/newsfirstlive-kannada/media/media_files/2025/10/08/bbk12_cockroch-2025-10-08-18-27-48.jpg)
ಮೊದಲ ವಾರ ಮನೆ ಮಂದಿಗೆಲ್ಲ ಅಡುಗೆ ಬೇಯಿಸಿಕೊಟ್ಟು ತನ್ನ ಕೆಲಸವಾಯಿತು ಅನ್ನೋ ರೀತಿ ಸೈಲೆಂಟ್ ಆಗಿದ್ದ ನಟಿ ಮಂಜು ಭಾಷಿಣಿಯೂ ಈ ವಾರಕ್ಕೆ ಬಂದಿದ್ದೇ ವೈಲೆಂಟ್ ಆಗಿದ್ದಾರೆ. ತಮ್ಮ ಜಂಟಿ ಜೋಡಿ ರಾಶಿಕಾ ಜೊತೆಗೇ ಜಗಳಕ್ಕೆ ನಿಂತಿದ್ದಾರೆ.
ಜಂಟಿಯಾಗಿ ಮನೆಯೊಳಗೆ ಎಂಟ್ರಿ ಕೊಟ್ಟಿದ್ದ ಮಂಜು ಭಾಷಿಣಿ ಹಾಗೂ ರಾಶಿಕಾ ಜೋಡಿ ಕಳೆದ ವಾರ ಜೋಡಿ ಅಂದ್ರೆ ಹೀಗಿರಬೇಕಪ್ಪಾ ಅನ್ನೋ ರೀತಿ ಇದ್ದರು. ಎಲ್ಲೇ ಹೋದರೂ ಜೊತೆ ಜೊತೆಯಾಗಿ ಖುಷಿಯಾಗಿ ಒಬ್ಬರಿಗೊಬ್ಬರು ಸಂತೈಸಿಕೊಂಡಿದ್ದರು. ಈ ವಾರಕ್ಕೆ ಬರುತ್ತಲೇ ಚಿತ್ರಣವೇ ಬದಲಾಗಿದೆ.
ಇದನ್ನೂ ಓದಿ: BIGG BOSS ಕಂಟೆಸ್ಟೆಂಟ್ಸ್​ ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ ಇಬ್ಬರೂ ಅತ್ತೆ- ಸೊಸೆ ಗೊತ್ತಾ..?
ಅಸುರ ದೊರೆ ಅಧೀನದಲ್ಲಿರುವ ಬಿಗ್‌ಬಾಸ್ ಮನೆಯಲ್ಲಿ ಎಲ್ಲದಿಕ್ಕೂ ಅಸುರ ರಾಜ ಕಾಕ್ರೋಜ್ ಸುಧಿಯ ಪರ್ಮಿಶನ್ ಕೇಳಬೇಕು. ಇದು ರಾಶಿಕಾರನ್ನು ಕೆರಳಿಸಿದೆ. ರಾಶಿಕಾ ಪದೇ ಪದೆ ವಾಶ್‌ರೂಂಗೆ ಹೋಗುತ್ತಿರುತ್ತಾಳೆ. ಅವಳೊಂದಿಗೆ ಹೋಗಿ ಹೋಗಿ ಸಾಕಾಯ್ತು ಎಂದು ಮಂಜು ಭಾಷಿಣಿ ಹೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಸುಧಿ ಇನ್ಮೇಲೆ ತಾವು ಹೇಳಿದಾಗ ಮಾತ್ರವೇ ರಾಶಿಕಾ ವಾಶ್‌ರೂಂ ಬಳಸಬಹುದು ಎಂದಿದ್ದಾರೆ. ಇದು ರಾಶಿಕಾರನ್ನು ಕೆರಳಿಸಿದೆ.
ಹೀಗೆ ಪರ್ಸನಲ್ ವಿಷಯಕ್ಕೂ ಇವರ ಪರ್ಮಿಷನ್ ತೆಗೆದುಕೊಂಡಿರೋಕೆ ಆಗಲ್ಲ ಎಂದಿದ್ದಾರೆ. ಇದೇ ವಿಷಯ ಮುಂದುವರಿದು ಮಂಜು ಭಾಷಿಣಿ, ರಾಶಿಕಾ ನಡುವೆಯೂ ವಾಗ್ವಾದ ನಡೆದಿದೆ. ಅವರವರ ನಡುವೆಯೇ ಕಿತ್ತಾಡಿಕೊಳ್ಳುತ್ತಿರೋದನ್ನು ನೋಡಿ ಅಶ್ವಿನಿ ಹಾಗೂ ಜಾಹ್ನವಿ ಸಖತ್ ಎಂಜಾಯ್ ಮಾಡಿದ್ದಾರೆ. ಚೆನ್ನಾಗಿದೆ..ಚೆನ್ನಾಗಿದೆ ಅಂತ ಕೋರಸ್ ಬೇರೆ ನೀಡಿದ್ದಾರೆ. ಈ ಜಗಳ ಯಾವ ಹಂತಕ್ಕೆ ತಲುಪುತ್ತೆ ಅನ್ನೋದೆ ಈಗಿರೋ ಪ್ರಶ್ನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ