಡುತ್ತಿದ್ದ ಕುಲದೀಪ್, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ರೇಪ್ ನಡೆಸುತ್ತಿರಲಿಲ್ಲ. ಆರೋಪಿ ಕುಲದೀಪ್ ಮಹಿಳೆಯರ ಓಲೆ, ಜುಮಕಿ, ಯಾವುದಾದರೂ ಬಟ್ಟೆಯನ್ನು ಮಾತ್ರ ತೆಗೆದುಕೊಂಡು ಹೋಗುತ್ತಿದ್ದ.
Serial killer arrested in Bareilly, UP, killed 10 women in the same manner in 14 months...Police had released its sketch two days ago.@Uppolice#BareillySerialKiller#Bareilly#bareillypolice#Serialkillerpic.twitter.com/p2y6PTzAwf
— Ravi Pandey?? (@ravipandey2643)
Serial killer arrested in Bareilly, UP, killed 10 women in the same manner in 14 months...Police had released its sketch two days ago.@Uppolice#BareillySerialKiller#Bareilly#bareillypolice#Serialkillerpic.twitter.com/p2y6PTzAwf
— Ravi Pandey🇮🇳 (@ravipandey2643) August 9, 2024
">August 9, 2024
ಈಗ 9 ನಿಗೂಢ ಮಹಿಳೆಯರ ಕೊಲೆ ರಹಸ್ಯ ಭೇದಿಸುವಲ್ಲಿ ಬರೇಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿ ಕುಲದೀಪ್ ಅನ್ನು ಹತ್ಯೆ ನಡೆದ ಕಬ್ಬಿನ ಗದ್ದೆಗೆ ಕರೆದೊಯ್ದು ಕೊಲೆ ಮಾಡಿದ ರೀತಿಯ ಮರುಸೃಷ್ಟಿ ಹಾಗೂ ಸ್ಥಳ ಮಹಜರು ಮಾಡಿದ್ದಾರೆ. ಹಂತಕ ಪೊಲೀಸರ ಮುಂದೆ ಮಹಿಳೆಯರ ದೇಹದ ಮೇಲೆ ಕುಳಿತು ಸೀರೆಯಿಂದ ಕುತ್ತಿಗೆಯನ್ನು ಬಿಗಿದು ಹತ್ಯೆ ಮಾಡುತ್ತಿದ್ದ ಮಾದರಿಯನ್ನು ರಿಹರ್ಸಲ್‌ನಲ್ಲಿ ತೋರಿಸಿದ್ದಾನೆ.
ಆರೋಪಿ ಕುಲದೀಪ್‌ಗೆ ಮಲತಾಯಿ ಕೂಡ ಇದ್ದರು. ಮಲತಾಯಿಯ ಹಿಂಸೆಯಿಂದ ನೊಂದಿದ್ದ ಇವನಿಗೆ ಹೆಂಡತಿಯೂ ಬಿಟ್ಟು ಹೋಗಿದ್ದಳು. ಮಲತಾಯಿ ಮತ್ತು ಹೆಂಡತಿ ಮೋಸದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಅನ್ನೋ ಸತ್ಯ ಪೊಲೀಸರ ತನಿಖೆಯಿಂದ ಬಯಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ