/newsfirstlive-kannada/media/media_files/2025/08/30/drishtibottu2-2025-08-30-12-46-11.jpg)
ದೃಷ್ಟಿಬೊಟ್ಟು ಧಾರಾವಾಹಿಯ ಮಹಾ ಗುಟ್ಟು ಬಯಲಾಗಿದೆ. ದೃಷ್ಟಿ ಮುಚ್ಚಿಟ್ಟ ಕೆಂಡದಂತಹ ಸತ್ಯ ದತ್ತನ ಮುಂದೆ ಮಳೆ ನೀರಾಗಿ ತೋಳೆದು ಹೋಗಿದ್ದು, ವೀಕ್ಷಕರು ಕಾತುರದಿಂದ ಕಾಯ್ತಿದ್ದ ಆ ಘಳಿಗೆ ಬಂದೇ ಬಿಟ್ಟಿದೆ.
ಇದನ್ನೂ ಓದಿ: ಹಗಲಿನಲ್ಲಿ ‘Change Your Life’ ಎನ್ನುತ್ತಿದ್ದ ಯೂಟ್ಯೂಬರ್.. ರಾತ್ರಿ ಮಾಡ್ತೀರೋದು..!
/filters:format(webp)/newsfirstlive-kannada/media/media_files/2025/08/27/drishtibottu-2025-08-27-18-27-10.jpg)
ಹೌದು, ನಾಯಕ ದತ್ತನಿಗೆ ಪ್ರೀತಿಯಲ್ಲಿ ಆದ ಮೋಸ ಘಾಸಿ ಮಾಡಿತ್ತು. ಹೀಗಾಗಿ ಚಂದದ ಹುಡ್ಗಿರು ಅಂದ್ರೇ ಉರಿದು ಬೀಳ್ತಿದ್ದ. ಅದೇ ರೀತಿ ನಾಯಕಿಗೆ ಅಂದವೇ ಶಾಪವಾಗಿತ್ತು. ದುಷ್ಟರ ಕಣ್ಣಿಂದ ತಪ್ಪಿಸಿಕೊಳ್ಳಲು ತನ್ನ ಸೌಂದರ್ಯದ ಗುಟ್ಟನ್ನ ಕಪ್ಪು ಇದ್ದಿಲ್ಲನ್ನ ಬಳಿಸಿ ಮುಚ್ಚಿಟ್ಟಿದ್ದಳು. ಆದ್ರೆ ಪರಿಸ್ಥಿತಿಗೆ ಸಿಲುಕಿ ದತ್ತ ಹಾಗೂ ದೃಷ್ಟಿ ಮದುವೆ ನಡೆಯುತ್ತೆ. ಮೊದ​ ಮೊದಲು ದ್ವೇಷಿಸುತ್ತಿದ್ದ ಜೋಡಿ ಸದ್ಯ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡ್ತಿದ್ದಾರೆ.
/filters:format(webp)/newsfirstlive-kannada/media/post_attachments/wp-content/uploads/2024/09/DrishtiBottu1.jpg)
ಈ ನಡುವೆ ಆಸ್ತಿಗೋಸ್ಕರ ಸಾಕು ತಮ್ಮ ದತ್ತನ ಜೀವನನ ಬಲಿ ಕೊಡ್ತಿರೋ ಅಕ್ಕ ಶಾರಾವತಿ ಪ್ಲ್ಯಾನ್​ ಮತ್ತೊಮ್ಮೆ ಪ್ಲಾಫ್​ ಆಗಿದೆ. ದೃಷ್ಟಿಯನ್ನ ಮುಗಿಸೋ ಸಂಚು ಪ್ಲಾಫ್​ ಆಗಿದ್ರು, ದೃಷ್ಟಿ ಬಣ್ಣದ ಗುಟ್ಟು ಬಯಲು ಮಾಡುವಲ್ಲಿ ಗೆದ್ದು ಬಿಟ್ಟಿದ್ದಾಳೆ. ದೃಷ್ಟಿ ಪರಿಸ್ಥಿತಿ ಅರಿಯದೇ ದತ್ತನ ಹೃದಯ ಒಡೆದು ಹೋಗಿದೆ.
/filters:format(webp)/newsfirstlive-kannada/media/media_files/2025/08/27/drishtibottu1-2025-08-27-19-09-28.jpg)
ಇದು ಧಾರಾವಾಹಿಯ ಮಾಹಾತಿರುವಿನ ಸಾರಾಂಶ. ಇನ್ನು, ದೃಷ್ಟಿ ಬಣ್ಣದ ಗುಟ್ಟು ರಿವೀಲ್​ ಮಾಡೋ ದೃಶ್ಯದ ಶೂಟಿಂಗ್​ ನಡೆದಿದ್ದು ಕಲ್ಲು ಗುಡ್ಡದ ಪ್ರದೇಶದಲ್ಲಿ. ಧಾರಾವಾಹಿಯ ಬಹುತೇಕ ನಟರು ಆವತ್ತು ಶೂಟಿಂಗ್​ನಲ್ಲಿ ಭಾಗಿಯಾಗಿದ್ರು. ತೆರೆಹಿಂದೆ ಹೆಂಗಳೆಯರು ಫೋಟೋಸ್​ ಕ್ಲಿಕ್ಕಿಸುತ್ತಾ ಸಖತ್​ ಮಜಾ ಮಾಡಿದ್ದಾರೆ. ಮುಂದೆ ದತ್ತನಿಗೆ ತನ್ನ ಪರಿಸ್ಥಿತಿಯನ್ನು ಹೇಗೆ ಅರ್ಥ ಮಾಡುಸ್ತಾಳೆ ದೃಷ್ಟಿ? ದೃಷ್ಟಿನ ದತ್ತ ಒಪ್ಪಿಕೊಳ್ತಾನಾ ಅಂತ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us