ಬಿಗ್​ಬಾಸ್​ ಖ್ಯಾತಿಯ ಐಶ್ವರ್ಯ ಸಿಂಧೋಗಿ ಅದ್ಧೂರಿ ಬರ್ತ್​ ಡೇ ಸೆಲೆಬ್ರೇಷನ್.. PHOTOS

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11ರ ಸ್ಪರ್ಧಿಯಾಗಿದ್ದ ಐಶ್ವರ್ಯ ಸಿಂಧೋಗಿ ಸಖತ್​ ಖುಷಿಯಲ್ಲಿದ್ದಾರೆ. ಗೆಳತಿ ಐಶ್ವರ್ಯ ಸಿಂಧೋಗಿ ಅವರ ಬರ್ತ್​ ಡೇಯನ್ನು ಶಿಶಿರ್​ ಗ್ರ್ಯಾಂಡ್​ ಆಗಿ ಆಚರಿಸಿದ್ದಾರೆ.

author-image
Veenashree Gangani
Aishwarya Sindhogi
Advertisment

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11ರ ಸ್ಪರ್ಧಿಯಾಗಿದ್ದ ಐಶ್ವರ್ಯ ಸಿಂಧೋಗಿ ಸಖತ್​ ಖುಷಿಯಲ್ಲಿದ್ದಾರೆ. ಬಿಗ್​ಬಾಸ್​ ಸೀಸನ್ 11ರ ಮೂಲಕ ಸಖತ್​​ ಫೇಮಸ್​ ಆಗಿದ್ದ ಐಶ್ವರ್ಯ ಸಿಂಧೋಗಿ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.

ಇದನ್ನೂ ಓದಿ: Raksha Bandhan: ರಾಖಿ ಕಟ್ಟೋ ಮುನ್ನ ಸಹೋದರಿಯರು ಓದಲೇಬೇಕಾದ ಪ್ರಮುಖ ವಿಚಾರ ಇಲ್ಲಿದೆ..!

ಹೋಳಿ ಹಬ್ಬದ ದಿನವೇ ರಾಜಾ ರಾಣಿಯಂತೆ ಮಿಂಚಿದ ಶಿಶಿರ್, ಐಶ್ವರ್ಯಾ ಸಿಂಧೋಗಿ; ಫ್ಯಾನ್ಸ್​ ಫುಲ್ ಖುಷ್!

ನಟಿ ಐಶ್ವರ್ಯ ಸಿಂಧೋಗಿ ಅವರು ಬಿಗ್​ಬಾಸ್ ಮೂಲಕವೇ ಮನೆ ಮಗಳು ಎಂದು ಕರೆಸಿಕೊಂಡರು. ಐಶ್ವರ್ಯ ಸಿಂಧೋಗಿ ಅವರು ತಮ್ಮ ತಂದೆ ಕಳೆದುಕೊಂಡಿದ್ದಾರೆ. ಹೋಗಾಗಿ ಬಿಗ್​ಬಾಸ್​ ಮನೆಯಲ್ಲಿದ್ದಾಗ ಆ ಸ್ಥಾನವನ್ನು ಸ್ವತಃ ಬಿಗ್ ಬಾಸ್ ತುಂಬಿದರು.

Aishwarya Sindhogi(3)

ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ಐಶ್ವರ್ಯ ಸಿಂಧೋಗಿ ಖುಷಿಯಲ್ಲಿದ್ದ ಗೆಳೆಯರು ದುಪ್ಪಟ್ಟು ಮಾಡಿದ್ದಾರೆ. ಶಿಶರ್​ ಶಾಸ್ತ್ರಿ, ಮೋಕ್ಷಿತಾ ಪೈ, ಧರ್ಮಕೀರ್ತಿ ರಾಜ್ ಹಾಗೂ ಬಿಗ್​ಬಾಸ್​ 10 ಮಾಜಿ ಸ್ಪರ್ಧಿ ನೀತು ವನಜಾಕ್ಷಿ ಭಾಗಿಯಾಗಿದ್ದರು.

Aishwarya Sindhogi(2)

ಬಿಗ್​ಬಾಸ್​ನಿಂದ ಆಚೆ ಬಂದ ಮೇಲೆ ನಟಿ ಐಶ್ವರ್ಯ ಸಿಂಧೋಗಿ ಅವರು ಹೊಚ್ಚ ಹೊಸ ಸೀರಿಯಲ್​ನಲ್ಲಿ ನಟಿಸುತ್ತಿದ್ದಾರೆ. ನಿನ್ನ ಜೊತೆ ನನ್ನ ಕಥೆ ಧಾರಾವಾಹಿಯಲ್ಲಿ  ಐಶ್ವರ್ಯ ಸಿಂಧೋಗಿ ನೆಗೆಟಿವ್ ಶೇಡ್​ನಲ್ಲಿ ನಟಿಸುತ್ತಿದ್ದಾರೆ.

Aishwarya Sindhogi(1)

ಇನ್ನು, ಐಶ್ವರ್ಯ ಸಿಂಧೋಗಿ ಬರ್ತ್​ಡೇ ಸೆಲೆಬ್ರೇಷನ್ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ನಟಿಗೆ ಅಭಿಮಾನಿಗಳಿಂದ ಹುಟ್ಟು ಹಬ್ಬಕ್ಕೆ ಶುಭಾಶಯ ಮಹಾಪೂರವೇ ಹರಿದು ಬಂದಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Aishwarya shindogi
Advertisment