/newsfirstlive-kannada/media/media_files/2025/10/10/bbk12_kalape-2025-10-10-20-20-34.jpg)
ಅರಸರ ಮಾತಿಗೆ ಬಗ್ಗುವುದೇ ಇಲ್ಲ ಎಂದು ನಿಂತಿದ್ದ ರಾಶಿಕಾ ಹಾಗೂ ಮಂಜು ಭಾಷಿಣಿ ಈ ಸೀಸನ್‌ನ ಮೊದಲ ಜೈಲುವಾಸಿಗಳಾಗಿದ್ದಾರೆ.
ಮೊದಲ ವಾರ ಅತ್ಯಂತ ಶಾಂತವಾಗಿ ಸಾಗಿದ್ದ ಬಿಗ್‌ಬಾಸ್ ಮನೆ ಎರಡನೇ ವಾರದಲ್ಲೇ ದಂಗೆ ಮೈದಾನವಾಗಿದೆ. ಮೊದಲ ವಾರ ಸದ್ದೇ ಇಲ್ಲದಂತಿದ್ದ ಮಂಜು ಭಾಷಿಣಿ ಜಾಹ್ನವಿಯವರೆಲ್ಲ ಎರಡನೇ ವಾರ ತಮ್ಮ ವಾಯ್ಸ್ ರೇಸ್ ಮಾಡೋಕೆ ಶುರು ಮಾಡಿದ್ದಾರೆ. ಬಿಗ್‌ಬಾಸ್ ಇಂಥಾ ಆಟಕ್ಕೆಲ್ಲ ಕಡಿವಾಣ ಹಾಕೋಕೆ ಮುಂದಾಗಿದ್ದು, ಇದಕ್ಕಾಗಿಯೇ ಕಳಪೆ ಆಟಗಾರರ ತಂತ್ರ ಹೆಣೆದಿದ್ದಾರೆ.
ಒಂಟಿ ತಂಡದಲ್ಲಿರುವ ಅಶ್ವಿನಿ ಗೌಡಗೆ ಒಂಟಿ ಅಥವಾ ಜಂಟಿ ತಂಡದಿಂದ ಯಾರಾದರೂ ಒಬ್ಬರನ್ನು ಕಳಪೆ ಆಟಗಾರರು ಎಂದು ಆಯ್ಕೆ ಮಾಡುವ ಅಧಿಕಾರವನ್ನು ಬಿಗ್‌ಬಾಸ್ ನೀಡಿದ್ದು, ಅಶ್ವಿನಿ, ಮಂಜು ಭಾಷಿಣಿ ಹಾಗೂ ರಾಶಿಕಾ ಜೋಡಿಯನ್ನು ಕಳಪೆ ಆಟಗಾರರೆಂದು ಗುರುತಿಸಿ ಜೈಲಿಗೆ ಅಟ್ಟಿದ್ದಾರೆ.
ತಮ್ಮ ಮಾತನ್ನು ಆಲಿಸುತ್ತಲೇ ಇಲ್ಲ ಎನ್ನುವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅಶ್ವಿನಿ ಹೇಳಿದ್ದಾರೆ. ಜೈಲು ಸೇರಿರುವ ರಾಶಿಕಾ ಅವರೇನು ಮಾಡಿದ್ರು ಸರಿ, ನಾವು ಅವರ ಮಾತು ಕೇಳೋದೆ ಇಲ್ಲ ಎನ್ನುವ ನಿರ್ಧಾರ ಮಾಡುತ್ತಾರೆ. ಇವರಿಬ್ಬರಲ್ಲಿ ಕೊನೆಗೆ ಸೋಲೊಪ್ಪಿಕೊಳ್ಳುವುದು ಯಾರು?.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ