ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್​ ಬಾಸ್​ ಸೀಸನ್​- 12 ಶೋ ನಡೆಸುತ್ತಿದ್ದ ಜಾಲಿವುಡ್​ ಸ್ಟುಡಿಯೋಗೆ ಬೀಗ ಜಡಿಯಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಇಲ್ಲದ ಕಾರಣ ಸ್ಟುಡಿಯೋಗೆ ರಾಮನಗರದ ತಹಶೀಲ್ದಾರ್ ತೇಜಸ್ವಿನಿ ಅವರು ಬೀಗ ಹಾಕಿದ್ದಾರೆ. ಬಿಗ್ ಬಾಸ್​- 12ರ ಸ್ಪರ್ಧಿಗಳನ್ನು ಹೊರಗೆ ಕರೆದುಕೊಂಡು ಬರಲಾಗಿದೆ.
ಸದ್ಯ ಬಿಗ್ ಬಾಸ್​ ಸೀಸನ್​ 12ರ ಎಲ್ಲ 17 ಕಂಟೆಸ್ಟೆಂಟ್​ಗಳನ್ನು ಸಿಲಿಕಾನ್ ಸಿಟಿಯ ಈಗಲ್ ಟನ್​ ರೆಸಾರ್ಟ್​ಗೆ ಶಿಫ್ಟ್​ ಮಾಡಲಾಗಿದೆ. ಇನ್ನೋವಾ ಸೇರಿದಂತೆ ಏಳೆಂಟು ಕಾರಿನಲ್ಲಿ ಸ್ಪರ್ಧಿಗಳನ್ನು ಕರೆದುಕೊಂಡು ಹೋಗಲಾಗಿದೆ. ಕಾರಿನಲ್ಲಿ ತೆರಳುವ ವೇಳೆ ಕಂಟೆಸ್ಟೆಂಟ್ಸ್​ ಮುಖ ಕಾಣದಂತೆ ಕಾರಿನ ಗ್ಲಾಸ್​ಗೆ ಬಟ್ಟೆಗಳನ್ನ ಹಾಕಲಾಗಿತ್ತು.
ಇದನ್ನೂ ಓದಿ:ರಾಯಚೂರಲ್ಲಿ ಕೆಲಸ ಮಾಡಲು ಬಯಸುವರಿಗೆ ಗುಡ್​ನ್ಯೂಸ್.. RIMSನಲ್ಲಿ ಉದ್ಯೋಗಾವಕಾಶಗಳು
ಬಿಡದಿ ಬಳಿ ಇರುವ ಜಾಲಿವುಡ್​ ಸ್ಟುಡಿಯೋಗೆ ಬೀಗ ಹಾಕಿದ್ದರಿಂದ ಪೊಲೀಸ್ ಭದ್ರತೆಯಲ್ಲಿ ಸ್ಪರ್ಧಿಗಳನ್ನು ಈಗಲ್​ಟನ್ ರೆಸಾರ್ಟ್​ಗೆ ಕರೆದುಕೊಂಡು ಹೋಗಲಾಗಿದೆ. ಒಂದೊಂದು ಕಾರು ಒಂದೊಂದು ರಸ್ತೆ ಮೂಲಕ ರೆಸಾರ್ಟ್​ ತಲುಪಿವೆ. ಜಾಲಿವುಡ್​ ಸ್ಟುಡಿಯೋಗೆ ನೋಟಿಸ್ ನೀಡಲಾಗಿತ್ತು. ಆದರೆ ಇದಕ್ಕೆ ಪ್ರತಿಕ್ರಿಯೆ ಮಾಡಿರಲಿಲ್ಲ. ಹೀಗಾಗಿ ಇವತ್ತು ಸ್ಟುಡಿಯೋವನ್ನ ಲಾಕ್ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ