Advertisment

ಸೀರಿಯಲ್ ಪ್ರಿಯರಿಗೆ ಗುಡ್​​ನ್ಯೂಸ್.. ಆದಿಲಕ್ಷ್ಮೀ ಪುರಾಣಕ್ಕೆ ಮುಹೂರ್ತ ಫಿಕ್ಸ್..!

ಜೀ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ಬರೋದಕ್ಕೆ ಭರ್ಜರಿ ತಯಾರಿ ನಡೀತಿದೆ. ಕಿರುತೆರೆಯಲ್ಲಿ ಸಾಲು ಸಾಲು ಸೂಪರ್​ ಹಿಟ್​ ಧಾರಾವಾಹಿಗಳನ್ನ ಕೊಡುಗೆ ನೀಡಿರೋ ಸಂತೋಷ್​ ಕೋಟಿ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಆದಿಲಕ್ಷ್ಮೀ ಪುರಾಣ ಶೂಟಿಂಗ್​ ಭರದಿಂದ ಸಾಗ್ತಿದೆ.

author-image
Ganesh Kerekuli
Aadilaxmi purana
Advertisment

ಜೀ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ಬರೋದಕ್ಕೆ ಭರ್ಜರಿ ತಯಾರಿ ನಡೀತಿದೆ. ಅದೇ ಆದಿಲಕ್ಷ್ಮೀ ಪುರಾಣ..

Advertisment

ಟೈಟಲ್​ನಲ್ಲೇ ಹೇಳುವಂತೆ ಇದೊಂದು ನಾಯಕಿ ಪ್ರಧಾನ ಕಥೆ ಹೊಂದಿದ್ದು, ತುಂಬು ಕುಟುಂಬಕ್ಕೆ ಪ್ರೀತಿಯ ತೋರಣ ಕಟ್ಟೋ ಚಲುವೆ ನಟಿ ಆಶಾ ಅಯ್ಯನರ್​. ನಾಯಕನಟ ರಜನೀಶ್​ ಹಾಗೂ ಆಶಾ ಜೋಡಿಯಾಗಿ ಮುದ್ದಾಗಿ ಕಾಣ್ತಿದ್ದಾರೆ.

ಇದನ್ನೂ ಓದಿ: ಗಿಲ್ಲಿ ಕೌಂಟರ್ ಮುಂದೆ ರಜತ್, ಚೈತ್ರಾ ಟುಸ್.. ಬಿಗ್​ ಬಾಸ್​ ಸಿಕ್ರೇಟ್ ಏನು..? ​

Aadilaxmi purana (1)

ಕಿರುತೆರೆಯಲ್ಲಿ ಸಾಲು ಸಾಲು ಸೂಪರ್​ ಹಿಟ್​ ಧಾರಾವಾಹಿಗಳನ್ನ ಕೊಡುಗೆ ನೀಡಿರೋ ಸಂತೋಷ್​ ಕೋಟಿ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಆದಿಲಕ್ಷ್ಮೀ ಪುರಾಣ ಶೂಟಿಂಗ್​ ಭರದಿಂದ ಸಾಗ್ತಿದೆ. 
ವಿಶೇಷ ಅಂದ್ರೇ ಲಕ್ಷ್ಮೀ ಬಾರಮ್ಮದಲ್ಲಿ ಕಾವೇರಿ ಪಾತ್ರ ನಿಭಾಯಿಸಿದ್ದ ಸುಷ್ಮಾ ನಾಣಯ್ಯ ಆದಿಲಕ್ಷ್ಮೀ ಪುರಾಣದಲ್ಲಿ ಪ್ರಮುಖ ಪಾತ್ರ ಮಾಡ್ತಿದ್ದಾರೆ. ಈ ಮೂಲಕ ಅತ್ತೆ-ಸೊಸೆ ಅಂದ್ರೇ ಪೂಜಾ ಪಾತ್ರ ಮಾಡಿದ್ದ ಆಶಾ ಹಾಗೂ ಕಾವೇರಿ ಪಾತ್ರ ಮಾಡಿದ್ದ ಸುಷ್ಮಾ ಕಾಂಬಿನೇಷನ್​ ಮತ್ತೆ ಒಂದಾಗ್ತಿದೆ.

Advertisment

ಉಳಿದಂತೆ ತಾರಾಬಳಗದಲ್ಲಿ ದೀಪಾ ಕಟ್ಟೆ, ಸುಮೋಕ್ಷಾ, ರಕ್ಷಿತಾ, ಭವ್ಯಾ ಪೂಜೆರಿ, ಅಶೋಕ್​ ಶರ್ಮಾ, ಮಾಲತಿ ಸರ್​ದೇಶಪಾಂಡೆ, ಭಾಗ್ಯಶ್ರೀ, ರಶ್ಮಿ ಗೌಡ, ಗ್ರೀಷ್ಮಾ ಸೇರಿದಂತೆ ದೊಡ್ಡ ಕಲಾವಿದರ ದಂಡೇ ಇದ್ದು ಆದಿಲಕ್ಷ್ಮೀ ಪುರಾಣ ಭರವಸೆ ಮೂಡಿಸಿದೆ. 

ಇದೇ ಡಿಸೆಂಬರ್​ 8 ರಿಂದ ರಾತ್ರಿ 9 ಗಂಟೆಗೆ ಆದಿಲಕ್ಷ್ಮೀ ಪುರಾಣ ಪ್ರಸಾರವಾಗ್ತಿದ್ದು, ಈ ಸಮಯದಲ್ಲಿದ್ದ ಶ್ರೀ ರಾಘವೇಂದ್ರ ಮಹಾತ್ಮೆ ಡಿಸೆಂಬರ್ 6 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ.

ಇನ್ನಷ್ಟು ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

aadi lakshmi purana
Advertisment
Advertisment
Advertisment