ಬಿಗ್ ಬಾಸ್​ ಮನೆ ಎದುರು ಗಿಲ್ಲಿ ಅಭಿಮಾನಿಗಳ ಮೇಲೆ ಲಘು ಲಾಠಿ ಪ್ರಹಾರ

ಗಿಲ್ಲಿ ನಟ ಅಭಿಮಾನಿಗಳ ಮೇಲೆ ಲಘು ಲಾಠಿ ಪ್ರಹಾರ ನಡೆದಿದೆ. ಇವತ್ತು ಬಿಗ್​ ಬಾಸ್​ ಶೋನ ಫಿನಾಲೆ ನಡೆಯುತ್ತಿದೆ. ಹೀಗಾಗಿ ರಾಮನಗರದ ಜಾಲಿವುಡ್ ಮುಂದೆ ಹೆಚ್ಚಿನ ಸಂಖ್ಯೆ ಅಭಿಮಾನಿಗಳು ಜಮಾಯಿಸಿದ್ದಾರೆ.

author-image
Ganesh Kerekuli
Gilli Fans (2)
Advertisment

ರಾಮನಗರ: ಗಿಲ್ಲಿ ನಟನ ಅಭಿಮಾನಿಗಳ ಮೇಲೆ ಲಘು ಲಾಠಿ ಪ್ರಹಾರ ನಡೆದಿದೆ. ಇವತ್ತು ಬಿಗ್​ ಬಾಸ್​ ಶೋನ ಫಿನಾಲೆ ನಡೆಯುತ್ತಿದೆ. ಹೀಗಾಗಿ ರಾಮನಗರದ ಜಾಲಿವುಡ್ ಮುಂದೆ ಹೆಚ್ಚಿನ ಸಂಖ್ಯೆ ಅಭಿಮಾನಿಗಳು ಜಮಾಯಿಸಿದ್ದಾರೆ.

ಜಾಲಿವುಡ್​ನ ಎರಡೂ ಗೇಟ್​ಗಳ ಮುಂದೆ ಜನರು ಜಮಾಯಿಸಿದ್ದು ನೂಕು ನುಗ್ಗಲು ಆಗಿತ್ತು. ಮಾತ್ರವಲ್ಲ, ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆ ಆಗಿತ್ತು. ಹೀಗಾಗಿ ಗಲ್ಲಿ ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

ಬಿಗ್​ ಬಾಸ್​ ಫಿನಾಲೆಗೆ ಒಟ್ಟು 6 ಸ್ಪರ್ಧಿಗಳು ಎಂಟ್ರಿ ನೀಡಿದ್ದಾರೆ. ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ,  ಕಾವ್ಯ ಶೈವ, ಮ್ಯೂಟಂಟ್ ರಘು ಕೂಡ ಫೈನಲಿಸ್ಟ್ ಸ್ಪರ್ಧಿಗಳಾಗಿದ್ದಾರೆ. 

ಇದನ್ನೂ ಓದಿ: ‘ಬಿಗ್ ಬಾಸ್​ಗೆ ಹೋಗೋದು ಬೇಡ ಎಂದಿದ್ದೆ’ ಮೊಮ್ಮಗಳು ರಕ್ಷಿತಾ ಬಗ್ಗೆ ಅಜ್ಜಿ ಹೇಳಿದ್ದೇನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss Kannada 12 Gilli Nata Bigg boss bigg boss kavya
Advertisment