/newsfirstlive-kannada/media/media_files/2025/11/27/dr-yatindra-siddaramaiah-2025-11-27-14-32-13.jpg)
ಮುಖ್ಯಮಂತ್ರಿಗಳು ಹೈಕಮಾಂಡ್​​ಗೆ ಏನು ಮಾತು ಕೊಟ್ಟಿದ್ದಾರೋ, ಅದೇ ರೀತಿ ನಡೆದುಕೊಳ್ಳುತ್ತಾರೆ ಎಂದು ಸಿದ್ದರಾಮಯ್ಯರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಕುರ್ಚಿ ಗಲಾಟೆ ವಿಚಾರಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು.. ಯಾರೇ ಆಗಲಿ, ಹೈಕಮಾಂಡ್​ಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಏನು ಮಾತು ಕೊಟ್ಟಿದ್ದಾರೋ ಅದನ್ನು ಅವರೇ ಕೇಳಿ. ಅದು ನನಗೆ ಗೊತ್ತಿಲ್ಲ.
ಇದನ್ನೂ ಓದಿ: ಸಿದ್ದು vs ಡಿಕೆಶಿ: ಸ್ವಾಮೀಜಿಗಳ ಎಂಟ್ರಿ..! ಯಾರು ಏನಂದ್ರು..? VIDEO
ನಾನೊಬ್ಬ ಪಕ್ಷದ ಕಾರ್ಯಕರ್ತನಾಗಿ ಹೇಳ್ತಿದ್ದೇನೆ. ಸದ್ಯದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳನ್ನು ಬದಲಾಯಿಸುವ ವಾತಾವರಣ ನನಗೆ ಕಾಣುತ್ತಿಲ್ಲ. ಮುಖ್ಯಮಂತ್ರಿಗಳ ಮೇಲೆ ಯಾವುದೇ ದೂರು ಇಲ್ಲ. ಒಳ್ಳೆಯ ಆಡಳಿತವನ್ನು ಕೊಟ್ಟಿದ್ದಾರೆ. ಶಾಸಕರೂ ಕೂಡ ಅವರ ಪರವಾಗಿದ್ದಾರೆ. ಹೀಗಿರುವಾಗ ನನ್ನ ಪ್ರಕಾರ, ಸಿಎಂ ಸ್ಥಾನ ಬದಲಾವಣೆ ಸಾಧ್ಯತೆ ಕಡಿಮೆ.
ಹಾಗಿದ್ದೂ ಕೂಡ ಕೆಲವರು ಸಿಎಂ ಬದಲಾವಣೆ ಆಗಲಿದೆ ಎಂದು ಹೇಳ್ತಿದ್ದಾರೆ. ಅದನ್ನು ನಿರ್ಧಾರ ಮಾಡೋದು ಹೈಕಮಾಂಡ್. ಅದರ ಬಗ್ಗೆ ನಾವು ಮಾತನಾಡಿದರೆ ಯಾವುದೇ ಪ್ರಯೋಜನ ಇಲ್ಲ. ಇವತ್ತಿನ ಪರಿಸ್ಥಿತಿಯಲ್ಲಿ ನನ್ನ ಪ್ರಕಾರ ಖಂಡಿತವಾಗಿಯೂ ಸಿದ್ದರಾಮಯ್ಯ ಮುಂದಿನ ಐದು ವರ್ಷಗಳ ಕಾಲ ಸಿಎಂ ಆಗಿ ಮುಂದುವರಿಯಲಿದ್ದಾರೆ.
ಇದನ್ನೂ ಓದಿ: ತಮ್ಮ ವಿರುದ್ಧ ಕಾಮೆಂಟ್ ಮಾಡಿ ಜೈಲು ಪಾಲಾಗಿದ್ದವರನ್ನು ಕ್ಷಮಿಸಿದ ನಟಿ ರಮ್ಯಾ : ಈ ಬಗ್ಗೆ ರಮ್ಯಾ ಕೊಟ್ಟ ಸಮರ್ಥನೆ ಏನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us