ಈ ಕಾರಣಕ್ಕೆ ನನಗೆ ಬಿಗ್ ಬಾಸ್​ ಕಪ್ ಸಿಗಲಿಲ್ಲ -ಅಶ್ವಿನಿ ಗೌಡ ಆಕ್ರೋಶ

ಅಶ್ವಿನಿ ಗೌಡ (Ashwini Gowda) ಕೈಗೆ ಯಾಕೆ ಬಿಗ್​ ಬಾಸ್ ಕಪ್ ಸಿಕ್ಕಿಲ್ಲ ಎಂಬುವುದಕ್ಕೆ ಉತ್ತರ ಕೊಟ್ಟಿದ್ದಾರೆ. ನ್ಯೂಸ್​ಫಸ್ಟ್​ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನ್ನಾಡಿರುವ ಅವರು, ಬಿಗ್ ಬಾಸ್ ಮನೆಯಲ್ಲಿನ ಯಾವುದೇ ಹೆಣ್ಮಕ್ಕಳಿಗೆ ಏಕವಚನದಲ್ಲಿ ಮಾತನ್ನಾಡಬಾರದು ಅನ್ನೋದು ನನ್ನ ಉದ್ದೇಶ ಆಗಿತ್ತು.

author-image
Ganesh Kerekuli
Advertisment

ಅಶ್ವಿನಿ ಗೌಡ (Ashwini Gowda) ಕೈಗೆ ಯಾಕೆ ಬಿಗ್​ ಬಾಸ್ ಕಪ್ ಸಿಕ್ಕಿಲ್ಲ ಎಂಬುವುದಕ್ಕೆ ಉತ್ತರ ಕೊಟ್ಟಿದ್ದಾರೆ. ನ್ಯೂಸ್​ಫಸ್ಟ್​ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನ್ನಾಡಿರುವ ಅವರು, ಬಿಗ್ ಬಾಸ್ ಮನೆಯಲ್ಲಿನ ಯಾವುದೇ ಹೆಣ್ಮಕ್ಕಳಿಗೆ ಏಕವಚನದಲ್ಲಿ ಮಾತನ್ನಾಡಬಾರದು ಅನ್ನೋದು ನನ್ನ ಉದ್ದೇಶ ಆಗಿತ್ತು. 

ಅಲ್ಲಿಗೆ ಬಂದ ಅದೆಷ್ಟೋ ಸ್ಪರ್ಧಿಗಳು ಅಶ್ಲೀಲ ಪದಗಳನ್ನ ಬಳಕೆ ಮಾಡಿದರು. ಆದರೆ ನಾನು ಅದ್ಯಾವುದನ್ನೂ ಮಾಡಲಿಲ್ಲ. ನನ್ನ ಉದ್ದೇಶ ಯಾರನ್ನೂ ಕೂಡ ಏಕವಚನದಿಂದ ಮಾತನ್ನಾಡಿಸಬಾರದು ಎಂದಾಗಿತ್ತು. 

ಆದರೆ ನನ್ನನ್ನು ಒಂದು ಟ್ರಿಗರ್ ಮಾಡಿದ್ರೆ ನಾನು ನೂರು ಆಗುವ ತನಕ ಬಿಡುತ್ತಿರಲಿಲ್ಲ. ಅದ್ಯಾವುದೂ ಕಾಣಲೇ ಇಲ್ಲ. ವೈಲ್ಡ್ ಕಾರ್ಡ್​ ಎಂಟ್ರಿ ನನ್ನ ಮೇಲೆ ಹಲ್ಲೆ ಮಾಡಿತು. ಚೈತ್ರಾ ಕುಂದಾಪುರ ಅವರು ನನ್ನ ಮೇಲೆ ದೈಹಿಕ ಹಲ್ಲೆ ಮಾಡಿದರು. ರಜತ್ ಮಾನಸಿಕ ಹಲ್ಲೆ ಮಾಡಿದರು. 

ಇದನ್ನೂ ಓದಿ:ವ್ಯಕ್ತಿಯ ಬಲಿ ಪಡೆದ 26 ಸೆಕೆಂಡ್ ವಿಡಿಯೋ.. ಲೈಕ್, ವೀವ್ಸ್​​ಗೋಸ್ಕರ ಹೋಯ್ತಾ ಜೀವ..?

ವೈಲ್ಡ್ ಕಾರ್ಡ್​ ಮೂಲಕ ಬಂದವರು ಬಿಗ್ ಬಾಸ್ ಮನೆಯ ಆಗು ಹೋಗುಗಳನ್ನ ನೋಡಿಕೊಂಡು ಬಂದಿದ್ದರು. ಅವರಿಗೆ ಯಾರ ಜೊತೆ ಹೇಗಿರಬೇಕು ಅನ್ನೋದು ಗೊತ್ತಿತ್ತು. ಯಾರನ್ನ ಟ್ರಿಗರ್ ಮಾಡಿದ್ರೆ ಉಳಿದುಕೊಳ್ಳಬಹುದು ಅನ್ನೋದು ಸ್ಪರ್ಧಿಗಳಿಗೆ ತಿಳಿದಿತ್ತು. ನಾನು ನನ್ನ ಪಾಡಿಗಿದ್ದರೂ ಅವರು ತಮ್ಮ ಬೇಳೆ ಬೇಯಿಸಿಕೊಳ್ಳಲು ನನ್ನ ಟ್ರಿಗರ್ ಮಾಡಲು ಬರುತ್ತಿದ್ದರು. 

ನನ್ನನ್ನು ಬೇಕು ಅಂತಲೇ ಟಾರ್ಗೆಟ್ ಮಾಡಿಕೊಂಡು ಕೆಲವರು ಬಂದಂತೆ ಇತ್ತು. ಅದು ಎವಿಡೆಂಟ್ ಆಗಿ ಕಾಣುತ್ತಿತ್ತು. ನಾವೆಲ್ಲ ಬಿಗ್​ ಬಾಸ್ ಮನೆಗೆ ಆಟ ಆಡಲು ಹೋಗಿದ್ದೇವು. ಇನ್ನು ಕೆಲವರು ಆಟ ಆಡೋರನ್ನು ಹಾಳು ಮಾಡಲು ಬಂದಿದ್ದರು. ಆಟ ಮಾಡೋರನ್ನು ಹಾಳು ಮಾಡೋದೇ ಒಂದು ತಂತ್ರ ಅನ್ನೋದು ಗೊತ್ತಾಗಿದ್ದೇ ತುಂಬಾ ಲೇಟ್ ಆಗಿ. ಅದೇ ಕಾರಣಕ್ಕೆ ಇವತ್ತು ನನ್ನ ಬಳಿ ಕಪ್ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ:ಮುಂಬೈ ಮೇಯರ್ ಸ್ಪರ್ಧೆಯ ಫೈಟ್ ಇನ್ನೂ ಮುಗಿದಿಲ್ಲ: ನಮಗೆ 6 ಸ್ಥಾನ ಮಾತ್ರ ಕೊರತೆ ಇದೆ -ಸಂಜಯ ರಾವತ್‌

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Bigg Boss Kannada 12 Ashwini Gowda Bigg Boss Bigg boss
Advertisment