/newsfirstlive-kannada/media/media_files/2025/11/09/chandraprabha_risha_kavya_bbk12-2025-11-09-12-49-38.jpg)
ಕಳೆದ ವಾರ ಬಿಗ್‌ಬಾಸ್ ಮನೆಯಲ್ಲಿ ಟಾಸ್ಕ್‌ಗಳು ಇರಲಿಲ್ಲ. ಆದರೂ ಎಲ್ಲ ಸ್ಪರ್ಧಿಗಳ ವ್ಯಕ್ತಿತ್ವದ ಪರೀಕ್ಷೆ ನಡೆದಿತ್ತು. ಇದರಲ್ಲಿ ಸ್ಪರ್ಧಿಗಳ ಮುಖಕ್ಕೆ ಮಸಿ ಬಳಿಯೋ ಟಾಸ್ಕ್ ಕೂಡ ಒಂದು. ಇದರಲ್ಲಿ ಚಂದ್ರಪ್ರಭ ಕಾವ್ಯ ಮುಖಕ್ಕೆ ಮಸಿ ಬಳಿಯಲು ಹೇಳಿದ ಕಾರಣ ತುಂಬಾ ಸುದ್ದಿಯಾಗಿತ್ತು. ಇದೀಗ ಸುದೀಪ್ ಅವರ ವಾರದ ಪಂಚಾಯ್ತಿಯಲ್ಲೂ ಚರ್ಚೆಗೆ ಬಂದಿದೆ.
ಕಾವ್ಯ ಹಾಗೂ ಗಿಲ್ಲಿಯವರ ನಡುವಿನ ಆತ್ಮೀಯತೆಯನ್ನೇ ಕಾರಣ ಇಟ್ಟುಕೊಂಡು ಕಾವ್ಯ ಮಾಡುತ್ತಿರುವುದು ತಪ್ಪು ಎಲ್ಲೋ ತನ್ನ ತಂಗಿ ಹಾದಿ ತಪ್ಪುತ್ತಿದ್ದಾಳಾ? ಅವಳೂ ಪ್ರೀತಿ ಪ್ರೇಮ ಅಂದುಕೊಂಡು ತನ್ನ ಹೆಸರು ಹಾಳು ಮಾಡಿಕೊಳ್ಳುತ್ತಿದ್ದಾಳಾ ಅನ್ನೋ ಕಾರಣಕ್ಕೆ ಕಾವ್ಯ ಮುಖಕ್ಕೆ ಮಸಿ ಬಳಿಯುತ್ತಿರುವುದಾಗಿ ಹೇಳಿದ್ದರು. ಇದೇ ಈಗ ಕಿಚ್ಚ ಪಂಚಾಯ್ತಿಯಲ್ಲೂ ಸುದ್ದಿಯಾಗಿದೆ.
ಇದನ್ನೂ ಓದಿ:BBK12; ರಿಷಾ ದೊಡ್ಮನೆಯಿಂದ ಔಟ್​.. ಈ ನಿರ್ಧಾರ ಯಾರ ಕೈಯಲ್ಲಿದೆ ಗೊತ್ತಾ?
/filters:format(webp)/newsfirstlive-kannada/media/media_files/2025/10/31/bbk12-4-2025-10-31-08-34-24.jpg)
ಚಂದ್ರಪ್ರಭ ಕಾವ್ಯರನ್ನು ತನ್ನ ತಂಗಿ ಎಂದೇ ಹೇಳುತ್ತಿರುತ್ತಾರೆ. ಹೀಗಿರುವಾಗ ಅವರು ಎಲ್ಲರ ಎದುರು ಕಾವ್ಯರನ್ನು ಕರೆದು ಕನ್ನಡದ ಸಮಸ್ತ ಜನತೆಯ ಎದುರು ಹಾಗೆ ಹೇಳಿದ್ದು ಸರಿನಾ?, ಒಂದೊಮ್ಮೆ ತಂಗಿ ಎಂದು ತಿಳಿದಿದ್ದು ನಿಜನೇ ಆಗಿದ್ದರೆ ಒಬ್ಬ ಅಣ್ಣನಾದವನು ತನ್ನ ತಂಗಿಗೆ ಹೀಗೆ ಎಲ್ಲರ ಎದುರು ಹೇಳ್ತಾನಾ?, ಅವಳನ್ನು ಮಾತ್ರ ಕರೆದು ಹೇಳುತ್ತಾನಾ? ಎಂದು ಸುದೀಪ್ ಪ್ರಶ್ನೆ ಮಾಡಿದ್ದರು.
ಇಷ್ಟು ಮಾತ್ರವಲ್ಲ, ಹಾಗೊಂದು ವೇಳೆ ಗಿಲ್ಲಿ ಕಾವ್ಯರ ಸ್ನೇಹ ತಪ್ಪೇ ಅನ್ನುವುದಾದರೆ ಚಂದ್ರಪ್ರಭ ಅವರ ನಡೆಯಲ್ಲಿ ಜನರಿಗೆ ತೋರಿಸುತ್ತಿರುವುದೇನು ಅನ್ನೋದನ್ನೂ ಅರ್ಥ ಮಾಡಿಸಿದ್ದರು. ಕಾವ್ಯ ಬಗ್ಗೆ ಅಷ್ಟೆಲ್ಲ ಹೇಳಿದ್ದ ಇದೇ ಚಂದ್ರಪ್ರಭ ರಿಷಾ ಜೊತೆಗೆ ಕಳೆದ ವಾರ ಹೇಗಿದ್ದರು ಅನ್ನೋದರ ವಿಟಿ ತೋರಿಸಿದ ಮೇಲೆ ಚಂದ್ರಪ್ರಭಗೆ ತಾನೆಂಥ ತಪ್ಪು ಮಾಡಿದ್ದೆ ಅನ್ನೋದು ಅರಿವಾಗಿದ್ದು, ಅವರು ಕಾವ್ಯರಲ್ಲಿ ಕ್ಷಮೆ ಕೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us