/newsfirstlive-kannada/media/media_files/2026/02/10/ashwini-gowda-and-chaitra-kundapura-1-2026-02-10-12-45-54.jpg)
ಬಿಗ್‌ಬಾಸ್ ಆಟ ಮುಗಿದು ಎಷ್ಟೋ ದಿನಗಳಾದ್ರೂ, ಸ್ಪರ್ಧಿಗಳ ನಡುವಿನ ಮುನಿಸು ಮಾತ್ರ ಇನ್ನೂ ಮುಗಿದಿಲ್ಲ. ದೊಡ್ಮನೆಯೊಳಗೆ ನಡೆಯುತ್ತಿದ್ದ ಜಗಳ ಇದೀಗ ಸೋಶಿಯಲ್ ಮೀಡಿಯಾ ಅಂಗಳಕ್ಕೆ ಬಂದು ನಿಂತಿದೆ. ಹೌದು, ನಟಿ ಅಶ್ವಿನಿ ಗೌಡ ಮತ್ತು ಚೈತ್ರಾ ಕುಂದಾಪುರ ನಡುವೆ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಸಮರ ಜೋರಾಗಿದೆ.
ಈ ‘ಕ್ಯಾಟ್‌ಫೈಟ್’ ಹೈಲೈಟ್ಸ್
ಅಶ್ವಿನಿ ಗೌಡ ಪೋಸ್ಟ್ ಏನು?
ಬಿಗ್‌ಬಾಸ್ ಮನೆಯಿಂದ ಹೊರಬಂದಿರುವ ಅಶ್ವಿನಿ ಗೌಡ, ತಮ್ಮ ಕೈ ಮೇಲಿರುವ ಗಾಯದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಆ ಪೋಸ್ಟ್​ನಲ್ಲಿ ‘ಇದು ಯಾವ ಪ್ರಾಣಿ ಪರಚಿರಬಹುದು? ಸರಿಯಾದ ಉತ್ತರ ಹಾಗೂ ಉತ್ತಮ ಶೀರ್ಷಿಕೆ ನೀಡಿದವರಿಗೆ ಸೂಕ್ತ ಬಹುಮಾನವಿದೆ’ ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದರು. ಅಲ್ಲದೆ ಮಾಧ್ಯಮಗಳ ಮುಂದೆಯೂ ಮಾತನಾಡಿ, "ಚೈತ್ರಾ ಕುಂದಾಪುರ ನನಗೆ ಟಾಸ್ಕ್ ವೇಳೆ ಉಗುರಿನಿಂದ ಪರಚಿದ್ದರು ಎಂದು ಆರೋಪಿಸಿದ್ದಾರೆ.
/filters:format(webp)/newsfirstlive-kannada/media/media_files/2026/02/10/ashwini-gowda-and-chaitra-kundapura-2-2026-02-10-12-55-00.jpg)
ಚೈತ್ರಾ ಕುಂದಾಪುರ ಖಡಕ್ ತಿರುಗೇಟು
ಅಶ್ವಿನಿ ಅವರ ಈ ಪೋಸ್ಟ್ ಮತ್ತು ಆರೋಪಕ್ಕೆ ಫೈರ್‌ಬ್ರ್ಯಾಂಡ್ ಚೈತ್ರಾ ಕುಂದಾಪುರ ಖಾರವಾಗಿಯೇ ಉತ್ತರಿಸಿದ್ದಾರೆ. ಅಶ್ವಿನಿಗೆ ಟಾಂಗ್ ನೀಡಿರುವ ಚೈತ್ರಾ, ‘ಕ್ಷಮಿಸಿ, ಇದನ್ನೆಲ್ಲಾ ಪ್ರಚಾರ ಮಾಡಲು ಮತ್ತು ಸಿಂಪತಿ (Sympathy) ಗಿಟ್ಟಿಸಿಕೊಳ್ಳಲು ನನ್ನ ಬಳಿ ಪಿ.ಆರ್ (PR) ಟೀಮ್ ಇರಲಿಲ್ಲ’ ಎಂದು ಚುಚ್ಚಿದ್ದಾರೆ.
‘ನಾನು ಪೀರಿಯಡ್ಸ್ ಆಗಿದ್ದೆ..’
ಘಟನೆಯ ಬಗ್ಗೆ ವಿವರಿಸಿರುವ ಚೈತ್ರಾ, ‘ಆಟದ ವೇಳೆ ನನಗಿಂತ ಹೆಚ್ಚು ತೂಕವಿರುವ ವ್ಯಕ್ತಿ ನನ್ನ ಹೊಟ್ಟೆಯ ಮೇಲೆ ಕುಳಿತಿದ್ದರು. ಆ ಸಮಯದಲ್ಲಿ ನಾನು ಪೀರಿಯಡ್ಸ್ (ಮುಟ್ಟು) ಕೂಡ ಆಗಿದ್ದೆ. ಆದರೂ ಆಟ ಆಡಿದೆ. ನನ್ನ ಕತ್ತನ್ನು ಟ್ವಿಸ್ಟ್ ಮಾಡಲಾಗಿತ್ತು. ಟಿಂಚರ್ ಹಾಕಿದರೂ ನೋವು ಕಡಿಮೆ ಆಗಿರಲಿಲ್ಲ. ನನ್ನ ದೇಹದ ಮೇಲೂ ಕೂಡ ಉಗುರಿನ ಗುರುತುಗಳಿವೆ. ನನಗೂ ನೋವಾಗಿದೆ. ಆದರೆ ನನಗೆ ಆಟವನ್ನು ಆಟವಾಗಿಯೇ ನೋಡುವ ಮನಸ್ಥಿತಿ ಇದೆ’ ಎಂದು ತಿರುಗೇಟು ನೀಡಿದ್ದಾರೆ.
ಗಿಲ್ಲಿಗೂ ಬಿಡದ ಅಶ್ವಿನಿ
ಕೇವಲ ಚೈತ್ರಾ ಮಾತ್ರವಲ್ಲ, ಅಶ್ವಿನಿ ಗೌಡ ಅವರು ಸಹಸ್ಪರ್ಧಿ ಗಿಲ್ಲಿ ನಟನ ಬಗ್ಗೆಯೂ ಗಂಭೀರ ಆರೋಪ ಮಾಡಿದ್ದರು. ‘ಗಿಲ್ಲಿ ಬಡವ ಎಂದು ಬಿಂಬಿಸಿಕೊಂಡಿದ್ದಾನೆ, ಆತ ನಿಜವಾಗಲೂ ಬಡವನಾ?’ ಎಂದು ಪ್ರಶ್ನಿಸುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದರು. ಒಟ್ಟಿನಲ್ಲಿ ದೊಡ್ಮನೆಯಲ್ಲಿ ಟಾಸ್ಕ್ ಮುಗಿದ ತಕ್ಷಣ ಪರಸ್ಪರ ಕ್ಷಮೆ ಕೇಳಿ ಮುಗಿದು ಹೋಗಿದ್ದ ವಿಷಯವನ್ನು, ಅಶ್ವಿನಿ ಗೌಡ ಹೊರಬಂದ ಮೇಲೆ ಮತ್ತೆ ಕೆದಕಿರುವುದು ನೆಟಿಜನ್‌ಗಳ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಪ್ರಾನ್ಸ್ ನಿಂದ 3.25 ಲಕ್ಷ ಕೋಟಿ ರೂಪಾಯಿಯಲ್ಲಿ 114 ರಫೇಲ್ ಯುದ್ಧ ವಿಮಾನ ಖರೀದಿ: ಈ ವಾರ ಅನುಮೋದನೆ ನಿರೀಕ್ಷೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us