/newsfirstlive-kannada/media/media_files/2025/12/18/bhargavi-llb-1-2025-12-18-16-25-53.jpg)
ಭಾರ್ಗವಿ LLB ಸೀರಿಯಲ್ ರೋಚಕ ಘಟ್ಟ ತಲುಪಿದೆ. ಎಲ್ಲ ಸರಿ ಹೋಯ್ತು, ಇನ್ನೇನು ವಿಕ್ಕಿ ಅಮ್ಮ ಜೈಲು ಸೇರ್ತಾಳೆ ಎನ್ನುವಾಗ ಸಂಧ್ಯಾ ಪ್ರತ್ಯಕ್ಷಳಾಗಿದ್ದಾಳೆ. ಏಕಾಏಕಿ ಕೋರ್ಟ್​ಗೆ ಬಂದು ಭಾರ್ಗವಿ ವಿರುದ್ಧವೇ ಹೇಳಿಕೆ ನೀಡಿದ್ದಾಳೆ. ಒಂದು ಕಡೆ ಭಾರ್ಗವಿ ಮಾಡದ ತಪ್ಪಿಗೆ ಕಟಕಟೆಯಲ್ಲಿ ನಿಂತಿದ್ರೇ ಮತ್ತೊಂದು ಕಡೆ ಬೃಂದಾ ಮತ್ತು ಜೆಪಿ ಡೂಪ್ಲಿಕೇಟ್ ಸಂದ್ಯಾ ಎಂಬ ಗಾಳ ಬಳಸಿ ಭಾರ್ಗವಿಗೆ ಶಿಕ್ಷೆ ಕೊಡಿಸೋ ಕುತಂತ್ರ ಹೆಣದಿದ್ದಾರೆ.
ಇದನ್ನೂ ಓದಿ: ಲಂಕೆಯಲ್ಲಿ ರಶ್ಮಿಕಾ ಮಂದಣ್ಣ.. ಗೆಳತಿಯರ ಜೊತೆ ‘ಬ್ಯಾಚುಲರ್ ಪಾರ್ಟಿ’ ಎಂದ ಫ್ಯಾನ್ಸ್..! Photos
ಈ ಮಾಸ್ಟರ್​ ಪ್ಲ್ಯಾನ್​ನಿಂದ ಭಾರ್ಗವಿಯನ್ನ ಹೊರ ತರೋಕೆ ಮಿಸ್ಟರ್​ LLB ನೇ ಬರಬೇಕಾಗಿದೆ. ಭಾರ್ಗವಿ LLB ಪತಿ ಅರ್ಜುನ್​ LLB ಕಪ್ಪು ಕೋಟ್ ತೊಟ್ಟು ಸಖತ್​ ಡ್ಯಾಶಿಂಗ್​ ಆಗಿ ಕೋರ್ಟ್ ಪ್ರವೇಶ ಮಾಡಿದ್ದಾನೆ.
ಅಪ್ಪನಿಗೋಸ್ಕರ ಲಾ ಓದಿದ್ದ ಅರ್ಜುನ್, ಈಗ ಅದೇ ಅಪ್ಪನ ಮುಂದೆ ನಿಂತು ಪತ್ನಿ ಪರವಾಗಿ ವಾದ ಮಾಡೋಕೆ ಸಿದ್ಧನಾಗಿದ್ದಾನೆ. ಭಾರ್ಗವಿಗೆ ಯಾವ ರೀತಿ ನ್ಯಾಯ ಒದಗಿಸ್ತಾನೆ ಅರ್ಜುನ್​? ಇಷ್ಟು ದಿನ ಸಾಫ್ಟ್​ ಆಗಿಯೇ ಎಲ್ಲವನ್ನ ಹ್ಯಾಂಡಲ್​ ಮಾಡ್ತಿದ್ದ ಈ ಪಾರ್ಥ..ಅನ್ಯಾಯದ ವಿರುದ್ಧ ಯಾವ ರೀತಿ ಪಾಶುಪತಾಸ್ತ್ರಬಳಸ್ತಾನೆ ಎಂಬ ಕುತೂಹಲ ಕೇರಳಿಸಿದೆ.
ಇದನ್ನೂ ಓದಿ: ಬದಲಾದ ಧೋನಿ ಗೇಮ್​ ಪ್ಲಾನ್.. ಹರಾಜಿನಲ್ಲಿ ಬುದ್ಧಿವಂತಿಕೆ ತೋರಿಸಿದ CSK..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us