ಮದುವೆ ಬಗ್ಗೆ ಗುಟ್ಟು ಬಿಚ್ಚಿಟ್ಟ ನಟಿ ರಜನಿ.. ಗೆಳೆಯ ಲೈಫ್​ ಪಾರ್ಟ್ನರ್​ ಆಗ್ತಾರಾ? ಈ ಬಗ್ಗೆ ಏನಂದ್ರು ಕೇಳಿ..!

ಕಿರುತೆರೆಯ ಅದ್ಭುತ ಕಲಾವಿದೆ ಅಂದ್ರೆ ಅದು ರಜಿನಿ. ಅಮೃತವರ್ಷಿಣಿ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟಿ, ದಶಕಗಳ ನಂತರ ಮತ್ತೆ ಸ್ಟಾರ್​ ಸುವರ್ಣಗೆ ಮರಳಿದ್ದಾರೆ. ಈ ಮಧ್ಯೆ ನಟಿಯ ಮದುವೆ ವಿಚಾರ ಸಿಕ್ಕಾಪಟ್ಟೆ ವೈರಲ್​ ಆಗಿದೆ.

author-image
Veenashree Gangani
rajini
Advertisment

ಕನ್ನಡ ಕಿರುತೆರೆಯ ಅದ್ಭುತ ಕಲಾವಿದೆ ಅಂದ್ರೆ ಅದು ರಜಿನಿ. ಅಮೃತವರ್ಷಿಣಿ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟಿ, ದಶಕಗಳ ನಂತರ ಮತ್ತೆ ಸ್ಟಾರ್​ ಸುವರ್ಣಗೆ ಮರಳಿದ್ದಾರೆ. ಈ ಮಧ್ಯೆ ನಟಿಯ ಮದುವೆ ವಿಚಾರ ಸಿಕ್ಕಾಪಟ್ಟೆ ವೈರಲ್​ ಆಗಿದೆ. 

ಇದನ್ನೂ ಓದಿ:ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್​ನ್ಯೂಸ್.. ಪುಸ್ತಕ ನೋಡಿಕೊಂಡು ಪರೀಕ್ಷೆ ಬರೆಯಲು ಅವಕಾಶ

publive-image

ಹೌದು, ಸೋಶಿಯಲ್ ಮೀಡಿಯಾದಲ್ಲಿ ನಟಿ ರಜಿನಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಹೊಸ ಹೊಸ ಕಾನ್ಸೆಪ್ಟ್​ನಲ್ಲಿ  ರೀಲ್ಸ್ ಮಾಡುತ್ತಾ ಇರುತ್ತಾರೆ. ಇವರಿಗೆ ಬಾಡಿ ಬಿಲ್ಡರ್ ಅರುಣ್ ವೆಂಕಟೇಶ್ ಸಾಥ್ ಕೊಡುತ್ತಾರೆ. ಇನ್ನೂ, ನಟಿ ಬಾಡಿ ಬಿಲ್ಡರ್ ಅರುಣ್ ವೆಂಕಟೇಶ್ ಅವರ ಜೊತೆಗೆ ಹೆಚ್ಚು ರೀಲ್ಸ್ ಮಾಡುವುದನ್ನು ಗಮನಿಸಿದ ನೆಟ್ಟಿಗರು, ಅಭಿಮಾನಿಗಳು ಈ ಇಬ್ಬರು ಮದುವೆ ಆಗಲಿದ್ದಾರೆ ಎಂದು ಅಂದುಕೊಂಡಿದ್ದಾರೆ.

ಈ ಬಗ್ಗೆ ಖುದ್ದು ನಟಿ ರಜನಿ ನ್ಯೂಸ್​ ಫಸ್ಟ್​ ಸಂದರ್ಶನದಲ್ಲಿ ಗುಟ್ಟು ಬಿಚ್ಚಿಟ್ಟಿದ್ದಾರೆ. ಈ ಬಗ್ಗೆ ಮಾತಾಡಿದ ನಟಿ, ಮದುವೆ ಆಗಿರುವವರ ಕಥೆ ನೋಡುತ್ತಿದ್ದೀವಿ. ಸಿಂಗಲ್​ ಲೈಫ್​ ಚೆನ್ನಾಗಿದೆ. ಮದುವೆ ಆದ ಬಳಿಕ ಜೀವನ ಚೆನ್ನಾಗಿತ್ತೆ. ನನ್ನ ಲೈಫ್​ ಪಾಟ್ನರ್​ ಯಾರಾಗುತ್ತಾರೆ ಅಂತ ಚರ್ಚೆ ಶುರುವಾಗಿದೆ. ನೋಡೋಣ ಯಾವಾಗ ಗಳಿಗೆ ಕೂಡಿ ಬರುತ್ತೆ ಅಂತ. ಗೆಳೆಯ ಲೈಫ್​ ಪಾಟ್ನರ್​ ಆಗ್ತಾರಾ ಅಂತ ನನಗೆ ಗೊತ್ತಿಲ್ಲ. ಯಾವಾಗ ಏನ್​ ಆಗುತ್ತೆ ಅಂತ ಗೊತ್ತಿಲ್ಲ ಎಂದಿದ್ದಾರೆ.

ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ಅಮೃತವರ್ಷಿಣಿ ಖ್ಯಾತಿಯ ನಟಿ ರಜನಿ.. ಏನದು..?

ಇನ್ನೂ, ನಟಿ ರಜಿನಿ ಅವರು ನೆಗೆಟಿವ್​ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಹಿಟ್ಲರ್​ ಕಲ್ಯಾಣದಲ್ಲಿ ವಿಲನ್​ ಆಗಿ ಮಿಂಚಿದ್ರು. ಸದ್ಯ ಹೊಸ ಪಾತ್ರ ಕೂಡ ಅದೇ ಶೇಡ್​ನಲ್ಲಿದೆ. ಸ್ಟಾರ್​ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗ್ತಿರೋ 'ನೀ ಇರಲು ಜೊತೆಯಲ್ಲಿ' ಸೀರಿಯಲ್​ ನಲ್ಲಿ ಉರ್ಮಿಳಾ ದಿವಾನ್​ ಆಗಿ ಕಾಣಿಸಿಕೊಳ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

actress rajini
Advertisment