/newsfirstlive-kannada/media/media_files/2025/10/12/rakshitha_sudeep-2025-10-12-19-53-22.jpg)
ಬಿಗ್‌ಬಾಸ್ ಸೀಸನ್- 12 ಹಲವು ಹೊಸತುಗಳನ್ನು ನೀಡಿದೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿದ್ದು ಕರುನಾಡಿಗೆ ಹೊಸ ಕನ್ನಡವನ್ನು ಪರಿಚಯಿಸಿದೆ. ಈ ಕೀರ್ತಿ ಹೋಗೋದು ರಕ್ಷಿತಾ ಶೆಟ್ಟಿಗೆ.
ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟು ಒಂದು ವಾರವಷ್ಟೇ ಆಗಿದ್ದರೂ ರಕ್ಷಿತಾ ಶೆಟ್ಡಿ ಅಷ್ಟರಲ್ಲೇ ತಮ್ಮ ಸಾಮರ್ಥ್ಯದ ಪರಿಚಯವನ್ನು ಎಲ್ಲರಿಗೂ ಮಾಡಿಕೊಟ್ಟಿದ್ದಾರೆ. ಅವರು ಎಷ್ಟು ಜಾಲಿ ಆಗಿರುತ್ತಾರೋ ಅದಕ್ಕಿಂತ ಮೂರು ಪಟ್ಟು ಕಿರಿಕ್ ಪಾರ್ಟಿನೂ ಹೌದು ಅನ್ನೋದನ್ನು ತೋರಿಸಿದ್ದಾರೆ.
ಇದೀಗ ಅವರು ಹೊಸ ಕನ್ನಡವನ್ನು ಪರಿಚಯಿಸಿದ್ದು, ಅವರ ಕನ್ನಡ ಅರ್ಥ ಮಾಡಿಕೊಳ್ಳೋಕೆ ತಲೆ ಕೆರೆದುಕೊಳ್ಳುವಂತಾಗಿದೆ. ಬಿಗ್‌ಬಾಸ್ ಅಂದ್ರೆ ಏನು?, ಇದನ್ನು ಹೇಗೆ ಪ್ರಮೋಟ್ ಮಾಡ್ತೀರಾ ಎಂದು ಸುದೀಪ್ ಕೇಳಿದ ಪ್ರಶ್ನೆಗೆ ರಕ್ಷಿತಾ ನೀಡಿರುವ ಉತ್ತರ ಕೇಳಿ ಸ್ವತಃ ಸುದೀಪ್ ಅವರೇ ದಂಗಾಗಿ ಹೋಗಿದ್ದಾರೆ. ಎರಡನೇ ಸ್ಪರ್ಧಿ ಮೂರನೇ ಸ್ಪರ್ಧಿ ಅಂದು ಸುದೀಪ್ ಅವರನ್ನೇ ಕನ್‌ಫ್ಯೂಸ್ ಮಾಡಿ ಇಟ್ಟಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ