/newsfirstlive-kannada/media/media_files/2025/09/22/asiya-begum-11-2025-09-22-12-20-46.jpg)
‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಸೀಸನ್​ 4ರ ಸ್ಪರ್ಧಿಯಾಗಿದ್ದ ಚಂದುಳ್ಳಿ ಚಲುವೆ ಆಸಿಯಾ ಬೇಗಮ್​. ಈ ಶೋ ಮೂಲಕ ಕಿರುತೆರೆಗೆ ಪರಿಚಯವಾದ ಆಸಿಯಾ ನಂತರ ಕಾಣಸಿಕೊಂಡಿದ್ದು ಭರ್ಜರಿ ಬ್ಯಾಚುಲರ್ಸ್​ ಶೋನಲ್ಲಿ. ಹಳ್ಳಿ ಹೈದ ಹನಮಂತನ ಮೆಂಟರ್​ ಆಗಿದ್ದ ಆಸಿಯಾ ಕರ್ನಾಟಕದ ಮನೆಮಾತಾದ್ರು. ಈ ಜೋಡಿ ಸೀಸನ್​ ಒಂದರ ರನ್ನರ್​ಅಪ್​ ಕೂಡ ಹೌದು. ಇವತ್ತಿಗೂ ಹನುಮ-ಆಸಿಯಾ ಟಾಸ್ಕ್​ ಟಾಕ್​ ಸೋಷಿಯಲ್​ ಮೀಡಿಯಾದಲ್ಲಿ ಓಡಾಡ್ತಿರ್ತವೆ.
ಭರ್ಜರಿ ಶೋನಲ್ಲೇ ಮಂಗಳಗೌರಿ ಖ್ಯಾತಿಯ ನಟಿ ಯಶಸ್ವಿನಿ ಹಾಗೂ ಆಸಿಯಾ ಪರಿಚಯವಾದ್ರು. ಇವ್ರಿಬ್ಬರ ಫ್ರೆಂಡ್ಶಿಪ್​ ಇಂದಿಗೂ ಅಷ್ಟೇ ಸೋಗಸಾಗಿದೆ. ಪರಸ್ಪರ ಸಾಥ್​ ಕೊಡ್ತಾ ಕೇರಿಯರ್​ ಬಿಲ್ಡ್​ ಮಾಡಿಕೊಳ್ತಿದ್ದಾರೆ. ಆಗಾಗ ವಿಭಿನ್ನ ಕಾನ್ಸೆಪ್ಟ್​ನ ರೀಲ್ಸ್​ ಮಾಡ್ತಾನೆ ಇರ್ತಾರೆ. ಈ ಬೆನ್ನಲ್ಲೇ ಮೊಗ್ಗಿನ ಮನಸ್ಸು ಸಿನಿಮಾದ ಹಾಡಿಗೆ ಗೆಳತಿಯರು ಕ್ಲಾಸಿಯಾಗಿ ರೀಲ್ಸ್​ ಮಾಡಿದ್ರು.
ಸದ್ಯ ಆಸಿಯಾ ಹೊಸ ಫೋಟೋಶೂಟ್​ ಮಾಡಿಸಿದ್ದು, ಶ್ವೇತ ವರ್ಣದ ಸೀರೆ ಉಟ್ಟು, ಕೈಯಲ್ಲಿ ತಾವರೆ ಹಿಡಿದು, ನದಿ ದಡದಲ್ಲಿ ನಲಿದಾಡಿದ್ದಾರೆ. ಆಸಿಯಾ ಲುಕ್​ಗೆ ಫ್ಯಾನ್ಸ್ ಫಿದಾ ಆಗಿದ್ದು, ಚಂದಕ್ಕಿಂತ ಚಂದ ಚಂದುಳ್ಳಿ ಚಲುವೆ ಎಂದು ನಟಿಯ ಹೊಸ ಲುಕ್​ನ ಹಾಡಿ ಹೋಗಳಿದ್ದಾರೆ. ಇನ್ನು ಕೆಲವರು ಪೌರಾಣಿಕ ಧಾರಾವಾಹಿ ಅಥವಾ ಸಿನಿಮಾದಲ್ಲಿ ನಟಿಸಿ ಎಂದು ಸಲಹೆ ನೀಡಿದ್ದಾರೆ.