/newsfirstlive-kannada/media/media_files/2025/10/17/bb-satish-and-manju-2025-10-17-09-05-39.jpg)
ಬಿಗ್​ಬಾಸ್ ಸೀಸನ್ 12ರಲ್ಲಿ (Bigg Boss) ದಿನೇ ದಿನೇ ರೋಚಕ ತಿರುವುಗಳು ನಡೀತಿವೆ. ನಿನ್ನೆ ನಡೆದ ಮಿಡ್​ವೀಕ್ ಎಲಿಮಿನೇಷನ್​ನಲ್ಲಿ ಸತೀಶ್ ಕಡಬಮ್​ ಮನೆಯಿಂದ ಹೊರನಡೆದಿದ್ದಾರೆ. ಫೈನಲಿಸ್ಟ್ ಅಲ್ಲದ ಸ್ಪರ್ಧಿಗಳಿಂದ ಬಹುಮತದ ಆಯ್ಕೆಯ ಮೇರೆಗೆ ಈ ಎಲಿಮಿನೇಷನ್ ನೆಡೆದಿದೆ. ಅಷ್ಟಕ್ಕೂ ಮನೆಯಿಂದ ಹೊರನಡೆದ ವೇಳೆ ಸತೀಶ್, ಮುಂಜು ಭಾಷಿಣಿ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ಮಂಜು ಭಾಷಿಣಿ ಗುಂಪುಗಾರಿಕೆ ಮಾಡ್ತಾರೆ
ನಿನ್ನೆ ನಡೆದ ಸ್ಪರ್ಧಿಗಳ ಬಹುಮತದ ನಿರ್ಧಾರದಿಂದ ಹೊರನಡೆಯುವ ವೇಳೆ ತಮಗಾದ ಅನುಭವಗಳನ್ನು ವ್ಯಕ್ತಪಡಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಮುಂಜು ಭಾಷಿಣಿ ಗುಂಪುಗಾರಿಕೆ ಮಾಡಿ ನನ್ನನ್ನೇ ನಾಮಿನೇಟ್ ಮಾಡಲು ಸ್ಪರ್ಧಿಗಳಿಗೆ ಹೇಳ್ತಿದ್ರು. ಇದು ನನ್ನ ಗಮನಕ್ಕೆ ಬಂದಿದೆ ಎಂದು ಹೇಳಿದ್ದಾರೆ. ಸ್ಪರ್ಧಿಗಳು ಹೀಯಾಳಿಸುತ್ತಿದ್ದರ ಬಗ್ಗೆಯೂ ಸತೀಶ್ ಕಡಬಮ್ ಬೇಸರ ವ್ಯಕ್ತಪಡಿಸಿದ್ದಾರೆ.
ಜನತೆಯ ನಿರ್ಧಾರವೇ ಅಂತಿಮ ನಿರ್ಧಾರ..!
ಫಿನಾಲಿಸ್ಟ್ ಅಲ್ಲದ ಸ್ಪರ್ಧಿಗಳಿಂದ ಬಹುಮತದ ನಿರ್ಧಾದ ಮೇರೆಗೆ ನಡೆದ ಎಲಿಮಿನೇಷನ್​ನಲ್ಲಿ ಬಿಗ್​ಬಾಸ್ ಮತ್ತೊಂದು ಟ್ವಿಸ್ಟ್ ನೀಡಿತ್ತು. ಅದೇನಂದ್ರೆ, ಜನತೆಯ ನಿರ್ಧಾರವೇ ಅಂತಿಮ ನಿರ್ಧಾರ, ಈ ವೇಳೆ ಬಿಗ್​ಬಾಸ್ ಜನತೆಯ ನಿರ್ಧಾರ ಏನಾಗಿರಬುಹುದು ಎಂದಾಗ.. ಮಂಜು ಭಾಷಿಣಿ ಹೆಸರನ್ನು ತಗೆದುಕೊಂಡ ಸತೀಶ್, ಮಂಜುಭಾಷಿಣಿ ಅವರಿಗೆ ಮೊಣಕಾಲು ನೋವು ಇರುವುದರಿಂದ ಅವರಿಗೆ ಟಾಸ್ಕ್ ಆಡಲು ಆಗಲ್ಲ ಹಾಗೂ ಅವರು ಪದೇ ಪದೆ ನಾನು ಬಂದಿರುವುದು ಕೆಲವೇ ದಿನಗಳು ಇದ್ದು ಹೋಗುವುದಕ್ಕೆ ಎಂದು ಹೇಳಿರುವುದನ್ನ ಸತೀಶ್ ಪ್ರಸ್ತಾಪಿಸಿದ್ದಾರೆ.
ಕಾಕತಾಳಿಯವೋ ಏನೋ ಫೈನಲಿಸ್ಟ್ ಅಲ್ಲದ ಸ್ಪರ್ಧಿಗಳ ನಿರ್ಧಾರ ಹಾಗು ಜನತಿಯ ನಿರ್ಧಾರ ಒಂದೇ ಆಗಿದ್ದರಿಂದ ಸತೀಶ್ ಕಡಬಮ್ ಮನೆಯಿಂದ ಹೊರನಡೆದಿದ್ದಾರೆ.