/newsfirstlive-kannada/media/media_files/2025/10/17/bb-clash-2025-10-17-09-49-21.jpg)
ಬಿಗ್​ಬಾಸ್ ಸೀಸನ್​ 12ನಲ್ಲಿ ( Bigg Boss season 12) ನಿನ್ನೆ ನಡೆದ ಮಿಡ್​ವೀಕ್ ಎಲಿಮಿನೇಷ್​​ ವೇಳೆ ರಕ್ಷಿತಾ ಶೆಟ್ಟಿ ಹಾಗೂ ಜಾಹ್ನವಿ (Rakshita Shetty vs Jahnavi) ನಡುವೆ ಗಲಾಟೆ ಆಗಿದೆ. ಮನೆಯಿಂದ ಆಚೆ ಕಳುಹಿಸಲು ಪರಸ್ಪರ ಹೆಸರನ್ನು ಸೂಚಿಸಿಕೊಂಡರು. ಇದೇ ಗಲಾಟೆಗೆ ಕಾರಣವಾಗಿದೆ.
ಜಾಹ್ನವಿ ಫೇರ್ ಇಲ್ಲಾ
ನಾಮಿನೇಷನ್ ವೇಳೆ ರಕ್ಷಿತಾ, ಜಾಹ್ನವಿ ಅವರು ಟಾಸ್ಕ್ ಇರಲಿ, ಮನೆಯ ಹೊರಗೆ ಇರಲಿ ಫೇರ್ ಇಲ್ಲ.. ಎಲ್ಲಾ ಸರಿಯಾಗಿದ್ದರೂ ಅದನ್ನು ತಪ್ಪು ಅಂತಾನೆ ಹೇಳ್ತಾರೆ ಎಂದು ಆರೋಪ ಮಾಡಿದ್ದಾರೆ. ಈ ವೇಳೆ ಸ್ವಾರ್ಥಕ್ಕಾಗಿ ಎಂದು ಹೇಳಲು ಹೊರಟ ರಕ್ಷಿತಾ...ಅಷ್ಟೇ ಬಿಗ್​ಬಾಸ್ ಎಂದು ಹೇಳಿ ಮಾತು ಮುಗಿಸಿದ್ದಾರೆ.
ರಕ್ಷಿತಾ ಆಟದಲ್ಲಿ ಆನ್ ಅಂಡ್ ಆಫ್ ಇರುತ್ತೆ..!
ಇನ್ನೂ ಜಾಹ್ನವಿ ಕೂಡ ನಾಮಿನೇಷನ್​ನಲ್ಲಿ ರಕ್ಷಿತಾ ಹೆಸರು ತೆಗೆದುಕೊಂಡಿದ್ದಾರೆ.. ರಕ್ಷಿತಾ ಮೊದಲು ತುಂಬಾ ಆ್ಯಕ್ಟೀವ್ ಇದ್ರು.. ಆದ್ರೆ ಪ್ರಸ್ತುತ ಅವರ ಆಟದಲ್ಲಿ ಆನ್ ಅಂಡ್ ಆಫ್ ಆಗ್ತಾರೆ.. ನಿನ್ನೆ ನಡೆದ ಟಾಸ್ಕ್​ನಲ್ಲಿಯೂ ಚಂದ್ರಪ್ರಭಾ ಟೀಮ್​ನಲ್ಲಿ ನಮ್ಮ ಜೊತೆ ಅವರು ಇರ್ತಿಲ್ಲಿಲ್ಲ.. ಗುಂಪಿಗೆ ಸೇರದ ಪದ ಆಗಿದ್ದಾರೆ ಎಂದು ಕಾರಣ ಕೊಟ್ಟಿದ್ದಾರೆ..
ಇಂದಿನ ಬಿಗ್​ಬಾಸ್​ ಎಪಿಸೋಡ್​ನಲ್ಲಿ ಏನಾಗಲಿದೆ..?
ಬಿಬಿ12 ಇಂದಿನ ಪ್ರೋಮೊ ರಿಲೀಸ್ ಮಾಡಿದ್ದು.. ನಾಮಿನೇಷನ್ ಮುಗಿದ ಬಳಿಕ ಬಿಗ್ ಹೌಸ್​ನಲ್ಲಿ ಭಾರೀ ಹೈಡ್ರಾಮ ನಡೆದಿದೆ.. ಜಾಹ್ನವಿ ಹಾಗು ರಕ್ಷಿತ ನಡುವಿನ ವಾಕ್ಸಮರದಲ್ಲಿ ಅಶ್ವಿನಿ ಗೌಡ ಕೂಡ ಎಂಟ್ರೆ ಕೊಟ್ಟಿದ್ದಾರೆ.. ಮಾತಿನ ಭರದಲ್ಲಿ ಆಶ್ವಿನಿ ಅವರು ರಕ್ಷಿತಾಗಿ ನಿನ್​ ಡ್ರಾಮನೆಲ್ಲಾ ಬಾತ್​ರೂಂನಲ್ಲಿ ಇಟ್ಕೊ ಈಡಿಯಟ್​ ಎಂದು ಗದರಿದ್ದಾರೆ..ಇವೆಲ್ಲಾ ಬೆಳವಣಿಗಗಳ ಫುಲ್​ ಡಿಟೇಲ್ಸ್​ ಇಂದಿನ ಬಿಗ್​ಬಾಸ್​ ಎಪಿಸೋಡ್​ನಲ್ಲಿ ಪ್ರಸಾರವಾಗಲಿದೆ.