Advertisment

ಶ್ರೇಯಾಂಕ ಪಾಟೀಲ್​ಗೆ ಬಿಗ್ ಶಾಕ್ ಕೊಟ್ಟ BCCI; ಕೊಹ್ಲಿ ರೋಹಿತ್​​ಗೂ ಆಘಾತ..!

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 2025-26ನೇ ಸಾಲಿನ (ಅಕ್ಟೋಬರ್ 1, 2025 ರಿಂದ ಸೆಪ್ಟೆಂಬರ್ 30, 2026 ರವರೆಗೆ) ಪುರುಷ ಮತ್ತು ಮಹಿಳಾ ಕ್ರಿಕೆಟಿಗರ ಸೆಂಟ್ರಲ್ ಕಾಂಟ್ರ್ಯಾಕ್ಟ್ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಹಲವು ಅಚ್ಚರಿಯ ಬದಲಾವಣೆಗಳು ಕಂಡುಬಂದಿವೆ.

author-image
Ganesh Kerekuli
shreyanka patil (5)
Advertisment

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 2025-26ನೇ ಸಾಲಿನ (ಅಕ್ಟೋಬರ್ 1, 2025 ರಿಂದ ಸೆಪ್ಟೆಂಬರ್ 30, 2026 ರವರೆಗೆ) ಪುರುಷ ಮತ್ತು ಮಹಿಳಾ ಕ್ರಿಕೆಟಿಗರ ಸೆಂಟ್ರಲ್ ಕಾಂಟ್ರ್ಯಾಕ್ಟ್ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಹಲವು ಅಚ್ಚರಿಯ ಬದಲಾವಣೆಗಳು ಕಂಡುಬಂದಿವೆ.

Advertisment

ಪ್ರಮುಖ ಮುಖ್ಯಾಂಶಗಳು:

ಕೊಹ್ಲಿ-ರೋಹಿತ್‌ಗೆ ‘ಬಿ’ ಗ್ರೇಡ್: ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಕೇವಲ ಏಕದಿನ ಪಂದ್ಯಗಳಲ್ಲಿ ಮಾತ್ರ ಆಡುತ್ತಿರುವ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ‘ಎ’ ಗ್ರೇಡ್‌ನಿಂದ ‘ಬಿ’ ಗ್ರೇಡ್‌ಗೆ ಕುಸಿದಿದ್ದಾರೆ.

ಶುಬ್ಮನ್ ಗಿಲ್‌ಗೆ ಬಡ್ತಿ: ಟೆಸ್ಟ್ ಮತ್ತು ಏಕದಿನ ತಂಡದ ನೂತನ ನಾಯಕ ಶುಬ್ಮನ್ ಗಿಲ್ ಅವರು ಮೊದಲ ಬಾರಿಗೆ ‘ಎ’ ಗ್ರೇಡ್‌ಗೆ ಬಡ್ತಿ ಪಡೆದಿದ್ದಾರೆ. ಅವರೊಂದಿಗೆ ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಈ ಉನ್ನತ ಶ್ರೇಣಿಯಲ್ಲಿದ್ದಾರೆ.

ಎ+ ಗ್ರೇಡ್ ರದ್ದು: ಈ ಬಾರಿ ಬಿಸಿಸಿಐ ‘ಗ್ರೇಡ್ ಎ+’ ವಿಭಾಗವನ್ನು ರದ್ದುಗೊಳಿಸಿದ್ದು, ಕೇವಲ ಎ, ಬಿ ಮತ್ತು ಸಿ ಎಂಬ ಮೂರು ಹಂತದ ಒಪ್ಪಂದಗಳನ್ನು ಮಾತ್ರ ಉಳಿಸಿಕೊಂಡಿದೆ.

Advertisment

ಹೊಸಬರ ಎಂಟ್ರಿ: ಪುರುಷರ ಪಟ್ಟಿಯಲ್ಲಿ ಸಾಯಿ ಸುದರ್ಶನ್ ಹೊಸದಾಗಿ ಒಪ್ಪಂದ ಪಡೆದಿದ್ದಾರೆ. ಇತ್ತ ಮಹಿಳಾ ತಂಡದಲ್ಲಿ ಸ್ಮೃತಿ ಮಂಧಾನ, ಹರ್ಮನ್‌ಪ್ರೀತ್ ಕೌರ್ ಅವರೊಂದಿಗೆ ಜೆಮಿಮಾ ರೋಡ್ರಿಗಸ್ ‘ಎ’ ಗ್ರೇಡ್‌ಗೆ ಭಡ್ತಿ ಪಡೆದಿದ್ದಾರೆ.

ಇದನ್ನೂ ಓದಿ: IND vs PAK ಮ್ಯಾಚ್​ಗಾಗಿ ಹೈಡ್ರಾಮಾ! ICC ಮುಂದೆ 5 ಬೇಡಿಕೆ ಇಟ್ಟ ಪಾಕ್.. 3 ರಿಜೆಕ್ಟ್, ಜಯ್ ಶಾ ಖಡಕ್ ಉತ್ತರ ಏನು..?

ಪುರುಷರ ಒಪ್ಪಂದದ ಪಟ್ಟಿ 

  • ಗ್ರೇಡ್ A: ಶುಬ್ಮನ್ ಗಿಲ್, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ.
  • ಗ್ರೇಡ್ B: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಕುಲದೀಪ್ ಯಾದವ್, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್.
  • ಗ್ರೇಡ್ C: ಅಕ್ಷರ್ ಪಟೇಲ್, ಋತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ಸಂಜು ಸ್ಯಾಮ್ಸನ್, ಅರ್ಶದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಧ್ರುವ್ ಜುರೆಲ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ನಿತೀಶ್ ಕುಮಾರ್ ರೆಡ್ಡಿ, ಅಭಿಷೇಕ್ ಶರ್ಮಾ, ಸಾಯಿ ಸುದರ್ಶನ್, ರವಿ ಬಿಷ್ಣೋಯ್.
  • ಕೈಬಿಟ್ಟವರು: ಮೊಹಮ್ಮದ್ ಶಮಿ, ಇಶಾನ್ ಕಿಶನ್, ಸರ್ಫರಾಜ್ ಖಾನ್, ರಜತ್ ಪಾಟಿದಾರ್ ಮತ್ತು ಮುಖೇಶ್ ಕುಮಾರ್ ಈ ಬಾರಿ ಒಪ್ಪಂದ ಕಳೆದುಕೊಂಡಿದ್ದಾರೆ.
Advertisment

ಮಹಿಳೆಯರ ಒಪ್ಪಂದದ ಪಟ್ಟಿ

  • ಗ್ರೇಡ್ A: ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ.
  • ಗ್ರೇಡ್ B: ರೇಣುಕಾ ಠಾಕೂರ್, ಸ್ನೇಹ ರಾಣಾ, ಶೆಫಾಲಿ ವರ್ಮಾ, ರಿಚಾ ಘೋಷ್.
  • ಗ್ರೇಡ್ C: ರಾಧಾ ಯಾದವ್, ಅಮನ್ಜೋತ್ ಕೌರ್, ಪ್ರತಿಕಾ ರಾವಲ್, ಕ್ರಾಂತಿ ಗೌಡ್, ಉಮಾ ಚೆಟ್ರಿ, ಅರುಂಧತಿ ರೆಡ್ಡಿ, ಶ್ರೀ ಚರಣಿ, ಯಾಸ್ತಿಕಾ ಭಾಟಿಯಾ, ಹರ್ಲೀನ್ ಡಿಯೋಲ್, ಕಾಶ್ವಿ ಗೌತಮ್, ಜಿ. ಕಮಲಿನಿ, ವೈಷ್ಣವಿ ಶರ್ಮಾ, ತೇಜಲ್ ಹಸಬ್ನಿಸ್.
  • ಗಮನಾರ್ಹ ಬದಲಾವಣೆ: ಶ್ರೇಯಾಂಕ ಪಾಟೀಲ್, ಪೂಜಾ ವಸ್ತ್ರಾಕರ್ ಮತ್ತು ತಿತಾಸ್ ಸಾಧು ಅವರನ್ನು ಈ ಬಾರಿ ಒಪ್ಪಂದದಿಂದ ಕೈಬಿಡಲಾಗಿದೆ.

ಇದನ್ನೂ ಓದಿ: ಉದ್ದೇಶ ಈಡೇರಿಸುವಲ್ಲಿ ವಿಫಲವಾದ ನಲಿ ಕಲಿ ಯೋಜನೆ : ಶಿಕ್ಷಣ ಸಚಿವರಿಗೆ ವರದಿ ಸಲ್ಲಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BCCI Central Contracts
Advertisment
Advertisment
Advertisment