ರಕ್ಷಿತಾ ಕಂಡ್ರೆ ಅಶ್ವಿನಿಗೆ ಯಾಕೆ ಆಗಲ್ಲ -ಅಸಲಿ ವಿಚಾರ ಹೇಳಿದ ಚಂದ್ರಪ್ರಭ -VIDEO

author-image
Ganesh Kerekuli
Advertisment

ಆರು ವಾರಗಳ ಕಾಲ ಬಿಗ್​ಬಾಸ್ (Bigg Boss)​ ಮನೆಯಲ್ಲಿದ್ದ ಚಂದ್ರಪ್ರಭ ನಿನ್ನೆ ಹೊರಬಂದಿದ್ದಾರೆ. ದೊಡ್ಮನೆಯಿಂದ ಬರ್ತಿದ್ದಂತೆಯೇ ನ್ಯೂಸ್​ಫಸ್ಟ್​ ನಡೆಸಿದ ವಿಶೇಷ ಸಂದರ್ಶನದಲ್ಲಿ ತಮ್ಮ ಅನುಭವ ಹಂಚಿಕೊಂಡರು. ಈ ವೇಳೆ ರಕ್ಷಿತಾ ಮತ್ತು ಅಶ್ವಿನಿ ನಡುವೆ ಯಾಕೆ ಆಗಿ ಬರ್ತಿಲ್ಲ ಎಂಬ ಪ್ರಶ್ನೆಗೆ ಉತ್ತರ ಕೊಡುವ ಪ್ರಯತ್ನ ಮಾಡಿದರು. 

ಚಂದ್ರಪ್ರಭ ಉತ್ತರ ಹೀಗಿದೆ..  

ಅದೇನೋ ಗೊತ್ತಿಲ್ಲ. ಅವರಿಬ್ಬರ ಮಧ್ಯೆ ಆಗಿ ಬರುತ್ತಿಲ್ಲ. ರಕ್ಷಿತಾ ಹೇಗೆ ಅಂದರೆ, ಕೆಲವೊಂದು ವಿಚಾರದಲ್ಲಿ ಮಾತನ್ನಾಡುವ ಪ್ರಯತ್ನವೇ ಮಾಡೋದಿಲ್ಲ. ಅವರಿಗೆ ಕೆಲವರು ಬ್ಯಾಡ ಅಂದರೆ ಬೇಡ ಅಷ್ಟೇ. ಉದಾಹರಣೆಗೆ ಧ್ರುವಂತ್. ಧ್ರುವಂತ್​ ಜೊತೆ ಯಾವುದೇ ಗಲಾಟೆ ಆಗದಿದ್ದರೂ, ಅವರು ಯಾವುದೇ ಕಾರಣಕ್ಕೂ ಮಾತನ್ನಾಡುತ್ತಿಲ್ಲ. ಬಾಯ್ ಚಾನ್ಸ್​ ಧ್ರುವನೇ ರಕ್ಷಿತಾ ಜೊತೆ ಮಾತಾಡಬಹುದು. ಆದರೆ ರಕ್ಷಿತಾ ಆತನ ಜೊತೆ ಮಾತನ್ನಾಡೋದಿಲ್ಲ ಎಂದಿದ್ದಾರೆ. ಚಂದ್ರಪ್ರಭ ಏನೆಲ್ಲ ಮಾತನ್ನಾಡಿದರು ಅನ್ನೋದನ್ನು ತಿಳಿದುಕೊಳ್ಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ..  

ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಅಮೃತವರ್ಷಿಣಿ’ ಖ್ಯಾತಿಯ ರಜಿನಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss Kannada 12 BBK12 Bigg boss Chandraprabha
Advertisment