BIGG BOSS; ರಕ್ಷಿತಾ ಆಟ ಮೆಚ್ಚಲೇಬೇಕು.. ಜಾಹ್ನವಿ, ಅಶ್ವಿನಿ ಮಾಡಿದ್ದು ಸರಿ ಇದೆಯಾ?

ಬಿಗ್‌ಬಾಸ್‌ ತಮಗೆ ಕೊಟ್ಟ ಟಾಸ್ಕ್‌ ಇದು ಎಂದು ಎಲ್ಲರ ಕಣ್ಣಿಗೂ ಮಣ್ಣು ಎರಚುವ ಪ್ರಯತ್ನ ಮಾಡ್ತಿದ್ದಾರೆ. ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಸೀಕ್ರೆಟ್‌ ಟಾಸ್ಕ್‌ ಕೊಡುತ್ತಾರೆ ನಿಜ. ತಮ್ಮವರ ವಿರುದ್ಧವೇ ನಿಲ್ಲುವುದಕ್ಕೂ ಸೂಚಿಸುವುದುಂಟು. ಹಾಗೆಂದು..

author-image
Bhimappa
RAKSHITHA_BBK12 (2)
Advertisment

ದೆವ್ವದ ಆಟವಾಡಿ ಇಡೀ ಮನೆಯನ್ನೇ ಬೆಚ್ಚಿ ಬೀಳಿಸಿದ್ದು ಮಾತ್ರವಲ್ಲದೆ, ತಮ್ಮ ಸುಳ್ಳಿನ ಆಟಕ್ಕೆ ತಮ್ಮದೇ ಮಾರ್ಗವನ್ನು ಕೊಡುತ್ತಿರುವ ಅಶ್ವಿನಿ ಗೌಡ ಹಾಗೂ ಜಾಹ್ನವಿ ಇದೀಗ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ತಾವೇ ಸೃಷ್ಟಿಸಿದ ಟಾಸ್ಕ್‌ಗೆ ಬಿಗ್‌ಬಾಸ್‌ನ ಹಣೆಪಟ್ಟಿ ಕಟ್ಟಿದ್ದಾರೆ. ಸ್ಪರ್ಧಿಗಳು ಹೀಗೆ ಇಷ್ಟ ಬಂದ ಹಾಗೆ ಬಿಗ್‌ಬಾಸ್‌ ಹೆಸರು ಬಳಸಿದ್ರೆ ಬಿಗ್‌ಬಾಸ್‌ ಸುಮ್ಮನಿರ್ತಾರಾ?. 

ರಕ್ಷಿತಾ ಮಧ್ಯರಾತ್ರಿ ಎದ್ದು ಬಾತ್‌ರೂಂಗೆ ಹೋಗೋದು. ಅಲ್ಲಿ ಕ್ಯಾಮೆರಾ ನೋಡಿಕೊಂಡು ಏನೇನೋ ಮಾತಾಡೋದು ಮಾಡುತ್ತಾಳೆ. ಈ ವಿಷ್ಯ ಪ್ರೇಕ್ಷಕರಿಗೂ ತಿಳಿದಿದೆ. ಇದನ್ನು ಅಶ್ವಿನಿ ಹಾಗೂ ಜಾಹ್ನವಿ ಒಂದು ದಿನ ನೋಡಿದ್ದರೂ ಕೂಡ. ಹಾಗಂತ ಇಷ್ಟಕ್ಕೇ ಸುಮ್ಮನಾಗದೆ ಇದಕ್ಕೆ ದೆವ್ವದ ಬಣ್ಣ ಕಟ್ಟಿದ್ದರು. 

ಮನೆಯವರೆನ್ನೆಲ್ಲ ಗುಂಪು ಗುಂಪು ಸೇರಿಸಿ ರಕ್ಷಿತಾ ರಾತ್ರಿ ಎದ್ದು ಕಣ್ಣಿಗೆ ವಿಚಿತ್ರವಾಗಿ ಕಾಡಿಗೆ ಹಾಕಿಕೊಂಡು, ಹೇಗೆ ಹೇಗೋ ಡ್ರೆಸ್‌ ಮಾಡಿಕೊಂಡು ರಾರಾ ಹಾಡಿಗೆ ಡ್ಯಾನ್ಸ್‌ ಮಾಡ್ತಿದ್ದಳು. ನಾವು ಬೆಚ್ಚಿ ಬಿದ್ದಿದ್ವಿ ಅಂದಿದ್ದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅವರೇ ಗೆಜ್ಜೆ ಸದ್ದು ಮಾಡಿ ಅದನ್ನೂ ರಕ್ಷಿತಾ ತಲೆಗೆ ಹೊರೆಸಿದರು. 

ಇದೇ ಕಾರಣವನ್ನೇ ಇಟ್ಟುಕೊಂಡು ರಕ್ಷಿತಾಳನ್ನು ಟಾರ್ಗೆಟ್‌ ಮಾಡಿದ್ದು ಎಲ್ಲವೂ ಎಲ್ಲರಿಗೂ ತಿಳಿದಿರುವುದೇ. ಆದರೆ ಯಾವಾಗ ಮನೆಯಲ್ಲಿರುವ ಸ್ಪರ್ಧಿಗಳಿಗೆ ತಮ್ಮ ಗೆಜ್ಜೆ ಆಟ ಗೊತ್ತಾಯಿತು ಎಂದು ತಿಳಿಯಿತೋ ಈಗ ಹೊಸ ರಾಗ ಎತ್ತಿದ್ದಾರೆ.

ಇದನ್ನೂ ಓದಿ: ಬಿಗ್​ಬಾಸ್​ ಮನೆಯಲ್ಲಿ ನಿಜವಾದ ದೆವ್ವ ಯಾರು.. ಕಿಚ್ಚ ಚಳಿ ಬಿಡಿಸೋದು ಯಾವ ಸ್ಪರ್ಧಿಗೆ?

SUDEEP_BBK12 (1)

ಬಿಗ್‌ಬಾಸ್‌ ತಮಗೆ ಕೊಟ್ಟ ಟಾಸ್ಕ್‌ ಇದು ಎಂದು ಎಲ್ಲರ ಕಣ್ಣಿಗೂ ಮಣ್ಣು ಎರಚುವ ಪ್ರಯತ್ನ ಮಾಡ್ತಿದ್ದಾರೆ. ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಸೀಕ್ರೆಟ್‌ ಟಾಸ್ಕ್‌ ಕೊಡುತ್ತಾರೆ ನಿಜ. ತಮ್ಮವರ ವಿರುದ್ಧವೇ ನಿಲ್ಲುವುದಕ್ಕೂ ಸೂಚಿಸುವುದುಂಟು. ಹಾಗೆಂದು ಯಾರನ್ನೋ ಒಬ್ಬರನ್ನೇ ಟಾರ್ಗೆಟ್‌ ಮಾಡಿ ಅವರ ವಿರುದ್ಧ ಇಡೀ ಮನೆಯನ್ನು ಎತ್ತಿಕಟ್ಟಿ ಬಲಿಪಶು ಮಾಡುವುದಕ್ಕೆ ಹೇಳಲ್ಲ.

ಜಾಹ್ನವಿ ಮಾತಿನಲ್ಲಿ ಹೇಳುವುದಾದರೆ ರಕ್ಷಿತಾ ಚೈಲ್ಡ್‌ ತಾವು ಮೆಚ್ಯುರ್ಡ್‌. ಇವರ ಮೆಚ್ಯುರಿಟಿ ಇದೇನಾ?, ಎಲ್ಲ ಬಿಟ್ಟು ಕಿಚ್ಚನ ಪಂಚಾಯ್ತಿಯಲ್ಲಿ ಈ ವಿಚಾರ ಚರ್ಚೆಗೆ ಬಾರದೆ ಇದ್ದರೆ ಇದನ್ನು ಬಿಗ್‌ಬಾಸ್‌ ನೀಡಿದ ಟಾಸ್ಕ್‌ ಎಂದು ಹೇಳುವ ಎನ್ನುವ ಐಡಿಯಾ ಕೊಟ್ಟವರೆ ಅವರು.

ಕಾಕ್ರೋಚ್‌ ಸುಧಿ, ಅಶ್ವಿನಿ, ಜಾಹ್ವವಿ, ರಾಶಿಕಾ ಹೀಗೆ ಸಾಲು ಸಾಲು ಜನರು ರಕ್ಷಿತಾಳನ್ನು ಟಾರ್ಗೆಟ್‌ ಮಾಡುತ್ತಿದ್ರು ರಕ್ಷಿತಾ ಗಟ್ಟಿಯಾಗಿ ನಿಂತಿದ್ದಾಳೆ. ಎಲ್ಲರನ್ನೂ ಎದುರಿಸುತ್ತಿದ್ದಾಳೆ. ಅವಳ ಧೈರ್ಯಕ್ಕೆ ಮೆಚ್ಚಲೇಬೇಕು. ಈ ಆಟ ಇನ್ನೆಷ್ಟು ದೂರ ಸಾಗುತ್ತೆ?.  

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

bigg boss jahnavi Ashwini SN Bigg Boss
Advertisment