/newsfirstlive-kannada/media/media_files/2026/01/19/gilli-nata-31-2026-01-19-11-13-13.jpg)
ಬಿಗ್ ಬಾಸ್ ಸೀಸನ್​ 12ಕ್ಕೆ ಅದ್ದೂರಿ ತೆರೆ ಬಿದ್ದಿದೆ. ಗಿಲ್ಲಿ ನಟ ಬಿಗ್​ ಬಾಸ್​ ವಿನ್ನರ್ ಆದ್ರೆ, ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ. ಬಿಗ್ ಮನೆಯಲ್ಲಿ 112 ದಿನಗಳ ಕಾಲ ನಡೆದ ಮನರಂಜನೆಯ ಜಾತ್ರೆ ಆ ಮೂಲಕ ಅಂತ್ಯಗೊಂಡಿದೆ.
ಗಿಲ್ಲಿ ಗೆದ್ದ ಬಹುಮಾನ ಎಷ್ಟು..?
ವಿನ್ನರ್ ಗಿಲ್ಲಿ ನಟ ಬಿಗ್​ ಬಾಸ್ ಕಡೆಯಿಂದ ಒಟ್ಟು 50 ಲಕ್ಷ ರೂಪಾಯಿ ಸಿಗಲಿದೆ. ಇನ್ನು ಕಿಚ್ಚ ಸುದೀಪ್ ಅವರು ವೈಯಕ್ತಿಕವಾಗಿ 10 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಿದ್ದಾರೆ. ಇನ್ನು ಗಿಲ್ಲಿ ಗೆದ್ದರೆ ಶರವಣ 20 ಲಕ್ಷ ನೀಡೋದಾಗಿ ಘೋಷಿಸಿದ್ದಾರೆ. ಜೊತೆಗೆ 20 ಲಕ್ಷ ಮೌಲ್ಯದ ಮಾರುತಿ ಸುಜುಕಿ ವಿಕ್ಟೋರಿಸ್ ಕಾರು ಕೂಡ ಅವರಿಗೆ ಸಿಗಲಿದೆ.
ಕೈಗೆ ಸಿಗುವ ಹಣ ಎಷ್ಟು..?
ಬಿಗ್​ ಬಾಸ್ ವೇದಿಕೆಯಲ್ಲಿ 50 ಲಕ್ಷ ರೂಪಾಯಿ ಚೆಕ್ ಪಡೆದಿರುವ ಗಿಲ್ಲಿಗೆ, ಅಷ್ಟೂ ಮೊತ್ತ ಸಿಗೋದಿಲ್ಲ. ಅದರಲ್ಲಿ ಅಲ್ಪ ಹಣ ತೆರಿಗೆಗೆ ಕಟ್ ಆಗಲಿದೆ. ಒಟ್ಟು ಹಣದಲ್ಲಿ ಶೇಕಡಾ 30 ರಷ್ಟು ಟ್ಯಾಕ್ಸ್​ ರೂಪದಲ್ಲಿ ಸರ್ಕಾರಕ್ಕೆ ಸೇರಲಿದೆ. 15 ಲಕ್ಷ ರೂಪಾಯಿ ನೇರ ತೆರಿಗೆ ಮತ್ತು ತೆರಿಗೆ ಮೊತ್ತದ ಮೇಲೆ ಶೇಕಡಾ 4 ರಷ್ಟು ಆರೋಗ್ಯ ಮತ್ತು ಶಿಕ್ಷಣ ಸೆಸ್ ಗೆ ಎಂದು 60 ಸಾವಿರದಂತೆ ಒಟ್ಟು 15.6 ರಷ್ಟು ತೆರಿಗೆಯಾಗಿ ಹೋಗಲಿದೆ. ಎಲ್ಲಾ ತೆರಿಗೆ ಕಡಿತದ ನಂತರ 50 ಲಕ್ಷ ರೂಪಾಯಿನಲ್ಲಿ ಗಿಲ್ಲಿಗೆ 34.4 ಲಕ್ಷ ರೂಪಾಯಿ ಮಾತ್ರ ಕೈಗೆ ಸಿಗಲಿದೆ.
ಇನ್ನು, ಸುದೀಪ್ ಹಾಗೂ ಶರಣವ ಘೋಷಣೆ ಮಾಡಿರುವ ಹಣದಲ್ಲೂ ಕೂಡ ಟ್ಯಾಕ್ಸ್ ಕಟ್ ಆಗಲಿದೆ. ಇನ್ನು ರನ್ನರ್ ಅಪ್ ರಕ್ಷಿತಾ ಶೆಟ್ಟಿ ಗೆದ್ದ 25 ಲಕ್ಷ ರೂಪಾಯಿ ಹಣದಲ್ಲಿ ಸರ್ಕಾರದ ಟ್ಯಾಕ್ಸ್ ಕಟ್ ಆಗಿ 17,50,000 ರೂಪಾಯಿ ಸಿಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us