ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡ ಅಮೃತಧಾರೆ ಖ್ಯಾತಿಯ ನಟಿ ಮೇಘಾ ಶಣೈ; ಹುಡುಗ ಯಾರು?

ಅಮೃತಧಾರೆ ಸೀರಿಯಲ್​ ಮೂಲಕ ಫೇಮಸ್​ ಆಗಿರೋ ನಟಿಗೆ ಕಂಕಂಣ ಭ್ಯಾಗ ಕೂಡಿ ಬಂದಿದೆ. ಅಮೃತಧಾರೆ ಧಾರಾವಾಹಿಯಲ್ಲಿ ಇತ್ತೀಚಿಗೆ ಗೌತಮ್​ ತಂಗಿ ಮದುವೆ ಮಾಡಿಸಿದ್ದರು. ಆದ್ರೆ ಈಗ ಆ ಗುಂಡು ಮುದ್ದಿನ ತಂಗಿಗೆ ರಿಯಲ್​ ಆಗಿ ಕಂಕಣ ಭಾಗ್ಯ ಕೂಡಿ ಬಂದಿದೆ.

author-image
Veenashree Gangani
Megha Shenoy
Advertisment

ಅಮೃತಧಾರೆ ಸೀರಿಯಲ್​ ಮೂಲಕ ಫೇಮಸ್​ ಆಗಿರೋ ನಟಿಗೆ ಕಂಕಂಣ ಭ್ಯಾಗ ಕೂಡಿ ಬಂದಿದೆ. ಅಮೃತಧಾರೆ ಧಾರಾವಾಹಿಯಲ್ಲಿ ಇತ್ತೀಚಿಗೆ ಗೌತಮ್​ ತಂಗಿ ಮದುವೆ ಮಾಡಿಸಿದ್ದರು. ಆದ್ರೆ ಈಗ ಆ ಗುಂಡು ಮುದ್ದಿನ ತಂಗಿಗೆ ರಿಯಲ್​ ಆಗಿ ಕಂಕಣ ಭಾಗ್ಯ ಕೂಡಿ ಬಂದಿದೆ. 

ಇದನ್ನೂ ಓದಿ:ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಯಾರಾರಿಗೆ ಎಷ್ಟೆಷ್ಟು ಕೋಟಿ ಕೊಟ್ರು?

Megha Shenoy(1)

ಹೌದು, ಗೌತಮ್​ ದಿವಾನ್​ ತಂಗಿ ಸುಧಾ ಪಾತ್ರದಲ್ಲಿ ನಟಿ ಮೇಘಾ ಶೆಣೈ ಅಭಿನಯಿಸುತ್ತಿದ್ದಾರೆ. ಹಲವು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿರೋ ಮೇಘಾ ಜನಪ್ರಿಯತೆ ಪಡೆದಿರೋದು ಅಮೃತಧಾರೆಯ ಸುಧಾ ಪಾತ್ರದ ಮೂಲಕ. ಈಗಾಗಲೇ ಸುಧಾ-ಸೃಜನ್​ ಜೋಡಿಯನ್ನು ವೀಕ್ಷಕರು ಇಷ್ಟಪಟ್ಟಿದ್ದಾರೆ.

Megha Shenoy(3)

ಸದ್ಯ ನಿಜ ಜೀವನದಲ್ಲಿ ಹೊಸ ಬಾಳಿಗೆ ಕಾಲಿಡ್ತಿದ್ದಾರೆ ಮೇಘಾ. ಮೇಘಾ ಗೆಳೆಯನ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮೇಘಾ ಶಣೈ ಮೂಲತಃ ಮಂಗಳೂರಿನವರು. ಸದ್ಯ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ನಟಿ ಲೈಫ್​ನಲ್ಲಿ ಹೊಸ ಅಧ್ಯಾಯ ಶುರುವಾಗಿದೆ.

Megha Shenoy(4)

ನಿನ್ನೆ ಅಂದ್ರೇ ಆಗಸ್ಟ್​ 21ರಂದು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.  ಇನ್ನೂ, ನಿಶ್ಚಿತಾರ್ಥಕ್ಕೆ ಸುಧಾ ತಾಯಿ ಪಾತ್ರ ಮಾಡ್ತಿರೋ ಚಿತ್ಕಳಾ ಬಿರದಾರ್​ ದಂಪತಿ ಸಮೇತ ಭಾಗಿಯಾಗಿದ್ದಾರೆ. ಜೊತೆಗೆ ಹಲವು ಕಿರುತೆರೆ ತಾರೆಯರು ಭಾಗಿಯಾಗಿ ನವ ಜೋಡಿಗೆ ಶುಭ ಕೋರಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Megha Shenoy, amruthadhaare serial
Advertisment