/newsfirstlive-kannada/media/media_files/2025/08/22/kavyaa-k-shastry-2025-08-22-15-16-44.jpg)
ಕನ್ನಡದ ನಟಿ, ನಿರೂಪಕಿ, ಬಿಗ್ಬಾಸ್ ಮಾಜಿ ಸ್ಪರ್ಧಿ ಕಾವ್ಯಾ ಶಾಸ್ತ್ರಿ ಸಖತ್ ಖುಷಿಯಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಌಕ್ಟೀವ್ ಆಗಿರೋ ನಟಿ ಕಾವ್ಯಾ ಶಾಸ್ತಿ ತಾವು ಮದುವೆ ಆಗುತ್ತಿರೋ ಹುಡುಗನನ್ನು ಪರಿಚಯಿಸಿದ್ದಾರೆ.
ಇದನ್ನೂ ಓದಿ:ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಯಾರಾರಿಗೆ ಎಷ್ಟೆಷ್ಟು ಕೋಟಿ ಕೊಟ್ರು?
ಆದ್ರೆ, ನಟಿ ಕಾವ್ಯಾ ಶಾಸ್ತಿ ಯಾರು, ಆತನ ಹಿನ್ನೆಲೆ ಏನು ಎಂಬುವುದನ್ನು ರಿವೀಲ್ ಮಾಡಿಲ್ಲ. ಆದ್ರೆ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅದರ ಜೊತೆಗೆ ‘ನನ್ನವ’ ಎಂದು ಬರೆದುಕೊಂಡಿದ್ದಾರೆ.
ಸದ್ಯ ಇದೇ ಪೋಸ್ಟ್ ನೋಡಿದ, ಸ್ನೇಹಿತರು, ಸಹ ಕಲಾವಿದರು ಹಾಗೂ ಅಭಿಮಾನಿಗಳು ನಟಿಗೆ ಶುಭ ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ. ನಟಿ ಶೇರ್ ಮಾಡಿಕೊಂಡ ಪೋಸ್ಟ್ನಲ್ಲಿ ಕಾವ್ಯಾ ಶಾಸ್ತ್ರಿ ಅವರ ಕೈ ಅನ್ನು ಹುಡುಗ ಹಿಡಿದುಕೊಂಡಿದ್ದಾರೆ. ಫೋಟೋದಲ್ಲಿ ನಟಿ ನಗುವನ್ನು ಬೀರಿದ್ದಾರೆ. ಇದೇ ಪೋಸ್ಟ್ ವೈರಲ್ ಆಗುತ್ತಿದೆ.
ಇನ್ನೂ, ನಟಿ ಕಾವ್ಯಾ ಶಾಸ್ತ್ರಿ ಬಿಗ್ ಬಾಸ್ ಕನ್ನಡ ಸೀಸನ್ 4ರ ಸ್ಪರ್ಧಿಯಾಗಿದ್ದರು. ಸಿನಿ ಇಂಡಸ್ಟ್ರೀಯಿಂದ ಕೊಂಚ ದೂರ ಉಳಿದಿದ್ದ ಕಾವ್ಯಾ ಶಾಸ್ತ್ರಿ ʻಜಾನಕಿ ಸಂಸಾರʼ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಮತ್ತೆ ಎಂಟ್ರಿ ಕೊಟ್ಟಿದ್ದರು.
ಧಾರಾವಾಹಿಗಳಷ್ಟೇ ಅಲ್ಲದೆ ಲವ್ 360, ಚೆಲುವೆಯೇ ನಿನ್ನ ನೋಡಲು, ಯುಗ ಸೇರಿದಂತೆ ಹಲವು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ಸದಾ ಸಾಮಾಜಿಕ ವಿಚಾರಗಳು ಸೇರಿದಂತೆ ಹಲವಾರು ಪೌರಾಣಿಕ ಹಾಗೂ ಹಿಂದೂ ಧರ್ಮದ ಕುರಿತಾದ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾ ಇರುತ್ತಾರೆ ನಟಿ ಕಾವ್ಯಾ ಶಾಸ್ತ್ರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ