‘ಇದ್ರೆ ಇರ್ತಾರೆ, ಇಲ್ಲದಿದ್ರೆ ಹೋಗ್ತಾರೆ..’ ಮದ್ವೆ ಆಗುವ ಹುಡುಗನ ಬಗ್ಗೆ ತುಟಿ ಬಿಚ್ಚಿದ ರಕ್ಷಿತಾ VIDEO

ಬಿಗ್​ ಬಾಸ್​ ಮನೆಯಲ್ಲಿ ರಕ್ಷಿತಾ ಮದುವೆ ಪ್ರಸ್ತಾಪ ಆಗಿದೆ. ನಿನ್ನೆಯಷ್ಟೇ ತ್ರಿವಿಕ್ರಮ್ ಅವರು ರಕ್ಷಿತಾ ನನ್ನನ್ನ ಮದುವೆ ಆಗ್ತೀರಾ ಎಂದು ತಮಾಷೆ ಮಾಡಿದ್ದರು. ಅದನ್ನು ಸರಿಯಾಗಿ ಕೇಳಿಸಿಕೊಳ್ಳದ ರಕ್ಷಿತಾ, ನೀವು ನನ್ನ ಮದುವೆಗೆ ಮಂಗಳೂರಿಗೆ ಬರಬೇಕು ಎಂದು ಜೋರಾಗಿ ಹೇಳಿದ್ದರು. ಇದು ವೀಕ್ಷಕರನ್ನು ನಗಿಸಿತ್ತು.

author-image
Ganesh Kerekuli
rakshita shetty (6)
Advertisment

ಬಿಗ್​ ಬಾಸ್​ ಮನೆಯಲ್ಲಿ ರಕ್ಷಿತಾ ಮದುವೆ ಪ್ರಸ್ತಾಪ ಆಗಿದೆ. ನಿನ್ನೆಯಷ್ಟೇ ತ್ರಿವಿಕ್ರಮ್ ಅವರು ರಕ್ಷಿತಾ ನನ್ನನ್ನ ಮದುವೆ ಆಗ್ತೀರಾ ಎಂದು ತಮಾಷೆ ಮಾಡಿದ್ದರು. ಅದನ್ನು ಸರಿಯಾಗಿ ಕೇಳಿಸಿಕೊಳ್ಳದ ರಕ್ಷಿತಾ, ನೀವು ನನ್ನ ಮದುವೆಗೆ ಮಂಗಳೂರಿಗೆ ಬರಬೇಕು ಎಂದು ಜೋರಾಗಿ ಹೇಳಿದ್ದರು. ಇದು ವೀಕ್ಷಕರನ್ನು ನಗಿಸಿತ್ತು. 

ಇವತ್ತು, ಅತಿಥಿಗಳಾದ ರಜತ್ ಕಿಶನ್, ತ್ರಿವಕ್ರಂ, ಮೋಕ್ಷಿತಾ ಮತ್ತೆ ಮದುವೆ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಗಾರ್ಡನ್ ಏರಿಯಾದಲ್ಲಿ ಕೂತು ಮಾತನ್ನಾಡುವ ರಕ್ಷಿತಾ, ನಾನು ಯಾರನ್ನೂ ಲವ್ ಮಾಡಿಲ್ಲ. ಯಾಕೆಂದರೆ ನನ್ನ ಹಾಗೆ ಯಾರೂ ಸಿಗಲಿಲ್ಲ. ನಾನು ಮದುವೆ ಆಗುವ ಹುಡುಗ ಹಳ್ಳಿಯವನು ಆಗಿರಬೇಕು. 

ಇದನ್ನೂ ಓದಿ: ಕುರ್ಚಿ ಕದನ ಗಲಾಟೆ ಬಗ್ಗೆ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ

ತೋಟದಲ್ಲಿ ಕೆಲಸ ಮಾಡಬೇಕು. ಅವರು ರೈತಾಪಿ ಕೆಲಸ ಮಾಡಬೇಕು. ಅವರು ಫಾರ್ಮಿಂಗ್ ಮಾಡುವಾಗ ನಾನು, ನನ್ನ ವ್ಲಾಗಿಂಗ್​ನಲ್ಲಿ ಇಡೀ ದಿನ ನಾನು ಅದನ್ನು ತೋರಿಸಬಹುದು. ನನ್ನ ಅಮ್ಮ, ಅಮ್ಮ ಇದ್ದಾರಲ್ವಾ? ಅವರು ಹೇಗೆ ಅಂದರೆ ಸೋಶಿಯಲ್ ಮಿಡಿಯಾದಲ್ಲಿ ಇಲ್ಲ. 

ನಮ್ಮ ಕುಟುಂಬದಲ್ಲಿ ನಾನೇ ಫಸ್ಟ್ ಸೋಶಿಯಲ್ ಮೀಡಿಯಾ ಪರ್ಸನ್.  ಮದುವೆಯಾದ ಬಳಿಕವೂ ನನಗೆ ಇದೇ ಲೈಫ್ ಬೇಕು. ನಾನು ಏನಾದರೂ ಒಂದು ಕೆಲಸ ಮಾಡಬೇಕಲ್ವಾ. ನನಗೆ ಇದೇ ಬೇಕು. ಅದಕ್ಕೆ ಸಪೋರ್ಟ್ ಮಾಡುವ ಹುಡು ಇರಬೇಕು ಎಂದಿದ್ದಾರೆ. 

ಅದಕ್ಕೆ ಪ್ರತಿಕ್ರಿಯಿಸುವ ರಂಜಿತ್, ಮದುವೆ ಆದಮೇಲೆ ಹುಡುಗ ನೀನಿ ವ್ಲಾಗಿಂಗ್  ಮಾಡೋದು ಬೇಡ ಅಂದರೆ..? ಎಂದು ಪ್ರಶ್ನೆ ಮಾಡಿದ್ದಾರೆ. ಬೇಡ ಅಂದ್ರೆ ಅವರು ಹೇಳಿಕೊಳ್ಳಲಿ, ನಾನು ಅದನ್ನು ಮಾಡಿಯೇ ಮಾಡ್ತೇನೆ. ಅವರು ನನ್ನ ಜೊತೆ ಇದ್ದರೆ ಇರ್ತಾರೆ, ಇಲ್ಲ ಅಂದರೆ ಹೋಗ್ತಾರೆ ಎಂದು ನೇರವಾಗಿ ಹೇಳಿದ್ದಾರೆ. ಅದಕ್ಕೆ ಅಲ್ಲಿದ್ದವರೆಲ್ಲ ಬಿದ್ದು ಬಿದ್ದು ನಕ್ಕಿದ್ದಾರೆ.

ಇದನ್ನೂ ಓದಿ:ರಮ್ಯಾ ಪ್ರಕಾರ ಯಾರು ಸಿಎಂ ಆಗಬೇಕಂತೆ ಗೊತ್ತಾ..? ಕುರ್ಚಿ ಕಿತ್ತಾಟದ ಬಗ್ಗೆ ಹೇಳಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rajath kishan, Akshita Rajath Bigg Boss Kannada 12 Rakshita Shetty Bigg boss
Advertisment