/newsfirstlive-kannada/media/media_files/2025/10/12/sudeep_bbk12-2025-10-12-18-48-05.jpg)
ಬಿಗ್‌ಬಾಸ್ ಸೀಸನ್- 12 ಶುರುವಾದಾಗಿನಿಂದಲೂ ಅಶ್ವಿನಿ ಗೌಡ ಮನೆಯಲ್ಲಿ ತುಂಬಾ ಡಾಮಿನೇಟಿಂಗ್ ಆಟ ಆಡುತ್ತಿದ್ದಾರೆ. ಮೊದಲ ವಾರದಲ್ಲಿ ರಾಜಮಾತೆ ಅನಿಸಿಕೊಂಡು ತಮ್ಮದೇ ಅಬ್ಬರ ತೋರಿದರು. 2ನೇ ವಾರದಲ್ಲೂ ತಮ್ಮ ಪಟ್ಟು ಮುಂದುವರಿಸಿದರು. ಇದೀಗ ಅವರಿಗೆ ಡವ್ ರಾಣಿ ಪಟ್ಟ ನೀಡಿದೆ.
ಬಿಗ್‌ಬಾಸ್ ಆರಂಭವಾದಾಗಿನಿಂದಲೂ ಯಾರಾದ್ದಾದರೂ ಮಾತು ಸದಾ ಕೇಳುತ್ತದೆ ಎನ್ನುವುದಾದರೆ ಅದು ಅಶ್ವನಿ ಗೌಡದ್ದು. ಮೊದಲ ವಾರ ರಾಜಮಾತೆಯಾಗಿ ತಮ್ಮ ಅಬ್ಬರ ತೋರಿಸಿದ್ದ ಅವರು ಎರಡನೇ ವಾರ ಅಸುರ ರಾಜನ ಆಗಮನವಾಗಿದ್ದರೂ ಅವನನ್ನೂ ಬದಿಗಿರಿಸಿ ತಮ್ಮದೇ ಆಟ ಆಡಿದ್ದರು. ಇದೇ ಇವರಿಗೆ ಡವ್ ರಾಣಿ ಪಟ್ಟ ಸಿಗುವಂತೆ ಮಾಡಿದೆ.
ಇದನ್ನೂ ಓದಿ: ಒಂದು ಹೆಣ್ಣುಗೋಸ್ಕರ ಈ ಮಟ್ಟಕ್ಕೆ ಹೋಗೋದಾ?.. DKS ಸಹೋದರರ ವಿರುದ್ಧ ಶಾಸಕ ಮುನಿರತ್ನ ಕೆಂಡ!
ವಾರದ ಕಥೆ ಕಿಚ್ಚನ ಜೊತೆಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ಕಿರೀಟ ತೊಡಿಸುವ ಸಮಯ ಬಂದಿತ್ತು. ಆಗ ಅಶ್ವಿನಿ, ಸ್ಪಂದನಾ, ಕಾವ್ಯ, ಗಿಲ್ಲಿ ಹಾಗೂ ಮಂಜು ಭಾಷಿಣಿ ಎಲ್ಲರೂ ಅಶ್ವಿನಿ ಗೌಡಗೆ ಡವ್ ರಾಣಿ ಕಿರೀಟ ತೊಡಿಸಿದ್ದಾರೆ. ಜಗಳವಾದಾಗ ವಿಧ ವಿಧವಾಗಿ ಡವ್ ಮಾಡ್ತಾರೆ ಅನ್ನೋ ಕಾರಣಕ್ಕೆ ಈ ಕಿರೀಟ ತೊಡಿಸಿದ್ದಾಗಿ ಸ್ಪಂದನಾ ಹೇಳಿದ್ರೆ, ಬೇಡದಿರೋ ವಿಷ್ಯಕ್ಕೆಲ್ಲ ತಲೆ ಹಾಕುತ್ತಲೇ ಇರುತ್ತಾರೆ ಹಾಗಾಗಿ ಡವ್ ರಾಣಿ ಕಿರೀಟ ತೊಡಿಸಿದೆ ಎಂದು ಗಿಲ್ಲಿ ಹೇಳುತ್ತಾರೆ.
ಅಶ್ವಿನಿ ತಮ್ಮ ಅಧಿಕಾರವನ್ನು ಚಲಾಯಿಸುವ ಎಲ್ಲ ಪ್ರಯತ್ನವನ್ನೂ ಮಾಡುತ್ತಿದ್ದಾರೆ ಅನ್ನೋದು ನಿಜವೇ ಆಗಿದ್ರೂ, ಹೀಗೆ ಎಲ್ಲರೂ ಅವರಿಗೆ ಡವ್ ರಾಣಿ ಪಟ್ಟ ನೀಡಿದ ಬಗ್ಗೆ ಸುದೀಪ್ ಏನ್ ಹೇಳ್ತಾರೋ ಎನ್ನುವುದು ಕುತೂಹಲ ಮೂಡಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ