/newsfirstlive-kannada/media/media_files/2025/10/07/bigg_boss_beega-2025-10-07-20-28-19.jpg)
ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್​ 12ಕ್ಕೆ ಆರಂಭದಲ್ಲೇ ಕಂಟಕ ಎದುರಾಗಿದೆ. ಬಿಗ್‌ಬಾಸ್ ಶುರುವಾದ 10 ದಿನಕ್ಕೆ ಶೋ ಶಟ್​ಡೌನ್​ ಆಗಿದೆ. ವೈಲ್ಡ್​​ ಕಾರ್ಡ್​ ಆಗಿ ಸಪ್ರೈಸ್​​ ಎಂಟ್ರಿ ಕೊಟ್ಟ ತಹಶೀಲ್ದಾರ್​​, ಎಲ್ಲಾ ಸ್ಪರ್ಧಿಗಳನ್ನ ​​ಎಲಿಮಿನೇಟ್​​​​ ಮಾಡಿ ಇಡೀ ಬಿಗ್​​ಬಾಸ್​​ ಮನೆಗೆ ಬೀಗ ಜಡಿದಿದ್ದಾರೆ.
ಇದನ್ನೂ ಓದಿ: ಘೋರ ದುರಂತ; ಚಲಿಸ್ತಿದ್ದ ಬಸ್​ ಮೇಲೆ ಕುಸಿದು ಬಿದ್ದ ಬೆಟ್ಟ.. ಕಣ್ಮುಚ್ಚಿದ 18 ಪ್ರಯಾಣಿಕರು
ಬಿಗ್​ ಬಾಸ್​​ ಕನ್ನಡ.. ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ.. ಇಡೀ ರಾಜ್ಯವೇ ತುದಿಗಾಲಲ್ಲಿ ಕೂತು ನೋಡ್ತಿದ್ದ ಬಿಗ್​ ಬಾಸ್​ ಶೋಗೆ ಬಿಗ್ ಶಾಕ್ ಎದುರಾಗಿದೆ.. ಶೋ ಶುರುವಾದ ಹತ್ತೇ ದಿನಕ್ಕೆ ಬಿಗ್​ ಬಾಸ್​ ಹೌಸ್​​ ಶಟ್​ಡೌನ್​ ಆಗಿದೆ..
ಕನ್ನಡ ಬಿಗ್ ಬಾಸ್ ಮನೆಗೆ ಬಿತ್ತು ಬೀಗ, 17 ಸ್ಪರ್ಧಿಗಳು ಔಟ್!
ಬಿಗ್‌ಬಾಸ್ ಕನ್ನಡ ​​ ರಿಯಾಲಿಟಿ ಶೋಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾಗಿ ಒಂದು ವಾರವಷ್ಟೇ ಮುಗಿದು, ಎರಡನೇ ವಾರಕ್ಕೆ ಕಾಲಿಟ್ಟಿದ್ದು ಅಷ್ಟರಲ್ಲಾಗಲೇ ಬಿಗ್ ಬಾಸ್ ಮನೆಗೆ ವೈಲ್ಡ್​ ಕಾರ್ಡ್​ ಎಂಟ್ರಿ ಕೊಟ್ಟ ತಹಶೀಲ್ದಾರ್, ಬಿಗ್​ಬಾಸ್​ ಶೋ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಗೆ ಬೀಗ ಜಡಿದು, ಕಂಟೆಸ್ಟಟ್​ಗಳನ್ನ ಮಾಸ್​ ಆಗಿ ಎಲಿಮಿನೇಟ್​ ಮಾಡಿದ್ದಾರೆ..
ಬಿಗ್‌ಬಾಸ್ ಶೋ ನಡೀತಾ ಇದ್ದಿದ್ದು ರಾಮನಗರದಲ್ಲಿರೋ ಅಮ್ಯೂಸ್‌ಮೆಂಟ್ ಪಾರ್ಕ್ ಜಾಲಿವುಡ್ ಸ್ಟುಡಿಯೋ ಆವರಣದಲ್ಲಿ. ಆದ್ರೆ ಜಾಲಿವುಡ್‌ನವರು ಪರಿಸರ ಇಲಾಖೆಯ ನಿಯಮಗಳ ಉಲ್ಲಂಘನೆಯ ಆರೋಪ ಎದುರಿಸ್ತಿದ್ರು. ಗ್ರೀನ್​​ ಜೋನ್​​​ನಲ್ಲಿದ್ರೂ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದಿರಲಿಲ್ಲ. ತ್ಯಾಜ್ಯ ನೀರನ್ನು ಸಂಸ್ಕರಣೆಯೇ ಮಾಡ್ತಿರ್ಲಿಲ್ಲ. ಹೀಗೆ ಪರಿಸರ ನಿಯಮ ಉಲ್ಲಂಘನೆ ಸಂಬಂಧಿತ ಹಲವು ಕಾರಣಗಳಿಗಾಗಿ ಒಂದು ವರ್ಷಕ್ಕಿಂತ ಹಿಂದೇನೇ ಜಾಲಿವುಡ್‌ಗೆ ನೋಟಿಸ್ ನೀಡಲಾಗಿತ್ತು. ಆದ್ರೆ ಯಾವುದೇ ನೋಟಿಸ್‌ಗೆ ಉತ್ತರಿಸದೆ ನಿರ್ಲಕ್ಷ್ಯ ಮಾಡಿದ ಹಿನ್ನೆಲೆ ನಿನ್ನೆ ರಾಮನಗರ ತಾಲೂಕು ಆಡಳಿತ ಜಾಲಿವುಡ್‌ನ ಸೀಲ್ ಮಾಡಿದೆ.
ನಿನ್ನೆ ಸಂಜೆ ಬಿಗ್‌ಬಾಸ್ ಮನೆಗೆ ಬೀಗ ಜಡೀತಿದ್ದಂತೆ ಆಯೋಜಕರು ಕಾರ್‌ಗಳಲ್ಲಿ 17 ಸ್ಪರ್ಧಿಗಳನ್ನ ಶಿಫ್ಟ್ ಮಾಡಿದ್ದಾರೆ. ಜಾಲಿವುಡ್‌ನಿಂದ ನೇರವಾಗಿ ಬಿಡದಿ ಬಳಿಯಿರೋ ಈಗಲ್ಟನ್ ರೆಸಾರ್ಟ್‌ಗೆ ಶಿಫ್ಟ್ ಮಾಡಿದ್ದಾರೆ. ಸುಮಾರು 15 ರೂಮ್‌ಗಳನ್ನ ಬುಕ್ ಮಾಡ್ಲಾಗಿದೆ.
ಬಿಗ್​ ಬಾಸ್ ಮುಂದಿನ ನಡೆ ಏನು?
ಬಿಗ್​ ಬಾಸ್​​ ಮನೆಗೆ ಬೀಗ ಜಡಿತ್ತಿಯುತ್ತಿದ್ದಂತೆ ವೀಕ್ಷಕರು ಶಾಕ್​ ಆಗಿದ್ದಾರೆ. ಈ ಬಗ್ಗೆ ಕಲರ್ಸ್​ ಕನ್ನಡ, ಅಡಚಣೆಗಾಗಿ ಕ್ಷಮೆ ಕೋರುತ್ತೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಷಾದ ವ್ಯಕ್ತಪಡಿಸಿದೆ. ಬಿಗ್​ಬಾಸ್​​ ಶೋ ಕತೆ ಮುಂದೇನು ಅನ್ನೋದು ಪ್ರಶ್ನೆಯಾಗಿಯೇ ಉಳಿದಿದೆ. ಕೋರ್ಟ್‌ಗೆ ಹೋಗೋದಕ್ಕೆ ಬಿಗ್‌ಬಾಸ್ ಆಯೋಜಕರು ಚಿಂತನೆ ನಡೆಸಿದ್ದಾರೆ. ಒಟ್ಟಾರೆ ಕನ್ನಡಿಗರ ಮನೆಮಾತಾಗಿರುವ ಬಿಗ್​ಬಾಸ್​​ ಶೋ ಅರ್ಧಕ್ಕೆ ಸ್ಟಾಪ್​ ಆಗುವ ಆತಂಕ ಎದುರಾಗಿದ್ದು, ಕೋರ್ಟ್​ನ ಕಟಕಟೆಯಲ್ಲಿ ಬಿಗ್​ಬಾಸ್​ ಭವಿಷ್ಯ ನಿರ್ಧಾರವಾಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ