/newsfirstlive-kannada/media/media_files/2025/09/28/bigg-boss-house-6-2025-09-28-15-04-44.jpg)
ರಾಮನಗರ: ಜಾಲಿವುಡ್​ ಮನವಿಯನ್ನು ಪುರಸ್ಕರಿಸಿ, ಅವರ ಮನವಿಯನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಿಟ್ಟಿದ್ದೇನೆ ಎಂದು ರಾಮನಗರ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಹೇಳಿದ್ದಾರೆ. ಆ ಮೂಲಕ ಬಿಗ್​ಬಾಸ್​ ಶೋಗೆ ಕೊಂಚ ರಿಲೀಫ್ ಸಿಕ್ಕಂತಾಗಿದ್ದು, ಮಾಲೀನ್ಯ ನಿಯಂತ್ರಣ ಮಂಡಳಿಯ ನಿರ್ಧಾರದ ಮೇಲೆ ಬಿಗ್​ಬಾಸ್ ಶೋನ ಭವಿಷ್ಯ ನಿಂತಿದೆ.
ನಿನ್ನೆ ಸಂಜೆ ಜಾಲಿವುಡ್ ಸ್ಟುಡಿಯೋಗೆ ರಾಮನಗರ ತಾಲೂಕು ಆಡಳಿತ ಬೀಗ ಜಡಿದಿತ್ತು. ಇದರಿಂದ ಬಿಗ್​ಬಾಸ್​ ಶೋ ನಿಲ್ಲುವ ಆತಂಕ ಎದುರಾಗಿತ್ತು. ರಾಜ್ಯಾದ್ಯಂತ ಭಾರೀ ಸಂಚಲ ಆಗುತ್ತಿದ್ದಂತೆಯೇ ಜಾಲಿವುಡ್ ಸ್ಟುಡಿಯೋ ಸಿಬ್ಬಂದಿ ಇಂದು ಬೆಳಗ್ಗೆ ರಾಮನಗರ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ದರು.
ಇದನ್ನೂ ಓದಿ: ಬಿಗ್​ಬಾಸ್​ಗೆ ಬೀಗ.. ಸರ್ಕಾರಕ್ಕೆ 9 ಪ್ರಶ್ನೆ ಕೇಳಿದ ಜೆಡಿಎಸ್​..!
ಮನವಿ ಸ್ವೀಕರಿಸಿ ಮಾತನಾಡಿರುವ ಜಿಲ್ಲಾಧಿಕಾರಿ.. ಜಾಲಿವುಡ್ ಸ್ಟುಡಿಯೋ 10 ದಿನ ಕಾಲಾವಕಾಶ ಕೇಳಿದೆ. ಆಗಿರುವ ತಪ್ಪುಗಳನ್ನ ಸರಿಪಡಿಸಿಕೊಳ್ಳುತ್ತೇನೆ ಎಂದು ಮನವಿ ಮಾಡಿದೆ. ಮನವಿ ಪುರಸ್ಕರಿಸಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಆ ಮನವಿಯನ್ನು ವರ್ಗಾವಣೆ ಮಾಡಿದ್ದೇನೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಿಟ್ಟಿದ್ದೇನೆ ಎಂದು ಯಶವಂರ್ ವಿ ಗುರುಕರ್ ಹೇಳಿದ್ದಾರೆ.
ಜಾಲಿವುಡ್ ಮನವಿ ಏನು..?
ನಾವು ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನ ಪಾಲನೆ ಮಾಡ್ತೇವೆ. ವೆಲ್ಸ್ ಸ್ಟುಡಿಯೋದಲ್ಲಿ ನೂರಾರು ಜನ ಸಿಬ್ಬಂದಿ ಕೆಲಸ ಮಾಡ್ತಿದ್ದಾರೆ. ಏಕಾಏಕಿ ಬೀಗ ಹಾಕಿರುವ ಕಾರಣ ನೂರಾರು ಜನರ ಭವಿಷ್ಯ ಅತಂತ್ರವಾಗಿದೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಬಿಗ್ ಬಾಸ್ ಶೋ ನಡೆಸಲಾಗುತ್ತಿದೆ. ಹಠಾತ್ ಸ್ಥಗಿತಗೊಳಿಸಿದ ಕಾರಣ ನಷ್ಟವಾಗಿದೆ. ನೀವು 15 ದಿನಗಳ ಕಾಲಾವಕಾಶ ಕೊಡಬೇಕು. 15 ದಿನದೊಳಗೆ ಎಲ್ಲಾ ಅನುಮತಿಗಳನ್ನ ಪಡೆದುಕೊಳ್ಳುತ್ತೇವೆ.
-ಜಾಲಿವುಡ್ ಸ್ಟುಡಿಯೋ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ