ಅಂಜಲಿ ಸುಧಾಕರ್ (Anjali Sudhakar) ಕನ್ನಡ ಜನಪ್ರಿಯ ನಟಿಯರಲ್ಲಿ ಒಬ್ಬರು. ಸದ್ಯ ರಾಮಾಚಾರಿ ಮತ್ತು ಲಕ್ಷ್ಮೀ ನಿವಾಸ ಧಾರಾವಾಹಿ ಮೂಲಕ ಮನೆ ಮನೆಗಳ ಮಾತಾಗಿದ್ದಾರೆ. ಪ್ರಸ್ತುತ ಪೋಷಕ ಪಾತ್ರಕ್ಕೆ ಜೀವ ತುಂಬುತ್ತಿರುವ ಅವರು, ನಿರ್ದೇಶಕ ಮತ್ತು ನಟರ ನಡುವಿನ ನಿರ್ಧಾರಗಳಿಂದಾಗಿ ತಮಗೆ ಆಗುತ್ತಿರುವ ಸಣ್ಣ ಬೇಸರ ಹೊರ ಹಾಕಿದ್ದಾರೆ.
ತಾವು ನಟಿಸುವ ಮತ್ತು ಸೀರಿಯಲ್ಗಳಲ್ಲಿ ಬರುವ ಪಾತ್ರಗಳ ತೂಕದ ಬಗ್ಗೆ ನ್ಯೂಸ್ಫಸ್ಟ್ ಜೊತೆ ಮಾತನಾಡಿರುವ ಅವರು.. ಲಕ್ಷ್ಮೀ ನಿವಾಸದಲ್ಲಿ ನನಗೆ ಕತೆಯನ್ನು ಬೇರೆಯೇ ಹೇಳಿದ್ದರು. ನಾನು ಈಗಲೂ ಹೇಳುತ್ತೇನೆ, ಕಲಾವಿದನ ಕರೆದುಕೊಳ್ಳುವಾಗ ನಟಿಸಬೇಕಾಗಿರುವ ಪಾತ್ರದ ಬಗ್ಗೆ ಮೊದಲು ಹೇಳಿಬಿಡಿ. ಅವರಿಗೆ ಇಷ್ಟವಾಗಿದ್ದರೆ ನಟಿಸುತ್ತಾರೆ. ಇಲ್ಲದಿದ್ರೆ ಬೇಡ ಎನ್ನುತ್ತಾರೆ. ನೀವು ಹೇಳ್ತೀರಿ.. ನಾವು ನಟಿಸುತ್ತೇವೆ.
ಲಕ್ಷ್ಮೀ ನಿವಾಸದ ಬಗ್ಗೆ ನನಗೆ ನಿರ್ಮಲಾ ಮೇಡಂ ಬೇರೆ ಥರಾ ಹೇಳಿದ್ದರು. ಆದರೆ ಅದು ಹೋಗ್ತ, ಹೋಗ್ತ ಕತೆಯ ಸ್ವರೂಪ ಬದಲಾಯಿತು. ಯಾವುದೋ ಒಬ್ಬ ಕಲಾವಿದ ಬಾರದೆ ಇದ್ದಾಗ ಅವರಿಗೆ ಬೇಕಾದ ಹಾಗೆ ಧಾರವಾಹಿಯ ಕಥೆ ಬದಲಾಯಿಸುತ್ತಾರೆ. ಸಿಕ್ಕಿರುವ ಕಲಾವಿದ, ಸ್ಥಳದ ಬಗ್ಗೆ ಕತೆ ಬರೆಯುತ್ತಾರೆ. ಆಗ ಮೂಲ ಪಾತ್ರಧಾರಿಗಳ ಮೇಲೆ ಪೆಟ್ಟು ಬೀಳುತ್ತದೆ. ಅವಮಾನ ಆಗುತ್ತದೆ. ಅವರಿಗೆ ಆ ಪಾತ್ರ ಮಾಡೋದು ಕಷ್ಟ ಆಗುತ್ತದೆ ಅಂತಾ ನಿರ್ದೇಶಕರು ಯೋಚನೆ ಮಾಡೋದಿಲ್ಲ.
ಇದನ್ನು ನಾನು ನಿರಂತರವಾಗಿ ಮಾತನ್ನಾಡಬೇಕು ಅನಿಸುತ್ತೆ. ನನ್ನ ಮತ್ತು ಅವರ ನಡುವೆ ಪ್ರತಿ ಬಾರಿಯೂ ಮೈಮನಸ್ಸು, ವಾದ ಮತ್ತು ಪ್ರತಿವಾದ ನಡೆಯುತ್ತಲೇ ಇರುತ್ತದೆ. ನಿಮಗೆ ಇನ್ಯಾವುದೋ ಪಾತ್ರಕ್ಕೆ ಜೀವ ತುಂಬಬೇಕು ಅಂತಾ ಇನ್ನೊಂದು ಪಾತ್ರವನ್ನು ಕೊಲ್ಲೋದು ಯಾಕೆ. ಕಲಾವಿದರಿಗೆ ಹಾಗೆ ಮಾಡಬಾರದು. ಅಂತಾ ಬೇಸರ ಹೊರಹಾಕಿದ್ದಾರೆ. ಅಂಜಲಿ ಸುಧಾಕರ್ ಅವರು ಏನೆಲ್ಲ ಮಾತನ್ನಾಡಿದ್ದಾರೆ ತಿಳಿದುಕೊಳ್ಳಲು ಈ ಮೇಲಿನ ವಿಡಿಯೋ ಕ್ಲಿಕ್ ಮಾಡಿ..
ಇದನ್ನೂ ಓದಿ :ಮತ್ತೆ ವೇದಿಕೆ ಮೇಲೆ ಮಾತಿನ ಮಲ್ಲಿ.. ಅನುಶ್ರೀ ಸಂಪ್ರದಾಯ ಪಾಲನೆಗೆ ಉಘೇಉಘೇ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ