/newsfirstlive-kannada/media/media_files/2026/02/02/puttakkana-makkalu-kanti-2026-02-02-16-01-17.jpg)
ನಾಲ್ಕು ವರ್ಷಗಳ ಕಾಲ ಜನರನ್ನ ರಂಜಿಸಿದ ಪುಟ್ಟಕ್ಕನ ಮಕ್ಕಳು ವಿದಾಯ ಹೇಳೋಕೆ ಸಜ್ಜಾಗಿದೆ. ಈಗಾಗ್ಲೇ ತಂಡ ಕೊನೆ ದಿನದ ಶೂಟಿಂಗ್ ಮುಗಿಸಿದೆ. ಪುಟ್ಟಕ್ಕನ ಅಳಿಯ ಕಂಠಿ, ಕೊನೆ ದಿನದ ಶೂಟಿಂಗ್ ವಿಡಿಯೋವನ್ನ ಹಂಚ್ಕೊಂಡಿದ್ದಾರೆ.
2021ರಲ್ಲಿ ಲಾಂಚ್ ಆಗಿದ್ದ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಹಳ್ಳಿ ಸೊಗಡಿನ ಅಪರೂಪದ ಕಥೆ. ಮೂವರು ಹೆಣ್ಣು ಮಕ್ಕಳನ್ನು ಏಕಾಂಗಿಯಾಗಿ ಬೆಳೆಸಿ ಸ್ವಾವಲಂಬಿಯಾಗಿ ಬದುಕುವ, ಛಲಗಾತಿ ಪುಟ್ಟಕನ ಕಥೆ.. ಈ ಧಾರಾವಾಹಿ ಹಿರಿಯ ನಟಿ ಉಮಾಶ್ರೀ ಅಭಿನಯದ ಝಲಕ್ ಅನ್ನು ಕಣ್ತುಂಬಿಕೊಳ್ಳುವ ಅವಕಾಶ ವೀಕ್ಷಕರಿಗೆ ನೀಡಿತ್ತು.. ಆದ್ರೆ ಸತತ ನಾಲ್ಕು ವರ್ಷಗಳ ಕಾಲ ರಂಜಿಸಿದ ಪುಟ್ಟಕ್ಕನ ಮಕ್ಕಳು ಇದೀಗ ವಿದಾಯ ಹೇಳೋಕೆ ತಯರಾಗಿದೆ.
ಈಗಾಗ್ಲೇ ತಂಡ ಕೊನೆ ದಿನದ ಶೂಟಿಂಗ್ ಕೂಡ ಮುಗಿಸಿದೆ. ಕಂಠಿ ಪಾತ್ರ ಮಾಡುತ್ತಿರುವ ನಾಯಕ ಧನುಷ್ ಕೊನೆ ದಿನದ ಶೂಟಿಂಗ್ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚ್ಕೊಂಡಿದ್ದು, ವೀಕ್ಷಕರನ್ನ ಭಾವುಕರಾಗುವಂತೆ ಮಾಡಿದೆ.
/filters:format(webp)/newsfirstlive-kannada/media/media_files/2026/02/02/puttakkana-makkalu-kanti-1-2026-02-02-16-02-57.jpg)
ವಿಡಿಯೋದಲ್ಲಿ ತಮಾಷೆ ಜೊತೆಗೆ ಒಂದಿಷ್ಟು ಭಾವುಕ ಕ್ಷಣಗಳನ್ನ ಕಂಠಿ ಶೇರ್ ಮಾಡಿದ್ದಾರೆ. ಬ್ಯಾಗ್ ಪ್ಯಾಕ್ ಮಾಡೋದ್ರಿಂದ ಹಿಡಿದು, ಚಿತ್ರೀಕರಣದ ಸೆಟ್ ತಲುಪುವವರೆಗೂ ಸಣ್ಣ ಸಣ್ಣ ತುಣುಕುಗಳನ್ನ ಕಂಠಿ ಹಂಚಿಕೊಂಡಿದ್ದಾರೆ. ಕೊನೆ ಬಾರಿಗೆ ಕಂಠಿ ಹಾಕುತ್ತಿದ್ದ ಬಟ್ಟೆ ತೊಟ್ಟಿದ್ದು, ಶೂಟಿಂಗ್ ಸ್ಕ್ರಿಪ್ಟ್ ಜೊತೆಗೆ ಕೊನೆ ಬಾರಿಗೆ ಪುಟ್ಟಕ್ಕನ ಸೆಟ್‌ನಲ್ಲಿ ಬಣ್ಣ ಹಚ್ಚಿದ್ದನ್ನ ಹಂಚಿಕೊಂಡಿದ್ದಾರೆ.
/filters:format(webp)/newsfirstlive-kannada/media/media_files/2026/02/02/puttakkana-makkalu-kanti-2-2026-02-02-16-03-09.jpg)
ವಿಡಿಯೋದ ಕೊನೆಯಲ್ಲಿ ತಾಯಿ ಸಮಾಧಿ ಮುಂದೆ ಕಂಠಿ ಅವ್ವ ಎಂದು ತಲೆ ತಗ್ಗಸಿಕೊಂಡು ಕೂತಿರುತ್ತಾನೆ. ಆಗ ಸೆಟ್ ಹುಡುಗ ಬಂದು ಇನ್ ಎಲ್ಲಿ ಅವ್ವ ? ಅವ್ವ ಕಲರ್ಸ್ ಕನ್ನಡಕ್ಕೆ ಹೋಗಾಯ್ತು . ನಾವು ಕೂಡ ಹೋಗೊಣ ಎಂದು ತಮಾಷೆ ಮಾಡಿದ್ದಾರೆ.
ಕ್ಯಾಪ್ಶನ್‌ನಲ್ಲಿ ಕೊನೆ ದಿನದ ಶೂಟಿಂಗ್, ಕೊನೆಯ ಬಾರಿ ಕಂಠಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನಿಮ್ಮ ಪ್ರೀತಿಗೆ ಧನ್ಯವಾದಗಳು. ನಾನು ಈ ಧಾರಾವಾಹಿಯನ್ನ ಸಿನಿಮಾ ಕಡೆ ಹೆಜ್ಜೆ ಇಡಲು ದಾರಿ ಎಂದುಕೊಂಡಿದ್ದೆ. ಆದ್ರೆ ನೀವು ನನಗೆ ಅಪಾರ ಪ್ರೀತಿ ಕೊಡುವುದರ ಮೂಲಕ ದೊಡ್ಡ ಮಟ್ಟದಲ್ಲಿ ಕೊಂಡೊಯ್ದಿರಿ. THANK YOU ಎಂದು ಬರೆದುಕೊಂಡಿದ್ದಾರೆ. ಒಟ್ನಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಇನ್ನು ಕೆಲವೇ ದಿನ ಬರಲಿದೆ. ಇದ್ರಿಂದ ವೀಕ್ಷಕರಿಗೆ ನಿರಾಸೆಯಾಗೊದಂತು ಕನ್ಫರ್ಮ್​.
ಇದನ್ನೂ ಓದಿ: ಪಾಕ್​​ಗೆ ಜಯ್ ಶಾ ವಾರ್ನಿಂಗ್.. 48 ಗಂಟೆಯಲ್ಲಿ ಮಣಿಯದಿದ್ದರೆ 3 ಕಠಿಣ ಶಿಕ್ಷೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us