Advertisment

ಕಾಂತಲಕ್ಷ್ಮೀ ಮನೆಗೆ ವಿವೇಕ್ ಬಂದಾಯ್ತು.. ಬಯಲಾಗುತ್ತಾ ಸುಳ್ಳಿನ ಬಂಡವಾಳ..?

ನೂರು ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬಾ ಗಾದೆ ಮಾತಿದೆ. ಈ ಗಾದೇ ಮಾತಿನಂತೆ ಇದೀಗ ಕಾಂತಲಕ್ಷ್ಮಿ ಕೂಡ ಸುಳ್ಳಿನ ಸರಮಾಲೆಯನ್ನೇ ಪೋಣಿಸ್ತಾ ತನ್ನ ಮಗಳು ಮೋನಿಕಾಳನ್ನ ವಿವೇಕ್​ಗೆ ಮದುವೆ ಮಾಡಿಸಲು ಪ್ರಯತ್ನಿಸ್ತಿದ್ದಾಳೆ.

author-image
Ganesh Kerekuli
Gouri Kanlyana (1)
Advertisment

ನೂರು ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬಾ ಗಾದೆ ಮಾತಿದೆ. ಈ ಗಾದೇ ಮಾತಿನಂತೆ ಇದೀಗ ಕಾಂತಲಕ್ಷ್ಮಿ ಕೂಡ ಸುಳ್ಳಿನ ಸರಮಾಲೆಯನ್ನೇ ಪೋಣಿಸ್ತಾ ತನ್ನ ಮಗಳು ಮೋನಿಕಾಳನ್ನ ವಿವೇಕ್​ಗೆ ಮದುವೆ ಮಾಡಿಸಲು ಪ್ರಯತ್ನಿಸ್ತಿದ್ದಾಳೆ. ಆದ್ರೆ ಇದೀಗ ವಿವೇಕ್ ಕಾಂತಲಕ್ಷ್ಮೀಯ ಮನೆಗೆ ಬಂದಿದ್ದಾನೆ. ಆಕೆಗೆ ಸುಳ್ಳು ಬಯಲಾಗುತ್ತಾ ಅನ್ನೋ ಭಯ ಆವರಿಸಿದೆ. ಇನ್ನೊಂದ್ಕಡೆ, ಸುಳ್ಳೇ ಸತ್ಯವಾಗೋ ವಾತಾವರಣ ದಿನಬಂಧು ಫ್ಯಾಮಿಲಿಯಲ್ಲಿ ಕ್ರಿಯೇಟ್ ಆಗಿದೆ.  

Advertisment

ಕಾಂತಲಕ್ಷ್ಮಿಗೆ ಮೋನಿಕಾ, ಗೌರಿ ಮತ್ತು ಚಿನ್ಮಯಿ ಎಂಬ ಮೂವರು ಸುಂದರ ಹೆಣ್ಣುಮಕ್ಕಳು. ತನ್ನ ಮೂವರು ಹೆಣ್ಣು ಮಕ್ಕಳನ್ನು ಶ್ರೀಮಂತ ಕುಟುಂಬಕ್ಕೆ ಸೊಸೆಯಾಗಿ ಕಳಿಸಬೇಕು ಅನ್ನೋ ಮಹದಾಸೆ ಕಾಂತಲಕ್ಷ್ಮಿಯದ್ದು. ಅದ್ರಲ್ಲೂ ದೀನಬಂಧು ಮನತನದ ಶ್ರೀಮಂತಿಕೆಗೆ ಮರುಳಾಗಿ ತಾಯಿ ದೊಡ್ಡಮಗಳು ಮೋನಿಕಾಳನ್ನ ಆ ಮನೆಗೆ ಸೊಸೆಯಾಗಿಸಲು ಹಂಬಲಿಸ್ತಾಳೆ. ಅದಕ್ಕಾಗಿ ಪರಿಪರಿಯಾದ ಪ್ರಯತ್ನ ಮಾಡ್ತಾಳೆ.. ಆದ್ರೆ ಅದ್ಯಾಕೋ ಗೌರಿ- ವಿವೇಕ್​ ಹಾವು ಮುಂಗುಸಿಯಂತೆ ಕಿತ್ತಾಡುತ್ತಾಳೆ ಇರ್ತಾರೆ. ಇದೀಗ ಈ ಕಿತ್ತಾಟವೇ ವಿವೇಕ್ ಕಾಂತಲಕ್ಷ್ಮೀಯ ಮನೆಗೆ ಬರುವಂತೆ ಮಾಡಿದೆ.  

ಇದನ್ನೂ ಓದಿ: ಬಾಲಿವುಡ್ ನಟ ರಾಜ್ ಪಾಲ್ ಯಾದವ್ ಜೈಲು ಪಾಲಾಗಿದ್ದೇಕೆ? ಎಷ್ಟು ಹಣ ಸಾಲ ಪಡೆದಿದ್ದರು?

Gouri Kanlyana

ವಿವೇಕ್​ಗೆ ಮದುವೆ ಮಾಡಲು ಕುಟುಂಸ್ಥರು ಸ್ವಯಂವರ ಆಯೋಜಿಸ್ತಾರೆ. ಆ ಸ್ವಯಂವರಕ್ಕೆ ಬಂದಿದ್ದ ಮೋನಿಕಾಳನ್ನ ಕಂಡ ವಿವೇಕ್​ ಮೆಚ್ಚಿಕೊಳ್ತಾನೆ... ಕಾಂತಲಕ್ಷ್ಮೀ ಕೂಡ ವಿವೇಕ್ ಹಾಗೂ ಕುಟುಂಬಸ್ಥರ ಎದುರು ತಾವು ಬಹಳ ಶ್ರೀಮಂತರು ಎಂಬಂತೆ ನಟಿಸ್ತಾ ಸಾಲು ಸಾಲು ಸುಳ್ಳನ್ನ ಹೇಳ್ತಾಳೆ...ಸಾಲದಕ್ಕೆ ಗೌರಿ ತನ್ನ ಮಗಳೆಂಬುದನ್ನೆ ಮುಚ್ಚಿಡ್ತಾಳೆ.

Advertisment

ಈ ನಡುವೆ ಗೌರಿ ವಿವೇಕ್​ ಕಂಪನಿಗೆ ಇಂಟರ್​ವ್ಯೂವ್​ಗಾಗಿ ಹೋಗ್ತಾಳೆ.. ಆದ್ರೆ ಮೊದಲೇ ಹಾವು ಮುಂಗುಸಿಯಂತಿರೋ ವಿವೇಕ್​ ಮತ್ತು ಗೌರಿ ಅಲ್ಲೂ ಗಲಾಟೆ ಮಾಡ್ತಾರೆ.. ಈ ಗ್ಯಾಪ್​ನಲ್ಲಿ ವಿವೇಕ್​ ಇಯರ್ ಪಾಡ್ ಗೌರಿ ಬ್ಯಾಗಲ್ಲಿ ಮಿಸ್​ ಆಗಿ ಸೇರಿಕೊಂಡು ಬಿಡುತ್ತೆ..
ಇಯರ್ ಪಾಡ್ ಕಳೆದುಕೊಂಡ ವಿವೆಕ್​ ಲೋಕೆಷನ್​ ಟ್ರೇಸ್​ ಮಾಡಿಕೊಂಡು ಬರುವಾಗ ರಸ್ತೆಯಲ್ಲಿ ಗೌರಿ ಕಾಣಿಸಿಕೊಳ್ತಾಳೆ.. ಗೌರಿಯೇ ಗಲಾಟೆಯಾದ ಕೋಪಕ್ಕೆ ಇಯರ್ ಪಾಡ್  ತಂದಿದ್ದಾಳೆಂದು ತಿಳಿದು ಆಕೆಯನ್ನ  ಫಾಲೋ ಮಾಡ್ಕೋಂಡು ಆಕೆಯ ಮನೆಗೆ ಹೋಗ್ತಾನೆ.. ಮನೆಗೆ ಬಂದ ವಿವೇಕ್​ನನ್ನ ದೂರದಿಂದಲೇ ಕಂಡ ಕಾಂತಲಕ್ಷ್ಮೀ ಹಾಗೂ ಮೋನಿಕಾಳಿಗೆ ಟೆನ್ಯನ್​ ಶುರುವಾಗುತ್ತೆ.. 

ಮುಂದೆ ವಿವೇಕ್​ಗೆ ಕಾಂತಲಕ್ಷ್ಮೀಯ ಅಸಲಿಯತ್ತು  ಗೊತ್ತಾಗುತ್ತಾ?  ವಿವೇಕ್​ - ಮೋನಿಕಾಳ ಮಧ್ಯೆ ಮನಸ್ತಾಪ ಬರುತ್ತಾ? ಗೌರಿ ವಿರುದ್ದ ಮೋನಿಕಾ ದ್ವೇಷ ಕಾರ್ತಾಳ ಅನ್ನೊದನ್ನ ಕಾದುನೋಡಬೇಕಾಗಿದೆ. 

ಇದನ್ನೂ ಓದಿ: ಆರ್​​ಸಿಬಿ ಖರೀದಿಗೆ ಮುಗಿಬಿದ್ದ ಮಿಲಿಯನೇರ್.. ಸಾವಿರ ಸಾವಿರ ಕೋಟಿ ಕೋಟ್​ ಮಾಡಿದ ಕಂಪನಿಗಳು..!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Gouri Kalyana
Advertisment
Advertisment
Advertisment