ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಬಿಗ್ ಟ್ವಿಸ್ಟ್.. ತಾಂಡವ್​ಗೆ ತಪ್ಪಿನ ಅರಿವಾಗಿದೆ..

ದಿನದಿಂದ ದಿನಕ್ಕೆ ಹೊಸ ಹೊಸ ಟ್ವೀಸ್ಟ್​ ಕೊಟ್ತಿರೋ ಭಾಗ್ಯಲಕ್ಷ್ಮಿ ಧಾರಾವಾಹಿ ಇದೀಗ ಮತ್ತೆ ಹೊಸ ಟ್ವಿಸ್ಟ್ ಕೊಟ್ಟಿದೆ. ಆಕಾಶ ತಲೆ ಕೆಳಗಾದ್ರೂ ಬದಲಾಗಲ್ಲ ಅಂತ ಅನ್ನೊಂಡಿದ್ದ ತಾಂಡವ್​ಗೆ ತಾನು ಮಾಡಿದ ತಪ್ಪಿನ ಅರಿವಾಗಿದೆ. ಭಾಗ್ಯಳ ಜೊತೆ ಕ್ಷಮೆ ಕೂಡ ಕೋರಿದ್ದಾನೆ.

author-image
Ganesh Kerekuli
bhaghyalaxmi
Advertisment

ದಿನದಿಂದ ದಿನಕ್ಕೆ ಹೊಸ ಹೊಸ ಟ್ವೀಸ್ಟ್​ ಕೊಟ್ತಿರೋ ಭಾಗ್ಯಲಕ್ಷ್ಮಿ ಧಾರಾವಾಹಿ ಇದೀಗ ಮತ್ತೆ ಹೊಸ ಟ್ವಿಸ್ಟ್  ಕೊಟ್ಟಿದೆ. ಆಕಾಶ ತಲೆ ಕೆಳಗಾದ್ರೂ  ಬದಲಾಗಲ್ಲ ಅಂತ ಅನ್ನೊಂಡಿದ್ದ ತಾಂಡವ್​ಗೆ ತಾನು ಮಾಡಿದ ತಪ್ಪಿನ ಅರಿವಾಗಿದೆ. ಭಾಗ್ಯಳ ಜೊತೆ ಕ್ಷಮೆ ಕೂಡ ಕೋರಿದ್ದಾನೆ.

ತಾಂಡವ್​ ಶ್ರೇಷ್ಠಳಿಗೋಸ್ಕರ ಭಾಗ್ಯಳಿಗೆ ಕೊಡಬಾರದ ಕಷ್ಟವನ್ನೆಲ್ಲಾ ಕೊಟ್ಟಿದ್ದ. ಭಾಗ್ಯ ತನ್ನ ಸಂಸಾರಕ್ಕಾಗಿ ಅದೆಷ್ಟೋ ನೋವುಗಳನ್ನು, ಅವಮಾನಗಳನ್ನ ಸಹಿಸಿಕೊಂಡಿದ್ಲು. ತನ್ನದೇ ಲೋಕದಲ್ಲಿ ತೇಲ್ತಿದ್ದ ತಾಂಡವ್​ಗೆ ಸಂಸಾರದ ಬೆಲೆ, ಭಾಗ್ಯಳ ಬೆಲೆ ಗೊತ್ತಿರಲಿಲ್ಲ. ಆದ್ರೆ ಭಾಗ್ಯಳಿಗೆ ಅತ್ತೆ-ಮಾವನ ಪ್ರೀತಿಯೇ ದೊಡ್ಡ ಆಸರೆಯಾಗಿತ್ತು. ಹೀಗಾಗಿ ಮನೆ ಬಿಟ್ಟು ಗಂಡನಿಂದ ದೂರವಾಗಿದ್ದ ಭಾಗ್ಯ ನೂರೆಂಟು ಕಷ್ಟಗಳ ನಡುವೆಯೇ ಸ್ವಾವಲಂಭಿಯಾಗಿ ದುಡಿಯುತ್ತಾ, ತನ್ನ ಮಕ್ಕಳನ್ನ ಅತ್ತೆ, ಮಾವನನ್ನ ಚೆನ್ನಾಗಿ ನೋಡ್ಕೊತ್ತಾಳೆ.

ಇದನ್ನೂ ಓದಿ: ಒರಾಕಲ್ ಕಂಪನಿಯಲ್ಲಿ 20-30 ಸಾವಿರ ಉದ್ಯೋಗಿಗಳಿಗೆ ಲೇ ಆಫ್‌ : ಮುಂದುವರಿದ ಟೆಕ್ ಕಂಪನಿಗಳ ಲೇ ಆಫ್‌

ತಾಂಡವ್ ಕೆನ್ ಕೆನ್ನೆಗೆ ಬಾರಿಸಿದ ಭಾಗ್ಯ; ಮದುವೆ ಸಂಭ್ರಮಕ್ಕೆ ಹೊಸ ಟ್ವಿಸ್ಟ್..!

ಈ ನಡುವೆ ಭಾಗ್ಯಳ ಲೈಫ್​ಗೆ ಆದೀಶ್ವರ್‌ ಕಾಮತ್‌ ಬಂದಿದ್ದಾನೆ. ಆರಂಭದಲ್ಲಿ ಭಾಗ್ಯ ಇಷ್ಟಿವಿರಲಿಲ್ಲ. ಆದ್ರೆ ಕಾಲ ಬದಲಾಗದಂತೆ ಭಾಗ್ಯಳ ಒಳ್ಳೆಯ ಗುಣ ಆದೀಗೆ ಬಹಳ ಇಷ್ಟವಾಗುತ್ತದೆ. ಜೊತೆಗೆ ಆದೀಗೆ ಭಾಗ್ಯ ಮೇಲೆ ಲವ್‌ ಕೂಡ ಆಗುತ್ತೆ. ಮದುವೆ ಆದ್ರೆ ಅದು ಭಾಗ್ಯಳನ್ನೇ ಎಂದು ಹೇಳಿದ್ದಾನೆ. ಇದಕ್ಕೆ ಭಾಗ್ಯ ಅತ್ತೆ ಕುಸುಮಾ ಸಪೋರ್ಟ್​ ಕೂಡ ಇದೆ.

ಭಾಗ್ಯಳಿಗೂ ಇತ್ತಿಚ್ಚೇಗೆ ಅದಿ ಮೇಲೆ ಲವ್​ ಶುರುವಾಗುತ್ತಾ ಇರುತ್ತೆ. ಇನ್ನೆನ್ನು ಭಾಗ್ಯ ಆದೀ ಒಂದಾಗ್ತಾರೆ ಅಂತ ಎಲ್ರೂ ಅಂದುಕೊಂಡಿದ್ರು. ಆದ್ರೆ ಇಲ್ಲೆ ಇರೋದು ಟ್ವೀಸ್ಟ್.. ಏನೇ ಆದ್ರೂ ಬದಲಾಗಲ್ಲ  ಅನ್ಕೊಂಡಿದ್ದ ತಾಂಡವ್‌ ಬದಲಾಗಿದ್ದಾನೆ. ತನ್ನೆಲ್ಲ ಕಷ್ಟಗಳು, ಅವಮಾನಗಳಿಗೆ ಶ್ರೇಷ್ಠ ಕಾರಣ ಅಂತಾ ತಾಂಡವ್​ಗೆ ಗೊತ್ತಾಗಿದೆ. ಜೊತೆಗೆ ತಾನು ಜೈಲಿನಲ್ಲಿದ್ದಾಗ ಮಗಳು ತನ್ವಿ ಹೇಳಿದ್ದಕ್ಕೆ, ಆದೀಶ್ವರ್‌ ಕಾಮತ್‌ ಜಾಮೀನು ಕೊಟ್ಟು ಬಿಡಿಸಿದ್ದಾನೆ ಎನ್ನೋದು ಗೊತ್ತಾಗಿದೆ. ಹೀಗಾಗಿ ತಾಂಡವ್​ ಶ್ರೇಷ್ಠಳಿಗೆ ಬೈದು, ಮನೆ ಬಿಟ್ಟು ಬಂದಿದ್ದಾನೆ.  ಹೀಗೆ ಮನೆ ಬಿಟ್ಟು ಬಂದ ತಾಂಡವ್​ ಮಂಡಿಯೂರಿ ಭಾಗ್ಯಳ ಬಳಿ ಕ್ಷಮೆ ಕೇಳಿದ್ದಾನೆ. ಇದ್ರಿಂದ ಭಾಗ್ಯಳಿಗೆ ಬರಸಿಡಿಲು ಬಡಿದಂತಾಗಿದೆ.

ಭಾಗ್ಯ ಬದುಕಿಗೆ ಮತ್ತೆ ತಾಂಡವ್ ವಿಲನ್ ಆಗ್ತಾನಾ? ತಾಂಡವ್​ನನ್ನ ಭಾಗ್ಯ ಕ್ಷಮಿಸ್ತಾಳ? ತಾಂಡವ್​ನೊಂದಿಗೆ ಸಂಸಾರ ಮುಂದುವರೆಸ್ತಾಳ? ಅಥವಾ ಆದೀಶ್ವರ್‌ ಕಾಮತ್‌ ಪ್ರೀತಿಯನ್ನು ಭಾಗ್ಯ ಒಪ್ಪಿಕೊಳ್ತಾಳಾ? ಎಂಬುದೇ ಸದ್ಯಕೀರೋ ಕುತುಹಲ.

ಇದನ್ನೂ ಓದಿ:ಒರಾಕಲ್ ಕಂಪನಿಯಲ್ಲಿ 20-30 ಸಾವಿರ ಉದ್ಯೋಗಿಗಳಿಗೆ ಲೇ ಆಫ್‌ : ಮುಂದುವರಿದ ಟೆಕ್ ಕಂಪನಿಗಳ ಲೇ ಆಫ್‌

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

bhagyalakshmi kannada serial
Advertisment