ಲವ್ವಲ್ಲಿ ಬಿದ್ದ ಮಲ್ಲಿ.. ಅಮೃತಧಾರೆಯಲ್ಲಿ ಹೊಸ ಲವ್​ ಟ್ರ್ಯಾಕ್‌..!

ಅಮೃತಧಾರೆ ಧಾರಾವಾಹಿಯಲ್ಲಿ ಪ್ರಾರಂಭದಿಂದಲೂ ಹೊಸ ಹೊಸ ಪ್ರೇಮ್‌ ಕಹಾನಿ ತೆರೆದುಕೊಳ್ತಾನೇ ಬರುತ್ತಿದೆ. ಸದ್ಯ ಇದೀಗ ಅಮೃತಧಾರೆಯಲ್ಲಿ ಮತ್ತೆ ಹೊಸ ಲವ್​ ಟ್ರ್ಯಾಕ್‌ ಶುರುವಾಗಿದೆ.

author-image
Ganesh Kerekuli
amruthadhare malli
Advertisment

ಅಮೃತಧಾರೆ ಧಾರಾವಾಹಿಯಲ್ಲಿ ಪ್ರಾರಂಭದಿಂದಲೂ ಹೊಸ ಹೊಸ ಪ್ರೇಮ್‌ ಕಹಾನಿ ತೆರೆದುಕೊಳ್ತಾನೇ ಬರುತ್ತಿದೆ. ಸದ್ಯ ಇದೀಗ ಅಮೃತಧಾರೆಯಲ್ಲಿ  ಮತ್ತೆ ಹೊಸ  ಲವ್​ ಟ್ರ್ಯಾಕ್‌ ಶುರುವಾಗಿದೆ.  

ಮಲ್ಲಿ ಜೈದೇವ್​ನಿಂದ ಹೋಗಿದ್ದು ಆಯ್ತು. ಭೂಮಿಕಾಳ ಜೊತೆ ಧೈರ್ಯವಾಗಿ ನಿಂತಿದ್ದು ಆಯ್ತು. ಜೊತೆಗೆ ಒಂಟಿಯಾಗಿ ಜೀವನ ಸಾಗಿಸ್ತಾ ವಿದ್ಯಾಭ್ಯಾಸ ಮುಂದುವರೆಸ್ತಿದ್ದಾಳೆ. ಕೇಡಿ ಜೈದೇವ್‌ ಕುತಂತ್ರಗಳಿಗೆ ಅಡ್ಡಿ ಕೂಡ ಆಗಿದ್ದಾಳೆ. ನನ್ನ ಲೈಫೇ ಇಷ್ಟು ಅಂತಾ ಅನ್ಕೊಂಡಿದ್ದ ಮಲ್ಲಿಗೆ, ಲೈಫ್‌ ಇಷ್ಟೇ ಅಲ್ಲ ಇನ್ನೂ ಇದೆ ಅಂತಾ ಹೇಳ್ಕೊಂಡು, ಲವ್​ ಟ್ರ್ಯಾಕ್‌ ಓಪನ್​ ಮಾಡಲು ಕಿಲಾಡಿ ಹುಡುಗನ ಎಂಟ್ರಿ ಆಗಿದೆ.
ಜೈದೇವ್‌ ಮಲ್ಲಿಗೆ ಕೊಡಬಾರದ ಕಾಟ ಕೊಟ್ಟಿದ್ದ. ನೊಂದಿದ್ದ ಮಲ್ಲಿಗೆ ಭೂಮಿಕಾ ಮತ್ತು ಗೌತಮ್‌ ಆಸರೆಯಾಗಿದ್ರು. ಜೊತೆಗೆ ಮಲ್ಲಿಗೆ ಕಳೆದು ಹೋಗಿದ್ದ ತಂದೆ ಕೂಡ ಸಿಕ್ಕಿದ್ರೂ. ಆದ್ರೆ ಮಲ್ಲಿ ತಂದೆ, ತಾನು ಮಾಡಿದ ಪಾಪಗಳಿಗೆ ಪ್ರಾಯಶ್ಚಿತವಾಗಿ ಸಾವಿಗೆ ಶರಣಾಗಿದ್ದ..

ಇದನ್ನೂ ಓದಿ: ಬಿಗ್​ ಬಾಸ್​​​ ಗ್ರ್ಯಾಂಡ್ ಫಿನಾಲೆ ಮತ್ತೊಂದು ಮೈಲಿಗಲ್ಲು.. ರೆಕಾರ್ಡ್​ ಬ್ರೇಕ್ ಅಂದ್ರೆ ಇದು..!

amruthadhare malli (1)

ಹೀಗಾಗಿ ಅವ್ರ ಆಸ್ತಿಯಲ್ಲಾ ಮಲ್ಲಿ ಪಾಲಾಯ್ತು.. ಸದ್ಯ ಗೌತಮ್​, ಭೂಮಿಕಾ ಬಳಿ ಅಷ್ಟು ಆಸ್ತಿ ಪಡೆದುಕೊಂಡ ಜಯದೇವ್‌, ಈಗ ಮಲ್ಲಿ ಖುಷಿ ಹಾಳು ಮಾಡಲು ರೆಡಿಯಾಗಿದ್ದಾನೆ. ಮಲ್ಲಿ ಹೆಸರಲ್ಲಿರೋ ಆಸ್ತಿ ಹೊಡೆಯೋಕೆ ನಾನಾ ಪ್ರಯತ್ನಗಳ ಮಾಡ್ತಿದ್ದಾನೆ.. ಆದ್ರೆ ಯಾವುದು ಪ್ರಯೋಜನವಾಗ್ತಿಲ್ಲ. ಹೀಗಾಗಿ ಜೈದೇವ್​, ಮಾಸ್ಟರ್‌ ಪ್ಲ್ಯಾನ್‌  ಮಾಡಿದ್ದು,  ತನ್ನ ಪಿಎಯನ್ನ ಮಲ್ಲಿ ಹಿಂದೆ ಬಿಟ್ಟು ಲವ್​ ಮಾಡುವಂತೆ ನಾಟಕವಾಡಲು ಆರ್ಡರ್‌ ಮಾಡಿದ್ದಾನೆ.  

amruthadhare malli (2)

ಈ ಕಿಲಾಡಿ ಹುಡುಗನಿಗೆ ಈಗಾಗ್ಲೇ ಮಲ್ಲಿ ಮೇಲೆ ಲವ್‌ ಆಗಿರುತ್ತೆ. ಲವ್​ ಆಗಿದ್ದ ಹುಡುಗಿಯನ್ನೇ ಜೈದೇವ್​ ಕೂಡ ತೋರಿಸಿದ್ದು, ಲಡ್ಡು ಬಂದು ಬಾಯಿಗೆ ಬಿದ್ದಂತೆ ಆಗಿದೆ. ಸದ್ಯ ಮಲ್ಲಿ ಜೊತೆ ಸ್ನೇಹಿತರಾಗಿದ್ದಾರೆ.. ಮೇಡಂ ಮೇಡಂ ಅಂತಾ ಕರಿತಿದ್ದವನು ಇದೀಗ ರೀ ರೀ ಅಂತಾ ಕರೆಯೋಕೆ ಶುರು ಮಾಡಿದ್ದಾನೆ... 

ಮುಂದೆ ಮಲ್ಲಿ ಹಾಗೂ ಆ ಪಿಎ ಲವ್‌ನಲ್ಲಿ ಬೀಳ್ತಾರ.. ಮಲ್ಲಿ ಜೈದೇವ್​ನ ಮೋಸಕ್ಕೆ ಮತ್ತೆ ಬಲಿಯಾಗ್ತಾಳಾ.. ಪಿಎ ನಿಜವಾಗ್ಲೂ ಮಲ್ಲಿಗೆ ಮೋಸ ಮಾಡ್ತಾನಾ? ಎಂಬುದೇ ಸದ್ಯಕಿರೋ ಸಸ್ಪೆನ್ಸ್​

ಇದನ್ನೂ ಓದಿ: ವೀಕ್ಷಕರಿಗೆ ಶಾಕಿಂಗ್ ನ್ಯೂಸ್​.. ಬೇಸರದ ಸುದ್ದಿ ಹಂಚಿಕೊಂಡ ಪುಟ್ಟಕ್ಕನ ಅಳಿಯ ಕಂಠಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Amritadhare kannada serial
Advertisment