ಇಂಡೋ-ಸೌತ್​ ಆಫ್ರಿಕಾ ಸೂಪರ್​-8 ಕದನ.. ಟೀಮ್ ಇಂಡಿಯಾ ಸ್ಟ್ರೆಂಥ್ ಏನು? ವೀಕ್ನೆಸ್ ಏನು?

ಟೀಮ್ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸೂಪರ್-8 ಪಂದ್ಯಕ್ಕೆ ಅಹ್ಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂ ಸಜ್ಜಾಗಿದೆ. ಪ್ರಸಕ್ತ ಟಿ-20 ವಿಶ್ವಕಪ್​ನಲ್ಲಿ ಸೋಲಿಲ್ಲದ ಸರದಾರರು ಎನಿಸಿಕೊಂಡಿರೋ ಇಂಡೋ, ಆಫ್ರಿಕಾ ತಂಡಗಳು, ರನ್​​ಭೂಮಿಯಲ್ಲಿ ಗೆಲುವಿಗಾಗಿ ಜಿದ್ದಾಜಿದ್ದಿ ಫೈಟ್ ನಡೆಸಲಿವೆ.

author-image
Ganesh Kerekuli
Team India (18)
Advertisment
  • ಲೀಗ್​ನಲ್ಲಿ ಇಂಡಿಯಾ, ಆಫ್ರಿಕಾ ಜಬರ್​ದಸ್ತ್ ಆಟ
  • ಅಹ್ಮದಾಬಾದ್​ನಲ್ಲಿ ನಂ.1 ತಂಡಕ್ಕೆ ಆಫ್ರಿಕಾ ಸವಾಲ್
  • ಆಫ್ರಿಕಾಕ್ಕೆ ಬ್ಯಾಟಿಂಗ್ ಟ್ರಬಲ್..! ಬೌಲಿಂಗ್ ಓಕೆ ಓಕೆ..!

ಟೀಮ್ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸೂಪರ್-8 ಪಂದ್ಯಕ್ಕೆ ಅಹ್ಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂ ಸಜ್ಜಾಗಿದೆ. ಪ್ರಸಕ್ತ ಟಿ-20 ವಿಶ್ವಕಪ್​ನಲ್ಲಿ ಸೋಲಿಲ್ಲದ ಸರದಾರರು ಎನಿಸಿಕೊಂಡಿರೋ ಇಂಡೋ, ಆಫ್ರಿಕಾ ತಂಡಗಳು, ರನ್​​ಭೂಮಿಯಲ್ಲಿ ಗೆಲುವಿಗಾಗಿ ಜಿದ್ದಾಜಿದ್ದಿ ಫೈಟ್ ನಡೆಸಲಿವೆ. ಇಂದಿನ ಪಂದ್ಯ ಗೆಲ್ಲೋ ಫೇವರಿಟ್ ತಂಡ ಯಾವುದು?

ಕ್ರಿಕೆಟ್ ಅಭಿಮಾನಿಗಳಿಗೆ, ಇಂದು ಹಬ್ಬವೋ ಹಬ್ಬ. ಯಾಕಂದ್ರೆ ಟಿ-20 ವಿಶ್ವಕಪ್​ನಲ್ಲಿ ಅಸಲಿ ಫೈಟ್ ಈಗಾಗಲೇ ಶುರುವಾಗಿದೆ. ಸೆಮಿಫೈನಲ್​​ ಮೇಲೆ ಕಣ್ಣಿಟ್ಟಿರುವ ತಂಡಗಳಿಗೆ, ಸೂಪರ್-8ನ ಪ್ರತಿ ಪಂದ್ಯವೂ ಅತ್ಯಂತ ಮಹತ್ವ. ಹಾಗಾಗಿ ಇಂದು ಅಹ್ಮದಾಬಾದ್​ನಲ್ಲಿ ಗೆಲುವಿಗಾಗಿ ಬಲಿಷ್ಟ ತಂಡಗಳ ನಡುವೆ ಬಿಗ್ ಫೈಟ್ ನಡೆಯಲಿದೆ. 

ಇದನ್ನೂ ಓದಿ: ಡೋನಾಲ್ಡ್ ಟ್ರಂಪ್‌ಗೆ ಗಾರ್ಡ್ ಸ್ಟೈಲ್ ಸೆಲ್ಯೂಟ್ ಹೊಡೆದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್‌ : ಪಾಕಿಸ್ತಾನಕ್ಕೆ ಮುಜುಗರ

team india (21)

ಟೀಮ್ ಇಂಡಿಯಾ, ಆಫ್ರಿಕಾ ಜಬರ್​ದಸ್ತ್ ಆಟ

ಟಿ-20 ವಿಶ್ವಕಪ್​ನ ಲೀಗ್ ಸ್ಟೇಜ್​ನಲ್ಲಿ ಟೀಮ್ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ಒಂದೇ ಒಂದು ಪಂದ್ಯವನ್ನ ಸೋತಿಲ್ಲ. ಆಡಿರೋ ಎಲ್ಲಾ 4 ಪಂದ್ಯಗಳನ್ನ ಗೆದ್ದಿರೋ ಉಭಯ ತಂಡಗಳು, ಸೂಪರ್​ ಏಯ್ಟ್​ನಲ್ಲೂ ಅದೇ ಗೆಲುವಿನ ಫಾರ್ಮ್​ ಮುಂದುವರೆಸುವ ವಿಶ್ವಾಸದಲ್ಲಿವೆ. ಜಬರ್​ದಸ್ತ್ ಪ್ರದರ್ಶನದಿಂದ ಕ್ರಿಕೆಟ್ ಅಭಿಮಾನಿಗಳನ್ನ ರಂಜಿಸಲು ಮುಂದಾಗಿವೆ.

ಅಹ್ಮದಾಬಾದ್​ನಲ್ಲಿ ನಂ.1 ತಂಡಕ್ಕೆ ದಕ್ಷಿಣ ಆಫ್ರಿಕಾ ಸವಾಲ್

ನರೇಂದ್ರ ಮೋದಿ ಸ್ಟೇಡಿಯಮ್​​ನಲ್ಲಿ ಟೀಮ್ ಇಂಡಿಯಾ, ಟಿ-20 ಕ್ರಿಕೆಟ್​ನಲ್ಲಿ ಅತ್ಯುತ್ತಮ ದಾಖಲೆ ಹೊಂದಿದೆ. ಸದ್ಯ ಟಿ-ಟ್ವೆಂಟಿ ಫಾರ್ಮೆಟ್​ನಲ್ಲಿ ಡಾಮಿನೇಟಿಂಗ್ ಪರ್ಫಾಮೆನ್ಸ್ ನೀಡ್ತಿರುವ ಸೂರ್ಯಕುಮಾರ್ ಯಾದವ್ ಪಡೆಗೆ, ಆಫ್ರಿಕಾ ಟಫ್​ಫೈಟ್ ನೀಡಲು ಮುಂದಾಗಿದೆ. ಆದ್ರೆ ನಂಬರ್.1 ತಂಡವನ್ನ ದಕ್ಷಿಣ ಆಫ್ರಿಕಾ ಮಣಿಸಲು ಎಕ್ಸ್ಟ್ರಾರ್ಡಿನರಿ ಪರ್ಫಾಮೆನ್ಸ್ ನೀಡಬೇಕು.  

ಸ್ಟ್ರೆಂಥ್ ಏನು..? ವೀಕ್ನೆಸ್ ಏನು..?

ಟೀಮ್ ಇಂಡಿಯಾ ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಬ್ಯಾಲೆನ್ಸ್ ಆಗಿದೆ. ಬ್ಯಾಟಿಂಗ್​ನಲ್ಲಿ ಒಂದೊಂದು ಪಂದ್ಯಕ್ಕೆ, ಒಬ್ಬೊಬ್ಬ ಆಟಗಾರ ಸ್ಟೆಪ್ ಇನ್ ಆಗ್ತಿದ್ದಾರೆ. ಇದು ತಂಡದ ಬ್ಯಾಟಿಂಗ್ ಬಲ ಹೆಚ್ಚಿಸಿದೆ. ಬೌಲಿಂಗ್​ನಲ್ಲಿ ಸೂರ್ಯ ಪಡೆಯ ಅಟ್ಯಾಕ್, ಇನ್ನು ಸ್ವಲ್ಪ ಇಂಪ್ರೂವ್ ಆಗಬೇಕಿದೆ. ಫೀಲ್ಡಿಂಗ್​ನಲ್ಲಿ ಟೀಮ್ ಇಂಡಿಯಾ ಈ ಹಿಂದೆಗಿಂತಲು ಕಳಪೆಯಾಗಿದೆ. ಇದೇ ಟೀಮ್ ಇಂಡಿಯಾದ ವೀಕ್ನೆಸ್. 

ಇದನ್ನೂ ಓದಿ:ದಶಕದಲ್ಲಿ 33 ಅಪ್ರಾಪ್ತ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ- ಉತ್ತರ ಪ್ರದೇಶದ ದಂಪತಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಕೋರ್ಟ್

Team India (18)

ಬೌಲಿಂಗ್ ಓಕೆ ಓಕೆ

ಸೌತ್ ಆಫ್ರಿಕಾ ತಂಡದಲ್ಲಿ ಟಿ-ಟ್ವೆಂಟಿ ಸ್ಪೆಷಲಿಸ್ಟ್ ಬ್ಯಾಟರ್ಸ್​​ಗೇನು ಕಡಿಮೆ ಇಲ್ಲ. ಆದ್ರೆ ಟಿ-ಟ್ವೆಂಟಿ ವಿಶ್ವಕಪ್​ನಲ್ಲಿ ಪರ್ಫಾಮ್ ಮಾಡ್ತಿರೋದು, ಒಬ್ಬರೋ ಇಬ್ಬರೋ..! ಬ್ಯಾಟಿಂಗ್ ಡೆಪ್ತ್ ಇದ್ರೂ, ಆಫ್ರಿಕಾ ತಂಡಕ್ಕೆ ಪ್ರಯೋಜನವಾಗ್ತಿಲ್ಲ. ಬೌಲಿಂಗ್​ನಲ್ಲಿ ಆಫ್ರಿಕಾ ತಂಡದಲ್ಲಿ ಕ್ವಾಲಿಟಿ ಪೇಸರ್​ಗಳಿದ್ದಾರೆ. ಆದ್ರೆ ತಂಡದಲ್ಲಿ ಕ್ವಾಲಿಟಿ ಸ್ಪಿನ್ನರ್​ಗಳಿಲ್ಲ. ಇದು ಆಫ್ರಿಕನ್ನರಿಗೆ ಚಿಂತೆಯನ್ನ ಉಂಟುಮಾಡಿದೆ. 

ಸಮರನಾ? ಪ್ರತಿಷ್ಟೆನಾ?

ವೆಸ್ಟ್​ ಇಂಡೀಸ್​​ನ ಬಾರ್ಬಡೋಸ್​ನಲ್ಲಿ ನಡೆದ 2024 ಟಿ-20 ವಿಶ್ವಕಪ್​ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ, ಆಫ್ರಿಕನ್ನರನ್ನ ಮಣಿಸಿದ್ರು. ಫೈನಲ್​ನಲ್ಲಿ ಕೇವಲ 7 ರನ್​ಗಳಿಂದ ಸೋತಿದ್ದ ಆಫ್ರಿಕಾ, ಇಂದು ಸೇಡು ತೀರಿಸಿಕೊಳ್ಳಲು ಹೊರಟಿದೆ. ಆಫ್ರಿಕಾಗೆ ಇದು ಸೇಡಿನ ಪಂದ್ಯವಾದ್ರೆ, ಟೀಮ್ ಇಂಡಿಯಾಕ್ಕೆ ಸೆಮೀಸ್ ದೃಷ್ಟಿಯಿಂದ ಈ ಪಂದ್ಯ ಪ್ರತಿಷ್ಟೆಯ ಪ್ರಶ್ನೆಯಾಗಿದೆ. ಹಾಗಾಗಿ ಇಂದು ನಮೋ ಮೈದಾನದಲ್ಲಿ ಉಭಯ ತಂಡಗಳ ನಡುವೆ, ಜಿದ್ದಾಜಿದ್ದಿ ಫೈಟ್ ಪಕ್ಕಾ. ಟೀಮ್ ಇಂಡಿಯಾ ಗೆಲುವಿಗಾಗಿ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ಪ್ರಾರ್ಥಿಸುತ್ತಿದ್ರೆ ಅತ್ತ ಆಫ್ರಿಕಾ ಎದುರಾಳಿಗಳಿಗೆ ಅವರ ನೆಲದಲ್ಲೇ ಸೋಲುಣಿಸಲು ಪಣ ತೊಟ್ಟಿದೆ.

ಇದನ್ನೂ ಓದಿ:ನ್ಯೂಸ್ ಫಸ್ಟ್ EV ರೆಡಿ ಎಕ್ಸ್​ಪೋಗೆ ಭರ್ಜರಿ ರೆಸ್ಪಾನ್ಸ್.. ಇನ್ನೆರಡು ದಿನ ಅರಮನೆ ಮೈದಾನದಲ್ಲಿ EV ಜಾತ್ರೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

India vs South Africa T20 world cup Super 8
Advertisment