Advertisment

ಗಿಲ್ಲಿ ಕೌಂಟರ್ ಮುಂದೆ ರಜತ್, ಚೈತ್ರಾ ಟುಸ್.. ಬಿಗ್​ ಬಾಸ್​ ಸಿಕ್ರೇಟ್ ಏನು..? ​

ಈ ಬಾರಿಯ ಬಿಗ್​ ಬಾಸ್ ಮನೆ ಹಲವು ಸರ್​ಪ್ರೈಸ್​ಗಳ ಮೂಲಕ ಕೂಡಿದೆ. ​"Expect The Unexpected.." ಅಡಿ ಬರಹಕ್ಕೆ ಸರಿಯಾಗಿ ಬಿಗ್​ ಬಾಸ್​ ಮಂದಿಗೆ ಶಾಕ್​ ಮೇಲೆ ಶಾಕ್​ ಕೊಡ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ವೈಲ್ಡ್​ ಕಾರ್ಡ್ ಎಂಟ್ರಿ. ​

author-image
Ganesh Kerekuli
Chaitra and Rajat
Advertisment

ಈ ಬಾರಿಯ ಬಿಗ್​ ಬಾಸ್ ಮನೆ ಹಲವು ಸರ್​ಪ್ರೈಸ್​ಗಳ ಮೂಲಕ ಕೂಡಿದೆ. ​"Expect The Unexpected.." ಅಡಿ ಬರಹಕ್ಕೆ ಸರಿಯಾಗಿ ಬಿಗ್​ ಬಾಸ್​ ಮಂದಿಗೆ ಶಾಕ್​ ಮೇಲೆ ಶಾಕ್​ ಕೊಡ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ವೈಲ್ಡ್​ ಕಾರ್ಡ್ ಎಂಟ್ರಿ.  ​ 

Advertisment

ಕಳೆದ ಸೀಸನ್​ನಲ್ಲಿಯೂ ವೈಲ್ಡ್ ಕಾರ್ಡ್ ಮೂಲಕ ಬಿಗ್​ ಬಾಸ್​ ಮನೆಗೆ ಕಾಲಿಟ್ಟ ರಜತ್​, ಟಾಪ್​ ಫೈ ಸ್ಪರ್ಧಿ ಆಗಿ ಧೂಳ್​ ಎಬ್ಬಸಿದ್ದರು. ಈ ಬಾರಿಯೂ ವೈಲ್ಡ್​ ಕಾರ್ಡ್​ ಆಗಿ ಎಂಟ್ರಿ ಕೊಟ್ಟಿರೋದು ಕುತೂಹಲಕ್ಕೆ ಕಾರಣವಾಗಿದೆ. ಇದ್ರ ಹಿಂದೆ ಸೀಕ್ರೆಟ್​ ಇದ್ದಂತಿದೆ.

ಇದನ್ನೂ ಓದಿ: ನೆಗೆಟೀವ್ ಟ್ರೋಲ್ ಬಗ್ಗೆ ನನಗೆ ಮೊದಲೇ ಗೊತ್ತಿತ್ತು.. ಜಾನ್ವಿ ಯಾಕೆ ಹೀಗೆ ಹೇಳಿದರು..? VIDEO

ಬಿಗ್​ ಬಾಸ್​ ಮನೆಯ ಫೈಯರ್​ ಬ್ರ್ಯಾಂಡ್​ ಅಂತಲೇ ಹೆಸರು ಮಾಡಿದವರು ಚೈತ್ರಾ ಕುಂದಾಪುರ. ಇವ್ರ ಬಾಸ್​ ಆದ್ರೇ ರಜತ್​ ಶಿಷ್ಯ. ಇವ್ರ ಇಬ್ಬರ ಕಾಂಬಿನೇಷನ್​ ಕಳೆದ ಬಾರಿ ಸಖತ್ ಸೌಂಡ್ ಮಾಡಿತ್ತು. ಈ ಬಾರಿ ಅದ್ಯಾಕೋ ಈ ಬಾಂಬ್​ಗಳ ಸೌಂಡ್​ ಕಮ್ಮಿ ಆದಂತಿದೆ. ಗಿಲ್ಲಿ ಕೊಡ್ತಿರೋ ಕೌಂಟರ್​ಗೆ ಟುಸ್​ ಅಂತಿವೆ ಎಂಬ ಟಾಕ್​ ಶುರುವಾಗಿದೆ.

Advertisment

ಇಬ್ಬರೂ ಹೇಗೆ ಪರ್ಫಾಮನ್ಸ್ ಮಾಡ್ತಾರೆ ಅನ್ನೋದನ್ನ ಎರಡೇ ದಿನಕ್ಕೆ ಡಿಸೈಡ್​ ಮಾಡೋಕೆ ಆಗಲ್ಲ. ಇನ್ನೇರಡು ದಿನ ಕಳೆದ್ರೇ ಹೇಗೆ. ಏನು ಅಂತ ಗೊತ್ತಾಗುತ್ತೆ. ಈಗ ವಿಚಾರ ಏನಂದ್ರೇ ಶನಿವಾರದ ಸಂಚಿಕೆಯಲ್ಲಿ ಕಿಚ್ಚ ಕೊಟ್ಟ ಸುಳಿವು ವೀಕ್ಷಕರ ತಲೆಯಲ್ಲಿ ಹುಳ ಬಿಟ್ಟಂಗ್​ ಆಗಿದೆ.
ಅವ್ರಿಬ್ಬರು ಅಂದ್ರೇ ಚೈತ್ರಾ ಹಾಗೂ ರಜತ್​.. ಒಳಗಡೆ ಇರೋದಕ್ಕೆ ಒಂದ್​ ಕಾರಣ ಇದೆ. ಆ ಟ್ವಿಸ್ಟ್​ ನಿಮಗೆ ಹೋಗ್ತಾ ಹೋಗ್ತಾ ಗೊತ್ತಾಗುತ್ತೆ ಎಂದಿದ್ದರು ಸುದೀಪ್​. ಇದರ ಅರ್ಥ ಮತ್ತೊಂದು ಏನು ಬಿಗ್​ ಸರ್​ಪ್ರೈಸ್​ ಎದುರು ನೋಡಿ ಎಂಬ ಸುಳಿವು ಕೊಟ್ಟಂತಿದೆ ಕಿಚ್ಚ. ಚೈತ್ರಾ ಹಾಗೂ ರಜತ್​ ನಿಜಕ್ಕೂ ಸ್ಪರ್ಧಿಗಳಾ? ಫಿನಾಲೆ ವರೆಗೂ ಇರ್ತಾರ? ಇಲ್ಲ ಡಲ್​ ಹೊಡಿತಿದ್ದ ಮನೆಗೆ ಎಚ್ಚರಿಕೆ ರೂಪದಲ್ಲಿ ಇವ್ರನ್ನ ಕರಿಸಿದ್ದಾರ ಬಿಗ್​ ಬಾಸ್​? ಈ ಎಲ್ಲಾ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ. ಕೂತಹಲದ ಕಣ್ಗಳ ಜೊತೆಗೆ ಬದಲಾವಣೆ ಆಗುತ್ತಾ ಇಲ್ವಾ ಕಾದು ನೋಡ್ಬೇಕು. 

ಇದನ್ನೂ ಓದಿ: ವಿಪಕ್ಷಗಳ ಕಣ್ಣು ಕುಕ್ಕಿದ ಸಿದ್ದು, ಡಿಕೆಶಿ ವಾಚ್.. ಹೀಗೂ ಉಂಟಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rajath kishan, Akshita Rajath Bigg Boss Kannada 12 Gilli Nata Bigg boss Ashwini Gowda Chaitra Kundapura
Advertisment
Advertisment
Advertisment