/newsfirstlive-kannada/media/media_files/2025/08/29/sangeetha-sringeri-2025-08-29-14-29-21.jpg)
ಬಿಗ್ ಬಾಸ್ ನಂತರ ಚಾರ್ಲಿ ಬೆಡಗಿ ಯಾವುದೇ ಹೊಸ ಪ್ರಾಜೆಕ್ಟ್ ಬಗ್ಗೆ ಅನೌನ್ಸ್ ಮಾಡಿಲ್ಲ. ಮತ್ತೇ ಏನು ಮಾಡ್ತಿದ್ದಾರೆ ಸಂಗೀತಾ ಶೃಂಗೇರಿ ಎಂಬ ಕೌತುಕ ಸಿಂಹಿನಿ ಅಭಿಮಾನಿಗಳದ್ದು. ಬ್ಯುಸಿನೆಸ್ ಕಡೆ ಮುಖ ಮಾಡಿದ್ದಾರೆ ನಟಿ.
ಇದನ್ನೂ ಓದಿ: ಅನುಶ್ರೀ ಕಲ್ಯಾಣ -ಲೇಟೆಸ್ಟ್ ಫೋಟೋಗಳು
ಹೌದು, ಸಂಗೀತಾ ಬ್ಯುಸಿನೆಸ್ ವುಮನ್ ಆಗೋ ಪ್ಲ್ಯಾನ್ನಲ್ಲಿದ್ದಂತಿದೆ. ಸಂಗೀತಾ ಕೈನಲ್ಲಿ ಹಲವು ಸ್ಫಟಿಕದ ಹರಳುಗಳಿದ್ದು, ಆಧ್ಯಾತ್ಮಿಕ ಆಸಕ್ತಿ ಹಾಗೂ ಅಂದುಕೊಂಡಿದ್ದನ್ನು ಸಾಧಿಸಲು ಈ ಹವಳಗಳು ದಾರಿ ತೋರಿಸ್ತವೆ. ಇದಕ್ಕೆ ಸಂಬಂಧಪಟ್ಟಂತೆ ಹೊಸ ಕೆಲಸ ಶುರು ಮಾಡೋ ಪ್ಲ್ಯಾನ್ನಲ್ಲಿದ್ದಾರೆ ಸಿಂಹಿನಿ.
ಫಿಟ್ನೆಸ್ ಫ್ರೀಕ್ ಸಂಗೀತಾ. ಬಿಗ್ಬಾಸ್ ಮನೆಯಲ್ಲಿ ವೇಟ್ ಲಾಸ್ ಆಗಿದ್ದ ನಟಿ, ಸದ್ಯ ಫಿಟ್ನೆಸ್ ಕಡೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಗಂಟೆಗಟ್ಟಲೇ ಜಿಮ್ನಲ್ಲೇ ಕಳೆಯೋ ನಟಿ, ದೇಹವನ್ನ ಹುರಿಗೋಳಿಸಿದ್ದಾರೆ.
ಇನ್ನು ಹೊಸ ಹೊಸ ಜಾಗಗಳನ್ನ ಎಕ್ಸ್ಪ್ಲೋರ್ ಮಾಡ್ತಿರೋ ಸಂಗೀತಾ ಶೃಂಗೇರಿ, ಹೊಸ ಭಾವನೆಗಳ ಜೊತೆ ಕಲರ್ಫುಲ್ ಆಗಿ ಹೊಳಿತಿದ್ದಾರೆ. ಆದ್ರೆ, ಅಭಿಮಾನಿಗಳ ಆಸೆ ಒಂದೇ ಆದಷ್ಟು ಬೇಗ ಸಂಗೀತಾ ಬಣ್ಣ ಹಚ್ಚಿಲಿ, ತೆರೆಗೆ ಬರಲೀ ಅನ್ನೋದು. ಅವ್ರ ಆಸೆ ಈಡೇರಿಸ್ತಾರ ಸಿಂಹಿಣಿ ಅಂತ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ