Bigg Boss Finale: ಹೃದಯಗೆದ್ದ ಮ್ಯೂಟಂಟ್ ರಘು.. ಶಾಕಿಂಗ್‌ ಎವಿಕ್ಷನ್..!

ಬಿಗ್​ ಬಾಸ್​ ಫಿನಾಲೆ ತಲುಪಿದ್ದ ಮ್ಯೂಟಂಟ್ ರಘು ಅವರ ಜರ್ನಿ ಐದನೇ ಸ್ಥಾನಕ್ಕೆ ಕೊನೆಯಾಗಿದೆ. ವೀಕ್ಷಕರ ಮತಯುದ್ಧದಲ್ಲಿ ರಘು ಅವರಿಗೆ ಐದನೇ ಸ್ಥಾನ ಲಭಿಸಿದೆ. ಧನುಷ್ ಗೌಡ ಅವರು ಆರನೇ ಸ್ಥಾನ ಪಡೆದುಕೊಂ‌ಡು ಮನೆಯಿಂದ ಹೊರ ಬಂದಿದ್ದಾರೆ.

author-image
Ganesh Kerekuli
Raghu
Advertisment

ಬಿಗ್​ ಬಾಸ್​ ಫಿನಾಲೆ ತಲುಪಿದ್ದ ಮ್ಯೂಟಂಟ್ ರಘು ಅವರ ಜರ್ನಿ ಐದನೇ ಸ್ಥಾನಕ್ಕೆ ಕೊನೆಯಾಗಿದೆ. ವೀಕ್ಷಕರ ಮತಯುದ್ಧದಲ್ಲಿ ರಘು ಅವರಿಗೆ ಐದನೇ ಸ್ಥಾನ ಲಭಿಸಿದೆ. ನಟಿ ಶೃತಿ ಅವರು ಬಿಗ್‌ ಬಾಸ್‌ ಮನೆಗೆ ಆಗಮಿಸಿ ರಘು ಅವರನ್ನು ಆಚೆ ಕರೆದುಕೊಂಡು ಹೋಗಿದ್ದಾರೆ.

ಕನ್ನಡ ಬಿಗ್​ ಬಾಸ್​ ಸೀಸನ್-12 ರ ಅಂತಿಮ 6 ಸ್ಪರ್ಧಿಗಳ ಪೈಕಿಯಲ್ಲಿ ಮ್ಯೂಟಂಟ್ ರಘು ಕೂಡ ಒಬ್ಬರಾಗಿದ್ದರು. ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ,  ಕಾವ್ಯ ಶೈವ, ಧನುಷ್ ಗೌಡ ಫೈನಲಿಸ್ಟ್ ಸ್ಪರ್ಧಿಗಳಾಗಿದ್ದರು. ಇದೀಗ ಧನುಷ್ 6ನೇ ಸ್ಥಾನ ಪಡೆದುಕೊಂಡ್ರೆ ರಘು ಅವರು ಐದನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.  

ಮ್ಯೂಟೆಂಟ್ ರಘು ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದರು. ಮ್ಯುಟೆಂಟ್ ರಘು ಅವರ ಪೂರ್ಣ ಹೆಸರು ರಾಘವೇಂದ್ರ ಎಸ್ ಹೊಂಡಕೇರಿ. ಇತ್ತೀಚೆಗಷ್ಟೆ ಕಲರ್ಸ್ ಕನ್ನಡದ ಕ್ವಾಟ್ಲೆ ಕಿಚನ್ ಶೋನಲ್ಲಿ ಇವರು ವಿನ್ನರ್ ಆಗಿದ್ದರು. ಅಲ್ಲಿಂದ ಅವರು ಬಿಗ್​ ಬಾಸ್ ಮನೆ ಪ್ರವೇಶ ಮಾಡಿದ್ದರು. 

ಇದನ್ನೂ ಓದಿ:ಬಿಗ್ ಬಾಸ್​ ಮನೆ ಎದುರು ಗಿಲ್ಲಿ ಅಭಿಮಾನಿಗಳ ಮೇಲೆ ಲಘು ಲಾಠಿ ಪ್ರಹಾರ

raghu
Photograph: (colors kannada)

ಮ್ಯೂಟಂಟ್ ರಘುಗೆ 44 ವರ್ಷ. ಪವರ್‌ ಲಿಫ್ಟಿಂಗ್‌ ಕ್ರೀಡೆಯಲ್ಲಿ ಕರ್ನಾಟಕ ಹಾಗೂ ಭಾರತದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಿದ ಇವರಿಗೆ ಕರ್ನಾಟಕ ಸರ್ಕಾರ 2022ರಲ್ಲಿ, ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಪವರ್‌ ಲಿಫ್ಟಿಂಗ್‌ ಕ್ರೀಡೆಯಲ್ಲಿ ಈ ಮಹತ್ವದ ಪ್ರಶಸ್ತಿ ಸ್ವೀಕರಿಸಿದ ರಾಜ್ಯದ ಮೊಟ್ಟ ಮೊದಲ ಪವರ್‌ ಲಿಫ್ಟರ್‌ ಎಂಬ ಕೀರ್ತಿಗೆ ಕೂಡ ರಾಘವೇಂದ್ರ ಹೊಂಡದಕೇರಿ ಭಾಜನರಾಗಿದ್ದಾರೆ. 5X ಪವರ್ ಲಿಫ್ಟಿಂಗ್‌ನಲ್ಲಿ ರಾಘವೇಂದ್ರ ವರ್ಲ್ಡ್ ಚಾಂಪಿಯನ್ ಕೂಡ ಆಗಿದ್ದಾರೆ. ಕಾಟೇರ ಹಾಗೂ ಕ್ರಾಂತಿ ಚಿತ್ರಗಳಲ್ಲಿ ವಿಲನ್ ಪಾತ್ರ ಮಾಡಿದ್ದಾರೆ. ಕಾಂತಾರ: ಚಾಪ್ಟರ್ 1 ಚಿತ್ರದಲ್ಲಿಯೂ ಅವರು ವಿಲನ್ ಆಗಿ ನಟಿಸಿದ್ದಾರೆ.

ಟಿವಿ ವಾಹಿನಿಗಳ ಅತಿ ದೊಡ್ಡ ರಿಯಾಲಿಟಿ ಶೋಗಳಲ್ಲಿ ಬಿಗ್​ ಬಾಸ್​ಗೆ ಭಾರೀ ಜನಪ್ರಿಯತೆ ಇದೆ. ದೇಶದಲ್ಲಿ ಬಿಗ್ ಬಾಸ್ ಮೊದಲು ಆರಂಭವಾಗಿದ್ದು, ಹಿಂದಿಯಲ್ಲಿ. ಆ ಬಳಿಕ ಕನ್ನಡದಲ್ಲಿ ಬಿಗ್ ಬಾಸ್ ಪ್ರಸಾರ ಆರಂಭಿಸಲಾಯಿತು. ಬಿಗ್​ ಬಾಸ್ ಅಂದ್ರೆ ವ್ಯಕ್ತಿತ್ವದ ಆಟ. ಪ್ರತಿಭೆಯನ್ನು ಶೋಧಿಸುತ್ತ ವ್ಯಕ್ತಿತ್ವವನ್ನು ಅನಾವರಣ ಮಾಡುವ ಕಲೆಗಾರಿಕೆಯೇ ಬಿಗ್​ ಬಾಸ್​ನ ತಾಖತ್ತು. ವ್ಯಕ್ತಿತ್ವದ ಆಟದಲ್ಲಿ ಈ ವರ್ಷ ಒಟ್ಟು 24 ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ನೀಡಿದ್ದರು. 

ಇದನ್ನೂ ಓದಿ: ಭದ್ರಾವತಿಯಲ್ಲಿ ದಾರುಣ ಘಟನೆ.. ಒಂದೇ ಕುಟುಂಬದ ನಾಲ್ವರು ಭದ್ರಾ ನಾಲೆಗೆ ಬಿದ್ದು ನೀರು ಪಾಲು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

kiccha sudeep Bigg boss mutant raghu
Advertisment