/newsfirstlive-kannada/media/media_files/2025/10/08/kumar-2025-10-08-13-51-02.jpg)
ರಾಮನಗರ: ಜಾಲಿವುಡ್ ಸ್ಟುಡಿಯೋ ತ್ಯಾಜ್ಯ ನೀರನ್ನು ಸಂಸ್ಕರಿಸದೆ ಚರಂಡಿಗೆ ಹರಿಸಿದ ನೀರು ಬಿಡದಿ ಬಳಿಯ ವೃಷಭಾವತಿಪುತ ಕೆರೆಗೆ ಸೇರಿದ್ದು, ಈ ನೀರನ್ನು ಕುಡಿದ ಸುಮಾರು ಹತ್ತಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ ಎಂದು ಸ್ಥಳೀಯರೊಬ್ಬರು ಆರೋಪ ಮಾಡಿದ್ದಾರೆ.
15 ದಿನಗಳ ಹಿಂದೆಯೇ ಪ್ರಶ್ನೆ ಮಾಡಿದ್ವಿ..!
ಈ ಕುರಿತು ಸ್ಥಳೀಯರಾದ ಕುಮಾರ್ ಮಾತನಾಡಿದ್ದು, ಜಾಲಿವುಡ್​ಗಿಂತ ಮೊದಲು ಫಿಲ್ಮ್ ಸಿಟಿ ಇತ್ತು. ಬಳಿಕ ಜಾಲಿವುಡ್ ಸ್ಟುಡಿಯೋ ನಿರ್ಮಾಣವಾಯ್ತು. 15 ದಿನಗಳ ಹಿಂದೆಯೇ ಈ ಕುರಿತು ಪ್ರಶ್ನೆ ಮಾಡಲಾಗಿತ್ತು. ನೀರು ಬಿಡುವುದನ್ನು ನಿಲ್ಲಿಸುತ್ತೇವೆ ಎಂದಿದ್ದರೇ ಹೊರತು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದ್ರೀಗ ನಿಯಮ ಉಲ್ಲಂಘದಡಿ ಬೀಗ ಹಾಕಿದ್ದಾರೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ತ್ಯಾಜ್ಯ ನೀರನ್ನು ಬಿಡಬಾರದು ಎಂದು ಆಗ್ರಹಿಸಿದ್ದಾರೆ.