/newsfirstlive-kannada/media/media_files/2025/10/18/sudeep_bbk12-1-2025-10-18-09-49-51.jpg)
ಬಿಗ್‌ಬಾಸ್ ಮನೆಯಲ್ಲಿ ಈ ವಾರ ಮೊದಲ ಗ್ರ್ಯಾಂಡ್‌ಫಿನಾಲೆ ಅನ್ನೋದು ಎಷ್ಟು ಸುದ್ದಿಯಾಗಿತ್ತೋ ಗೊತ್ತಿಲ್ಲ. ಆದರೆ ದೆವ್ವ, ಗೆಜ್ಜೆನಾದ, ರಕ್ಷಿತಾ ರಾರಾ ಹಾಡು ಇವೆಲ್ಲವೂ ಹೆಚ್ಚು ಸುದ್ದಿಯಾಗಿದ್ದು. ಈ ಸುಳ್ಳಿನ ಹಿಂದಿನ ಸತ್ಯ ಹೊರತರೋಕೆ ಬರ್ತಿದ್ದಾರೆ ಬಾದ್‌ಷಾ.
ಬಿಗ್‌ಬಾಸ್ ಸೀಸನ್ 12 ಆರಂಭವಾಗಿ ಇನ್ನೇನು ಮೂರು ವಾರವಷ್ಟೇ ಆಗಿದೆ ಅಷ್ಟರಲ್ಲೇ ಮೊದಲ ಗ್ರ್ಯಾಂಡ್ ಫಿನಾಲೆ ಸದ್ದು ಮಾಡುತ್ತಿದೆ. ಎಲ್ಲ ಸ್ಪರ್ಧಿಗಳ ಮನದಲ್ಲೂ ಆತಂಕ ಮನೆ ಮಾಡಿದೆ. ಯಾರು ಸೇಫ್ ಆಗ್ತಾರೆ? ಯಾರು ಹೊರಹೋಗುತ್ತಾರೆ ಅನ್ನೋ ಕುತೂಹಲ ಪ್ರೇಕ್ಷಕರಲ್ಲೂ ಇದೆ.
ಇವೆಲ್ಲಕ್ಕಿಂತ ಹೆಚ್ಚು ಸದ್ದು ಮಾಡಿ ಸುದ್ದಿ ಮಾಡುತ್ತಿರುವುದು ದೆವ್ವಾ!.. ಯೆಸ್ ಬಿಗ್‌ಬಾಸ್ ಮನೆಯಲ್ಲಿ ಈ ವಾರ ಅತಿಹೆಚ್ಚು ಸುದ್ದಿ ಮಾಡಿದ್ದು ದೆವ್ವ. ರಕ್ಷಿತಾಳ ಮೈಯಲ್ಲಿ ದೆವ್ವ ಹಿಡಿಯುತ್ತೆ. ಅವಳು ಮಧ್ಯರಾತ್ರಿ ಎದ್ದು ರಾರಾ ಹಾಡಿಗೆ ಡ್ಯಾನ್ಸ್ ಮಾಡ್ತಾಳೆ. ಹಾಗೆ ಹೀಗೆ ಎಂದು ಸುದ್ದಿ ಹಬ್ಬಿಸಿದ್ದು ಮಾತ್ರವಲ್ಲದೇ ಗೆಜ್ಜೆ ಸದ್ದು ಮಾಡಿ ಮನೆಯವರೆಲ್ಲರ ನಿದ್ದೆ ಗೆಡಿಸಿದ್ದಾರೆ ಅಶ್ವಿನಿ ಗೌಡ ಹಾಗೂ ಜಾಹ್ನವಿ.
ಇದನ್ನೂ ಓದಿ:ಕಾಂತಾರ ಸಿನಿಮಾ ಶರವೇಗ​.. ಗಂಗಾ ಆರತಿಯಲ್ಲಿ ರಿಷಭ್ ಶೆಟ್ಟಿ, 700 ಕೋಟಿಗೂ ಅಧಿಕ ಕಲೆಕ್ಷನ್
ಇಷ್ಟು ಸಾಲದು ಎನ್ನುವಂತೆ ಹೀಗೆ ಮಾಡಿದೋರು ಸಿಗ್ಲಿ ಅವರಿಗೆ ಹಿಡಿದಿರೋದೆಲ್ಲ ಬಿಡಿಸ್ತೀನಿ ಎಂದು ರಕ್ಷಿತಾ ಹೋಗುವಾಗ ಬರುವಾರ ಆವಾಝ್ ಬೇರೆ ಹಾಕ್ತಿದ್ದಾರೆ. ಅಶ್ವಿನಿ ಮಾಡೋದೆಲ್ಲ ಮಾಡಿ ಮನೆಯಲ್ಲಿ ವೀಕ್ ಆಗಿರೋರು ಇರ್ತಾರೆ. ಇವಳ ಆಟಕ್ಕೆ ಅವರೆಷ್ಟು ಹೆದರಿಕೊಳ್ಳುವುದಿಲ್ಲ ಎಂದು ಉಳಿದವರ ಎದುರು ಹೊಸ ಕಥೆಯನ್ನೇ ಹೆಣೆಯುತ್ತಿದ್ದಾರೆ.
ದೆವ್ವಾ ಸದ್ದು ಮಾಡ್ತಿದೆ ನಿಜ. ದೆವ್ವ ಬಿಡಿಸೋಕೆ ಬರುತ್ತಿರೋದು ಬೇರೆ ಯಾರೋ ಅಲ್ಲ ಬಾದ್‌ಷಾ. ಯಾರು ನಿಜವಾದ ದೆವ್ವ? ಯಾರಿಗೆ ಯಾವ ಮಂತ್ರ ಹಾಕಬೇಕು ಎಂದು ಫುಲ್ ರೆಡಿಯಾಗಿ ಬಂದಿದ್ದಾರೆ. ಇವತ್ತಿನ ಕಿಚ್ಚನ ಕ್ಲಾಸ್ ಹೇಗಿರುತ್ತೆ ನೋಡೋಣ ಬಿಗ್‌ಬಾಸ್‌ನಲ್ಲಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ