/newsfirstlive-kannada/media/media_files/2025/09/28/bbk12_9_contestant-2025-09-28-20-43-52.jpg)
ಅದ್ಧೂರಿಯಾಗಿ ಬಿಗ್‌ಬಾಸ್ ಕನ್ನಡ ಸೀಸನ್ 12 ಶುರುವಾಗಿದ್ದು ಈ ಬಾರಿಯೂ ವಿಭಿನ್ನವಾದ ಸ್ಪರ್ಧಿಗಳ ಗುಂಪು ದೊಡ್ಮನೆಗೆ ಕಾಲಿಟ್ಟಿದ್ದಾರೆ. ಕಿಚ್ಚ ಸುದೀಪ್ ನಿರೂಪಣೆಯನ್ನು ಇಡೀ ಕರುನಾಡೆಲ್ಲ ಸವಿಯಲಿದೆ. ಎಲ್ಲ ಸ್ಪರ್ಧಿಗಳನ್ನು ಸುದೀಪ್ ಅವರು ಬಿಗ್‌ಬಾಸ್ ವೇದಿಕೆಗೆ ಬರಮಾಡಿಕೊಂಡು, ಒಬ್ಬೊಬ್ಬರನ್ನೇ ಪರಿಚಯಿಸಿದರು. ಸದ್ಯ 12ನೇ ಸೀಸನ್​ಗೆ ಯಾರು ಯಾರು ಬಂದಿದ್ದಾರೆ ಎಂದು ನೋಡುವುದಾದರೆ..
ಕಾಕ್ರೋಚ್ ಸುಧಿ: ಸ್ಯಾಂಡಲ್​ವುಡ್​ನಲ್ಲಿ ವಿಲನ್ ರೋಲ್ ಪ್ಲೇ ಮಾಡುವ ಅದ್ಭುತ ನಟ. ಕಾಕ್ರೋಚ್ ಈ ಸೀಸನ್‌ನ ಮೊದಲ ಸ್ಪರ್ಧಿ ಎನ್ನುವುದು ವಿಶೇಷ. ಸಲಗ, ಟಗರು, ಭೀಮ ಸಿನಿಮಾ ಖ್ಯಾತಿಯ ಕಾಕ್ರೋಚ್ ಈಗಾಗಲೇ ಒಂದೆರಡು ಬಾರಿ ಆಫರ್ ಬಂದಿದ್ದು, ಕೆಲಸದ ನಿಮಿತ್ತ ಸಾಧ್ಯವಾಗಿರಲಿಲ್ಲ. ಈಗ ಸಾಧ್ಯವಾಗಿದೆ.
ಕಾವ್ಯ ಶೈವ: ಕಿರುತೆರೆಯಿಂದ ಸ್ಯಾಂಡಲ್​ವುಡ್​ಗೆ ಪಾದಾರ್ಪಣೆ ಮಾಡಿರುವ ಕಾವ್ಯ ಬಿಗ್‌ಬಾಸ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಕೆಂಡಸಂಪಿಗೆ ಸೀರಿಯಲ್‌ನಿಂದ ಗಮನ ಸೆಳೆದ ಇವರು ಕೊತ್ತಲವಾಡಿ ಸಿನಿಮಾದಲ್ಲಿ ಅಭಿನಯಿಸಿದ್ದರು.
ಡಾಗ್ ಸತೀಶ್: ಇವರು ಡಿವೋರ್ಸ್ ಬಳಿಕ ಮಗನೊಂದಿಗೆ ಜೀವನ ನಡೆಸುತ್ತಿರುವುದಾಗಿ ಹೇಳಿದ್ದಾರೆ. ಬಿಗ್​ ಬಾಸ್​ನ 3ನೇ ಸ್ಪರ್ಧಿ ಎಂದರೆ ಡಾಗ್ ಸತೀಶ್. ಇವರು ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ನಾಯಿಗಳನ್ನು ಖರೀದಿ ಹಾಗೂ ಮಾರಾಟ ಮಾಡುತ್ತಾರೆ.
ನಾಲ್ಕನೇ ಕಂಟೆಸ್ಟೆಂಟ್ ಎಂದರೆ ಅದು ಇಡೀ ಕರುನಾಡನ್ನು ನಗಿಸಿ ಮನೆ ಮಾತಾಗಿದ್ದ ಕಾಮಿಡಿ ಕಲಾವಿದ ಗಿಲ್ಲಿ ನಟ ದೊಡ್ಮನೆಗೆ ಎಂಟ್ರಿಯಾಗಿದ್ದಾರೆ. ಕಾಮಿಡಿ ಕಿಲಾಡಿಗಳು, ಭರ್ಜರಿ ಬ್ಯಾಚುಲರ್ಸ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಕ್ವಾಟ್ಲೆ ಕಿಚನ್ ರಿಯಾಲಿಟಿ ಶೋಗಳಲ್ಲೂ ಗಿಲ್ಲಿ ಮಿಂಚಿದ್ದಾರೆ.
ಇನ್ನು 5ನೇ ಸ್ಪರ್ಧಿಯಾಗಿ ಆ್ಯಕ್ಟಿಂಗ್, ಆ್ಯಂಕರಿಂಗ್ ಹಾಗೂ ರಿಯಾಲಿಟಿ ಶೋಗಳ ಮೂಲಕ ಜನರ ಮನಗೆದ್ದಂತಹ ಜಾನ್ವಿ ಅವರು ಬಿಗ್ ಬಾಸ್​ ಮನೆಗೆ ಆಗಮಿಸಿದ್ದಾರೆ. ಗಿಚ್ಚಿಗಿಲಿಗಿಲಿ, ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋಗಳ ಮೂಲಕ ಜಾನ್ವಿ ಮಿಂಚಿದ್ದರು.
ಆರನೇ ಸ್ಪರ್ಧಿಯಾಗಿ ಸ್ಟೈಲಿಶ್ ಲುಕ್, ಮ್ಯಾನರಿಸಂನಿಂದ ಧನುಷ್ ಅವರು ಬಿಗ್​ ಬಾಸ್​ ಮನೆಗೆ ಬಂದಿದ್ದಾರೆ. ಗೀತಾ ಸೀರಿಯಲ್ ಚಾಕೊಲೇಟ್ ಬಾಯ್ ನಟ ಧನುಷ್ ಗೌಡ ಆಗಿ ಗುರುತಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿ ಧನುಷ್ ಸಿಕ್ಕಾಪಟ್ಟೆ ಫ್ಯಾನ್ಸ್ ಫಾಲೋವರ್ಸ್​ ಇದ್ದಾರೆ.
7ನೇಯವರು ಆಗಿ ಕಾಮಿಡಿ ಕಲಾವಿದ ಚಂದ್ರಪ್ರಭ ಅವರು ಮನೆಗೆ ಬಂದಿದ್ದಾರೆ. ಚಂದ್ರಪ್ರಭ ಇದ್ದಲ್ಲಿ ನಗುವಿಗೆ ಕೊರತೆ ಇಲ್ಲ ಎನ್ನುವುದು ವಿಶೇಷ.
8ನೇ ಸ್ಪರ್ಧಿಯಾಗಿ ಮಂಜು ಭಾಷಿಣಿ ಮನೆಗೆ ಬಂದ್ರು, ಸಿಲ್ಲಿ ಲಲ್ಲಿ ಧಾರಾವಾಹಿ ಮೂಲಕ ಮನೆಮಾತಾಗಿದ್ದ ಮಂಜು ಭಾಷಿಣಿ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ಭೂಮಿ ತಾಯಿ ಸಿನಿಮಾ ಮೂಲಕ ಜನಪ್ರಿಯರಾದ ಇವರು ಪುಟ್ಟಕ್ಕನ ಮಕ್ಕಳು ಸೀರಿಯಲ್‌ನ ನಟಿಸುತ್ತಿದ್ದರು.
9ನೇ ಕಂಟೆಸ್ಟೆಂಟ್​ ಆಗಿ ಹುಡುಗರ ಮನಗೆದ್ದ ಗೊಂಬೆ ರಾಶಿಕಾ ಅವರು ಮನೆಯವರ ಮನಸನ್ನೂ ಕದೀತಾರಾ ಎಂದು ಕಾದು ನೋಡಬೇಕಿದೆ. ಯೋಗರಾಜ್ ಭಟ್ ನಿರ್ದೇಶನದ ಮನದ ಕಡಲು ಸಿನಿಮಾದ ರಾಶಿಕಾ ಶೆಟ್ಟಿ ಕೂಡ ಈ ಸೀಸನ್‌ನ ಸ್ಪರ್ಧಿಯಾಗಿದ್ದಾರೆ.
ಅಭಿಷೇಕ್ ಅವರು ಬಿಗ್​ಬಾಸ್​ ಮನೆಗೆ 10ನೇ ಸ್ಪರ್ಧಿಯಾಗಿ ಆಗಮಿಸಿದ್ದಾರೆ. ಮೌರ್ಯ, ಸಾರ್ಥಕ್ ಆಯ್ತು, ಈಗ ತನ್ನ ಹೊಸ ಲುಕ್‌ನಲ್ಲೇ ಹುಡುಗಿಯರ ಮನ ಗೆಲ್ಲಲು ಚೋರ ಅಭಿಷೇಕ್ ಬಿಗ್ ಬಾಸ್ ಮನೆಗೆ ಎಂಟ್ರಿಯಾಗಿದ್ದಾರೆ.
11ನೇ ಸ್ಪರ್ಧಿ ಮಲ್ಲಮ್ಮ: ಮಲ್ಲಮ್ಮ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸಣ್ಣ ಗ್ರಾಮದವರು. ಕೆಲಸಕ್ಕೆಂದು ಬೆಂಗಳೂರಿಗೆ ಬಂದ ಅವರು ತಮ್ಮದೇ ಆದ ಮಲ್ಲಮ್ಮ ಟಾಕ್ಸ್ ಹೆಸರಿನ ಇನ್​ಸ್ಟಾಗ್ರಾಂ ಹಾಗೂ ಯೂಟ್ಯೂಬ್ ಚಾನಲ್ ಹೊಂದಿದ್ದಾರೆ.
12ನೇ ಕಂಟೆಸ್ಟೆಂಟ್​ ಆಗಿ ಅಶ್ವಿನಿ ಎಸ್.ಎನ್ ಬಂದಿದ್ದಾರೆ. ಪದವಿ ಆದ ಮೇಲೆ ಇವರು ನಿರೂಪಕಿ ಆದರು. ಮೊದಲ ಪ್ರಾಜೆಕ್ಟ್ ಅನುರಾಧ ಸಂಗಮ ಧಾರಾವಾಹಿಯಲ್ಲಿ ನಟಿಸಿ, ಕುಲವಧು, ಗಿರಿಜಾ ಕಲ್ಯಾಣ ಸೀರಿಯಲ್​ನಲ್ಲಿ ಅಭಿನಯಿಸಿದ್ದರು. ಮುದ್ದುಲಕ್ಷ್ಮೀ ಸೀರಿಯಲ್​ನಲ್ಲಿ ಅಶ್ವಿನಿ ಅವರು ನೆಗೆಟಿವ್ ಶೇಡ್‌ನಲ್ಲಿ ಸಖತ್ ಆಗಿಯೇ ಅಭಿನಯ ಮಾಡಿದ್ದರು.
ವ್ಯಕ್ತಿತ್ವದ ಆಟದಲ್ಲಿ ಗೆಲ್ಲೋ ವಿಶ್ವಾಸದಲ್ಲಿ ದೊಡ್ಮನೆಗೆ ಕಿರುತೆರೆ ಸ್ಟಾರ್ ಧ್ರುವಂತ್ ಪ್ರವೇಶಿಸಿದ್ದಾರೆ. ಇವರು ಬಿಗ್ ಬಾಸ್​ಗೆ 13ನೇ ಸ್ಪರ್ಧಿ ಆಗಿದ್ದಾರೆ.
ಬಿಗ್​ಬಾಸ್​ಗೆ 14ನೇ ಸ್ಪರ್ಧಿಯಾಗಿ ಯೂಟ್ಯೂಬರ್, ಸೋಷಿಯಲ್ ಮೀಡಿಯಾ ಸ್ಟಾರ್ ರಕ್ಷಿತಾ ಶೆಟ್ಟಿ ಆಗಮಿಸಿದ್ದಾರೆ. ಅಡುಗೆ ರೆಸಿಪಿ ಅನ್ನು ರಕ್ಷಿತಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ.
15ನೇ ಕಂಟೆಸ್ಟೆಂಟ್ ಆಗಿ ಬಾಡಿ ಬಿಲ್ಡರ್​ ಕರಿಬಸಪ್ಪ ಅವರು ಬಿಗ್​ ಬಾಸ್​ ಮನೆಗೆ ಬಂದಿದ್ದಾರೆ. ಇಂಟರ್ನ್ಯಾಷನಲ್ ಬಾಡಿ ಬಿಲ್ಡರ್ ಆಗಿದ್ದಾರೆ ಇವರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಗೆದ್ದಿರುವ ಕರಿಬಸಪ್ಪ ದೊಡ್ಮನೆಯಲ್ಲಿ ವಿನ್ ಆಗುತ್ತಾರಾ ಎಂದು ಕಾದು ನೋಡಬೇಕು.
ಉತ್ತರ ಕರ್ನಾಟಕದ ಜಾನಪದ ಜಲಾವಿದ ನಾ ಡ್ರೈವರಾ, ನೀ ನನ್ನ ಲವ್ವರಾ ಎಂದು ಹಾಡಿದ್ದ ಮಾಳು ಅವರು 16ನೇ ಕಂಟೆಸ್ಟೆಂಟ್ ಆಗಿದ್ದಾರೆ.
ಬಿಗ್​​ಬಾಸ್ ಮನೆಗೆ ಸಾಹಿತ್ಯಸಕ್ತೆ, ಧಾರಾವಾಹಿ ನಟಿ ಸ್ಪಂದನ ಎಂಟ್ರಿ ಕೊಟ್ಟಿದ್ದಾರೆ. ಮೈಸೂರಿನ ಈ ಚೆಲುವೆ ಬಿಗ್​​ಬಾಸ್​ಗೆ ಇದೀಗ 17ನೇ ಸ್ಪರ್ಧಿಯಾಗಿ ಬಂದಿದ್ದಾರೆ.
ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎನ್ನುವ ಅಶ್ವಿನಿ ಗೌಡ ಅವರು 18ನೇ ಕಂಟೆಸ್ಟೆಂಟ್​ ಆಗಿ ಬಿಗ್​ ಬಾಸ್​ ಮನೆಗೆ ಆಗಮಿಸಿದ್ದಾರೆ.
19ನೇ ಸ್ಪರ್ಧಿಯಾಗಿ RJ ಅಮಿತ್ ಅವರು ಮನೆಗೆ ಹೊಸ ಲುಕ್​ನಲ್ಲಿ ಬಂದಿದ್ದಾರೆ. ಮಾತಿನಲ್ಲೇ ಮೋಡಿ ಮಾಡೋ ಬೆಂಗಳೂರಿನ ಪ್ರತಿಭೆ ಅಮಿತ್ ಅವರ ಮ್ಯಾಜಿಕ್ ಬಿಗ್ ಬಾಸ್‌ನಲ್ಲಿ ಹೇಗಿರುತ್ತೆ ಎನ್ನುವುದು ಗೊತ್ತಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ