BBK12; ನೀನು ದೊಡ್ಡ ಡ್ರಮ್​.. ಕಾವ್ಯಗಾಗಿ ಗಿಲ್ಲಿ ನಟ- ರಿಷಾ ಮಧ್ಯೆ ಮಾತಿನ ಮಲ್ಲಯುದ್ಧ..!

ಇದ್ದಕ್ಕಿದ್ದಂತೆ ಫುಲ್ ಗರಂ ಆದ ರಿಷಾ ಜೋರು ಧ್ವನಿಯಲ್ಲಿ, ನಿನ್ನ ಹತ್ರ ನಾನು ಅನಿಸಿಕೊಳ್ಳಲ್ಲ ಗಿಲ್ಲಿ. ಬಂದಾಗಿಂದ ನೋಡುತ್ತ ಇದ್ದೀನಿ, ಕಾವ್ಯ..ಕಾವ್ಯ..ಕಾವ್ಯ..ಕಾವ್ಯ.. ಅಂತನೇ ಇರುತ್ತೀಯಾ ಎಂದು ಕಿರುಚಾಡಿದ್ದಾರೆ.

author-image
Bhimappa
GILLI_KAVYA
Advertisment

ದೊಡ್ಮನೆಯಲ್ಲಿ ಹೊಸ ಹೊಸ ಟಾಸ್ಕ್​ಗಳನ್ನು ಕೊಡಲಾಗುತ್ತಿದೆ. ಬಿಗ್​ಬಾಸ್​ನಿಂದ ಈ ವಾರ ಹೊರ ಹೋಗಲಿರುವ ಸ್ಪರ್ಧಿಗಳ ಲಿಸ್ಟ್ ಘೋಷಣೆ ಮಾಡಲಾಗಿದೆ.​ ಒಟ್ಟು 8 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಇದರಿಂದ ನಾಮಿನೇಟ್ ಆದವರ ಎದೆ ಢವ..ಢವ ಎನ್ನುತ್ತಿದೆ. ಇದರ ಬೆನ್ನಲ್ಲೇ ಕಾವ್ಯಗಾಗಿ ಗಿಲ್ಲಿ ಹಾಗೂ ವೈಲ್ಡ್​ಕಾರ್ಡ್​ ಕಂಟೆಸ್ಟೆಂಟ್​ ರಿಷಾ ಗೌಡ ಮಧ್ಯೆ ಜಗಳವೇ ಆಗೋಗಿದೆ.  

ಸ್ಪರ್ಧಿಗಳೆಲ್ಲಾ ಬೆಡ್ ಮೇಲೆ ಇರುವಾಗ ರಿಷಾ ಗೌಡ ಹಾಗೂ ಗಿಲ್ಲಿ ನಡುವೆ ವಾಕ್ಸಮರ ನಡೆದಿದೆ. ಕಾವ್ಯ ಒಂದು ಸಾರಿ ಜಗಳ ಆಡಿದರೆ ಲೈಫ್​ನಲ್ಲಿ ಮತ್ತೆ ಮಾತನಾಡಲ್ಲ. ಕಾವ್ಯಗೆ ಬೇಡ ಅಂದರೆ ಬೇಡ, ಬೇಕು ಅಂದರೆ ಬೇಕು ಅಷ್ಟೇ ಎಂದು ಚಂದ್ರಪ್ರಭ ಬಳಿ ಕುಳಿತು ಗಿಲ್ಲಿ ನಟ ಹೇಳುತ್ತಿದ್ದನು. ಗಿಲ್ಲಿ ಮಾತಿಗೆ ಕಾವ್ಯ ನಗುತ್ತಿದ್ದಳು.

ಇದನ್ನೂ ಓದಿ: BBK12; ನಿನ್ನ ಫ್ರೆಂಡ್​ಶಿಪ್​ನಿಂದ ನನಗೆ ಕಳಂಕ ಬಂತು.. ಜಾಹ್ನವಿ- ಅಶ್ವಿನಿ ಗೌಡ ನಡುವೆ ಬಿಗ್ ಫೈಟ್​

GILLI_KAVYA_New

ಆದರೆ ಇದೇ ವೇಳೆ ಇನ್ನೊಂದು ಬೆಡ್​ ಮೇಲೆ ಇದ್ದ ವೈಲ್ಡ್​ಕಾರ್ಡ್​ ಕಂಟೆಸ್ಟೆಂಟ್​ ರಿಷಾ, ಗಿಲ್ಲಿ ನೀನು ಕಾವ್ಯಗೆ ಬಕೆಟ್ ಹಿಡಿಯುತ್ತಿದ್ದೀಯಾ? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಗಿಲ್ಲಿ ನೀನು ಎಲ್ಲರಿಗೂ ಬಕೆಟ್ ಹಿಡಿಯುತ್ತಿದ್ದೀಯಾ ಎಂದು ಟಕ್ಕರ್ ಕೊಟ್ಟಿದ್ದಾನೆ. 

ಇದ್ದಕ್ಕಿದ್ದಂತೆ ಫುಲ್ ಗರಂ ಆದ ರಿಷಾ ಜೋರು ಧ್ವನಿಯಲ್ಲಿ, ನಿನ್ನ ಹತ್ರ ನಾನು ಅನಿಸಿಕೊಳ್ಳಲ್ಲ ಗಿಲ್ಲಿ. ಬಂದಾಗಿಂದ ನೋಡುತ್ತ ಇದ್ದೀನಿ, ಕಾವ್ಯ..ಕಾವ್ಯ..ಕಾವ್ಯ..ಕಾವ್ಯ.. ಅಂತನೇ ಇರುತ್ತೀಯಾ ಎಂದು ಕಿರುಚಾಡಿದ್ದಾರೆ. ನನ್ನ ಹತ್ರ ನೀನು ಕಾಲು ಎಳೆಯಬೇಡ. ನೀನು ಫ್ರೀ ಪ್ರಾಡೆಕ್ಟ್​ ಎಂದು ಗಿಲ್ಲಿ ನಟನಿಗೆ ಹೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಮಲ್ಲಯುದ್ಧ ತಾರಕಕ್ಕೇರಿದ್ದು, ನೀನು ಬಕೆಟ್​ ಎಂದಿದ್ದಕ್ಕೆ, ನೀನು ಡ್ರಮ್​ ಎಂದು ಗಿಲ್ಲಿ ಬಿಗ್ ಆನ್ಸರ್ ಮಾಡಿದ್ದಾರೆ.      

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss Kannada 12 Gilli Nata
Advertisment