ನಟಿ ಕಾವ್ಯಗೌಡ vs ವಾರಗಿತ್ತಿ ಕಲಹ: ಸಿಸಿಟಿವಿ ಮೂಲಕ ‘ಅಸಲಿ ಸತ್ಯ’ ಬಿಚ್ಚಿಟ್ಟ ನಟಿ! VIDEO

ಕಿರುತೆರೆ ನಟಿ ಕಾವ್ಯಗೌಡ ಮತ್ತು ಅವರ ವಾರಗಿತ್ತಿ ಪ್ರೇಮಾ ನಡುವಿನ ಕೌಟುಂಬಿಕ ಕಲಹ ಬೀದಿಗೆ ಬಂದಿದ್ದು, ಇದೀಗ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಕಳೆದ ತಿಂಗಳು ನಟಿ ಕಾವ್ಯಗೌಡ ಮತ್ತು ಅವರ ಪತಿ ಸೋಮಶೇಖರ್ ವಿರುದ್ಧ ದೂರು ನೀಡಿದ್ದ ವಾರಗಿತ್ತಿಯ ಬಣ್ಣ ಬಯಲು ಮಾಡಲು ಕಾವ್ಯಗೌಡ ನಿರ್ಧರಿಸಿದ್ದಾರೆ.

author-image
Ganesh Kerekuli
Kavya Gowda
Advertisment

ಬೆಂಗಳೂರು: ಕಿರುತೆರೆ ನಟಿ ಕಾವ್ಯಗೌಡ (Kavya Gowda) ಮತ್ತು ಅವರ ವಾರಗಿತ್ತಿ ಪ್ರೇಮಾ ನಡುವಿನ ಕೌಟುಂಬಿಕ ಕಲಹ ಬೀದಿಗೆ ಬಂದಿದ್ದು, ಇದೀಗ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಕಳೆದ ತಿಂಗಳು ನಟಿ ಕಾವ್ಯಗೌಡ ಮತ್ತು ಅವರ ಪತಿ ಸೋಮಶೇಖರ್ ವಿರುದ್ಧ ದೂರು ನೀಡಿದ್ದ ವಾರಗಿತ್ತಿಯ ಬಣ್ಣ ಬಯಲು ಮಾಡಲು ಕಾವ್ಯಗೌಡ ನಿರ್ಧರಿಸಿದ್ದು, ಮನೆಯಲ್ಲಿ ನಡೆದ ದಾಂಧಲೆಯ ಸಿಸಿಟಿವಿ ದೃಶ್ಯಾವಳಿಗಳನ್ನು (CCTV Footage) ಬಿಡುಗಡೆ ಮಾಡಿದ್ದಾರೆ.

ಸಿಸಿಟಿವಿಯಲ್ಲೇನಿದೆ?

ನಟಿ ಕಾವ್ಯಗೌಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ವಾರಗಿತ್ತಿ ಪ್ರೇಮಾ ಅವರ ತಂಗಿ ಪ್ರಿಯಾ, ಕಾವ್ಯ ಅವರ ಮೇಲೆ ಹಲ್ಲೆ ನಡೆಸುತ್ತಿರುವುದು ಸೆರೆಯಾಗಿದೆ. ಮನೆಯ ಗೇಟ್ ಬಳಿ ಪ್ರಿಯಾ ಮತ್ತು ಕಾವ್ಯಗೌಡ ನಡುವೆ ತೀವ್ರ ವಾಗ್ವಾದ ನಡೆದು, ಜಡೆ ಜಗಳ ನಡೆದಿದೆ. ವಾರಗಿತ್ತಿ ಪ್ರೇಮಾ, ನಟಿ ಕಾವ್ಯ ಅವರ ಮೇಲೆ ಚಪ್ಪಲಿ ಎಸೆಯುತ್ತಿರುವ ದೃಶ್ಯವೂ ವಿಡಿಯೋದಲ್ಲಿದೆ. 

ಇದನ್ನೂ ಓದಿ: ದಶಕದಲ್ಲಿ 33 ಅಪ್ರಾಪ್ತ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ- ಉತ್ತರ ಪ್ರದೇಶದ ದಂಪತಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಕೋರ್ಟ್

Kavya Gowda (1)

‘ಕ್ರೂರ ಮುಖಗಳನ್ನು ಪರಿಚಯಿಸಬೇಕಿದೆ’

ಈ ಬಗ್ಗೆ ಇನ್​​ಸ್ಟಾಗ್ರಾಮ್​​ ಸ್ಟೋರಿಯಲ್ಲಿ ಬರೆದುಕೊಂಡಿರುವ ಕಾವ್ಯಗೌಡ, ‘ನೀವು ಇಲ್ಲಿಯವರೆಗೂ ಬರೀ 'ಒನ್ ಸೈಡ್' (One Side) ಕಥೆ ಮತ್ತು ಸುಳ್ಳು ಆರೋಪಗಳನ್ನು ಮಾತ್ರ ಕೇಳಿದ್ದೀರಿ. ಇದೀಗ ನಾನು ಸತ್ಯವನ್ನು ಹೊರಹಾಕಬೇಕು. ಈ ನಾಟಕದ ಹಿಂದಿರುವ ಕ್ರೂರ ಮುಖಗಳನ್ನು ನಾನು ಜನರಿಗೆ ತೋರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಯ ಹಿನ್ನೆಲೆ

ಕಳೆದ ತಿಂಗಳು ಕಾವ್ಯಗೌಡ ಅವರ ವಾರಗಿತ್ತಿ ಪ್ರೇಮಾ, ನಟಿ ಕಾವ್ಯ ಹಾಗೂ ಪತಿ ಸೋಮಶೇಖರ್ ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆ ಆರೋಪಗಳೆಲ್ಲವೂ ಸುಳ್ಳು ಎಂದು ಸಾಬೀತುಪಡಿಸಲು ಕಾವ್ಯಗೌಡ ಇದೀಗ ಸಾಕ್ಷ್ಯ ಸಮೇತ ಅಖಾಡಕ್ಕಿಳಿದಿದ್ದಾರೆ. ಪ್ರೇಮಾ ಮತ್ತು ಆಕೆಯ ತಂಗಿ ಪ್ರಿಯಾ ಅವರೇ ಮೊದಲು ಕ್ಯಾತೆ ತೆಗೆದು, ಹಲ್ಲೆ ನಡೆಸಿದ್ದಾರೆ ಎಂದು ಕಾವ್ಯ ಆರೋಪಿಸಿದ್ದಾರೆ. ಸದ್ಯ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಕರಣ ಮತ್ತಷ್ಟು ಕಾವು ಪಡೆದುಕೊಂಡಿದೆ.

ಇದನ್ನೂ ಓದಿ:ಇಂಡೋ-ಸೌತ್​ ಆಫ್ರಿಕಾ ಸೂಪರ್​-8 ಕದನ.. ಟೀಮ್ ಇಂಡಿಯಾ ಸ್ಟ್ರೆಂಥ್ ಏನು? ವೀಕ್ನೆಸ್ ಏನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

kavya gowda
Advertisment