/newsfirstlive-kannada/media/media_files/2025/10/08/bigg-boss-kiccha-sudeep-2-2025-10-08-09-20-37.jpg)
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​ಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಕೊಳಚೆ ನೀರನ್ನು ಸಂಸ್ಕರಿಸದೆ ನೇರವಾಗಿ ಚರಂಡಿಗೆ ಬಿಟ್ಟು ನಿಯಮ ಉಲ್ಲಂಘನೆ ಮಾಡಿರುವ ಜಾಲಿವುಡ್ ಸ್ಟುಡಿಯೋಗೆ ಬೀಗ ಹಾಕಲಾಗಿದೆ. ಈ ಕುರಿತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ಕೂಡ ನೀಡಿದೆ.
ಏನಿದು ಪ್ರಕರಣ..?
ಕೊಳಚೆ ನೀರನ್ನು ಸಂಸ್ಕಕರಿಸದೆ ನೇರವಾಗಿ ಚರಂಡಿಗೆ ಹರಿಸಿ ನಿಯಮ ಉಲ್ಲಂಘನೆ ಮಾಡಿರುವ ಜಾಲಿವುಡ್ ಸ್ಟುಡಿಯೋಗೆ, ಸೋಮವಾರ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್ ನೀಡಲಾಗಿತ್ತು. ಈ ಹಿನ್ನೆಲೆ ನಿನ್ನೆ ಜಾಲಿವುಡ್ ಸ್ಟುಡಿಯೋದಲ್ಲಿರುವ ಬಿಗ್​ಬಾಸ್ ಮನೆಗೆ ಅಧಿಕಾರಿಗಳು ತೆರಳಿ ಮನೆಗೆ ಬೀಗ ಹಾಕಿದ್ದಾರೆ. ಬಿಗ್​ಬಾಸ್ ಮನೆಯಲ್ಲಿದ್ದ ಎಲ್ಲಾ 17 ಸ್ಪರ್ಧಿಗಳನ್ನು ನಿನ್ನೆ ತಡರಾತ್ರಿಯೇ ಖಾಸಗಿ ರೆಸಾರ್ಟ್​ಗೆ ಶಿಫ್ಟ್ ಮಾಡಲಾಗಿದೆ. ಪ್ರೇಕ್ಷಕರ ಪಾಲಿನ ಮನರಂಜನೆಯ ಸ್ವರ್ಗವಾಗಿದ್ದ ಜನಪ್ರಿಯ ರಿಯಾಲಿಟಿ ಶೋಗೆ ಈಗ ಕರಿನೆರಳು ಆವರಿಸಿದೆ. ಹಾಗಾದ್ರೆ ಬಿಗ್​ಬಾಸ್ ಶೋ ನಡೆಯುತ್ತಾ? ನಡೆಯಲ್ವಾ? ಮುಂದಿನ ಪ್ಲಾನ್ ಏನು? ಎಂಬ ಹಲವು ಪ್ರಶ್ನೆಗಳು ಪ್ರೇಕ್ಷರಕಲ್ಲಿ ಕಾಡುತ್ತಿವೆ.
ಬಿಗ್​ಬಾಸ್​ನ ಮುಂದಿನ ನಡೆ ಏನು?
ಜಾಲಿವುಡ್​ ಸ್ಟುಡಿಯೋಗೆ ಬೀಗ ಹಾಕಿದ ಹಿನ್ನೆಲೆ, ರಾಮನಗರ ಜಿಲ್ಲಾಡಳಿತದ ಕ್ರಮವನ್ನು ಪ್ರಶ್ನಿಸಿ ಸ್ಟುಡಿಯೋ ಅಧಿಕಾರಿಗಳು ಹೈಕೋರ್ಟ್​ಗೆ ಅರ್ಜಿ ಸಲ್ಲಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಅರ್ಜಿ ಸಲ್ಲಿಸುವುದರ ಜೊತೆಗೆ ತುರ್ತು ವಿಚಾರಣೆ ನಡೆಸುವಂತೆ ಸಹ ಮನವಿ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇಂದು ಬೆಳಗ್ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.