Advertisment

‘ಮರ್ಯಾದೆ ಕೊಟ್ಟು ಮರ್ಯಾದೆ ತಗೊಳ್ಳಿ ಸಾರ್..’ ಗಲಾಟೆಗೆ ಎಂಟ್ರಿ ಕೊಟ್ಟ ಸ್ಪಂದನಾ..! VIDEO

ಬಿಗ್​ಬಾಸ್​ ಮನೆಯಲ್ಲಿ ಜಗಳವಿಲ್ಲದ ದಿನಗಳಿಲ್ಲ. ಅಶ್ವಿನಿ ಗೌಡ, ಜಾಹ್ನವಿ, ಚಂದ್ರಪ್ರಭ, ಕಾವ್ಯ, ಗಿಲ್ಲಿ, ರಾಶಿ, ಮಂಜು ಅವರ ಕಿತ್ತಾಟ ನೋಡಿದ್ದಾಗಿದೆ. ಕಿತ್ತಾಟ, ಜಗಳಕ್ಕೆ ಇದೀಗ ಸ್ಪಂದನಾ ಕೂಡ ಎಂಟ್ರಿ ಆಗಿದ್ದಾರೆ. ಧ್ರುವಂತ್ ಜೊತೆ ದೊಡ್ಡ ವಾಗ್ಯುದ್ಧವನ್ನೇ ನಡೆಸಿದ್ದಾರೆ.

author-image
Ganesh Kerekuli
spandhana

spandhana Photograph: (ಕಲರ್ಸ್​ ಕನ್ನಡ)

Advertisment

ಬಿಗ್​ಬಾಸ್​​ನಲ್ಲಿ ಇವತ್ತು ಪ್ರಸಾರ ಆಗಲಿರುವ ಸಂಚಿಕೆಗೆ ಸಂಬಂಧಿಸಿದ ಕಲರ್ಸ್​ ಕನ್ನಡ ಪ್ರೊಮೋ ರಿಲೀಸ್ ಮಾಡಿದೆ.ವೀಕೆಂಡ್​ನಲ್ಲಿ ಕಿಚ್ಚ ಸುದೀಪ್​ ಬಂದು ಹೋದ ಮೇಲೆ ಬಿಗ್​ಬಾಸ್​ ಮನೆಯಲ್ಲಿ ಮತ್ತೆ ಕಿತ್ತಾಟವಾಗಿದೆ.ಇಷ್ಟು ದಿನ ಸುಮ್ಮನಿದ್ದ ಸ್ಪಂದನಾ ರೊಚ್ಚಿಗೆದ್ದಿದ್ದಾರೆ. ಈ ಪ್ರೊಮೋದಲ್ಲಿ ಸ್ಪಂದನಾ ಧ್ರುವಂತ್ ಜಗಳ ಕೈ ಕೈ ಮಿಲಾಯಿಸೋ ಹಂತಕ್ಕೆ ಹೋಗಿದೆ..

Advertisment

ದಿನೇ ದಿನೇ ದೊಡ್ಮನೆಯಲ್ಲಿ ಮುಂದೆ ಏನಾಗುತ್ತೆ ಅಂತಾ ವೀಕ್ಷಕರಿಗೆ ಕ್ಯೂರಾಸಿಟಿ ಹೆಚ್ಚಾಗ್ತಾನೆ ಇರುತ್ತೆ. ಕಿಚ್ಚನ ಪಂಚಾಯತಿ ಆದ್ಮೇಲೆ ಅಂತು ಸ್ಪರ್ಧಿಗಳಲ್ಲಿ ಹೊಸ ಹರುಪು ಬಂದ್ಬಿಡುತ್ತೆ.. ಅದೇ ಮುಂದಿನ ಎಪಿಸೋಡಿಗೆ ಕಾಯುತ್ತಿರೋ ವೀಕ್ಷಕರಿಗೆ ಇವತ್ತು ಸ್ಪಂದನಾ ಮತ್ತು ಧ್ರುವಂತ್ ಗಲಾಟೆ ಮನರಂಜನೆಯನ್ನು ಉಣಬಡಿಸಲಿದೆ. 

ದೊಡ್ಮನೆಲ್ಲಿ ಏನಾಯ್ತು..? 

ಮೊದಲಿಗೆ ಧ್ರುವಂತ್​ ಜಂಟಿಗಳಿಗೆ ಕೆಲಸ ಸೂಚಿಸುತ್ತಿದ್ದರು..ಆ ವೇಳೆ ಧ್ರುವಂತ್​ ಮಾಳುಗೆ ಅಲ್ಲೊಂದು ಚೇರ್​ ಇದೆ ಸರಿಪಡಿಸಿ ಅಂತಾ ಹೇಳ್ತಾರೆ. ಅದಕ್ಕೆ ಟ್ರಿಗರ್​ ಆದ ಸ್ಪಂದನಾ ಯಾವು ಚೇರಾಪ್ಪ ಅಂತಾ ಕೇಳ್ತಾರೆ. ನಾನು ಹೇಳಲ್ಲ ಮಾಳು ಹತ್ತಿರ ಕೇಳ್ಕೊಳಿ ಅಂತಾ ಹೇಳಿದ್ದರು. ಅದಕ್ಕೆ ಪ್ರತಿಯಾಗಿ ನನಗೆ ಗೊತ್ತಾಗಿಲ್ಲ ನನಗೆ ಇನ್ನೊಂದು ಸಲ ಎಂದಿದ್ದಾರೆ. ಇನ್ನೊಂದು ಸಲ ಹೇಳಲ್ಲ ಇಬ್ಬರು ಒಂದೇ ಬೇಕಾದ್ರೆ ಮಾಳು ಹತ್ತಿರ ಕೇಳ್ಕೊಳಿ ಎಂದಿದ್ದಾರೆ. 

ಸ್ವಂದನಾ ಕರೆಕ್ಟ್ ಆಗಿ ಮಾತನಾಡಿ ಮಾರ್ಯಾದೆ ಕೊಟ್ಟು ಮಾರ್ಯಾದೆ ತೆಗೆದುಕೊಳ್ಳಿ ಅಂತಾ ಧ್ರುವಂತ್​ ಸವಾಲಾಕಿದ್ದಾರೆ.. ಮೂರನೇ ವಾರದ ಮೊದಲನೇ ದಿನವೇ ದೊಡ್ಮನೆ ಕಾವೇರಿದೆ. ಸ್ಪಂದನಾ vs ಧ್ರುವಂತ್ ಈ ಇಬ್ಬರ ಈ ಹೀಟ್​ ಆಫ್ ದ ಮೂಮೆಂಟ್​ ಕೈಕೈ ಮಿಲಾಯಿಸೋ ಹಂತಕ್ಕೆ ಹೋಗಿದ್ದು ಸಖತ್​ ಇಂಟ್ರೆಸ್ಟಿಂಗ್​ ಆಗಿದೆ..

Advertisment

ಇದನ್ನೂ ಓದಿ:BBK 12 : ಜಾಹ್ನವಿ ಲುಕ್ ನೋಡಿ ಕಿಚ್ಚ ಹೇಳಿದ್ದೇನು ಗೊತ್ತಾ ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BIG BOSS 12 SEASON
Advertisment
Advertisment
Advertisment