Advertisment

ಬಿಗ್​ ಬಾಸ್​ ಮನೆಯಲ್ಲಿ 19 ಕಂಟೆಸ್ಟೆಂಟ್ಸ್​.. ಒಂಟಿಯಾಗಿ ದೊಡ್ಮನೆಗೆ ಎಂಟ್ರಿಯಾದವ್ರು ಯಾರು?

ಸ್ಪಂದನಾ ಸೋಮಣ್ಣ, ಸೋಷಿಯಲ್​ ಮೀಡಿಯಾ ಖ್ಯಾತಿಯ ರಕ್ಷಿತಾ ಶೆಟ್ಟಿ ಹಾಗೂ ನಾ ಡ್ರೈವರ ಗೀತೆಯ ಉತ್ತರ ಕರ್ನಾಟಕದ ಜನಪ್ರಿಯ ಗಾಯಕ ಮಾಳು ನಿಪನಾಳ ಒಟ್ಟಿಗೆ ಮೂವರು ಬಿಗ್​ ಬಾಸ್​ ಮನೆ ಪ್ರವೇಶ ಮಾಡಿದರು.

author-image
Bhimappa
BBK12
Advertisment

ಬಿಗ್​ ಬಾಸ್ ಶೋ ಅದ್ಧೂರಿಯಾಗಿ ಲಾಂಚ್​ ಆಗಿದೆ. ಸ್ಪರ್ಧಿಗಳ ಬಗ್ಗೆ ನಿನ್ನೆ ನೀಡಿದ ಮಾಹಿತಿ ಪಕ್ಕಾ ಆಗಿದ್ದು,  ಒಟ್ಟು 19 ಸ್ಪರ್ಧಿಗಳು ಬಿಗ್​ ಬಾಸ್​ ಮನೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ. 

Advertisment

ಕಿರುತೆರೆ, ಸೋಷಿಯಲ್​ ಮೀಡಿಯಾ, ಕ್ರೀಡೆ, ಸಂಗೀತ ಕ್ಷೇತ್ರ, ಕಾಮಿಡಿ ಜಾನರ್​ ಸೇರಿದಂತೆ ಎಲ್ಲಾ ಕ್ವೇತ್ರದ ಪ್ರತಿಭೆಗಳನ್ನ ಪಿಕ್​ ಮಾಡಲಾಗಿದ್ದು, ಒಂಟಿ, ಜಂಟಿ ಕಾನ್ಸೆಪ್ಟ್​ನಲ್ಲಿ ದೊಡ್ಮೆನೆ ಪ್ರವೇಶ ಮಾಡಿದ್ದಾರೆ ಸ್ಪರ್ಧಿಗಳು. 

ನಂತರ ಜಂಟಿಯಾದವರು ಕಾವ್ಯ ಶೈವ ಹಾಗೂ ಗಿಲ್ಲಿ ನಟ, ಡಾಗ್​ ಸತೀಶ್​ ಹಾಗೂ ಚಂದ್ರಪ್ರಭ, ಅಭಿಷೇಕ್​​ ಹಾಗೂ ಮುದ್ದು ಲಕ್ಷ್ಮೀ ಖ್ಯಾತಿಯ ಅಶ್ವಿನಿ, ಮಂಜು ಭಾಷಿಣಿ ಹಾಗೂ ರಾಶಿಕಾ, ಆರ್.ಜೆ ಅಮಿತ್​ ಹಾಗೂ ಕರಿಬಸಪ್ಪ  ಜಂಟಿಯಾಗಿ ಮನೆ ಪ್ರವೇಶ ಮಾಡಿದರು. 

ಇದನ್ನೂ ಓದಿ: BIGG BOSS 12ಕ್ಕೆ ಎಂಟ್ರಿ ಕೊಟ್ಟ ಇನ್ನೂ 9 ಕಂಟೆಸ್ಟೆಂಟ್​ಗಳು.. ಯಾರು ಯಾರು ಗೊತ್ತಾ?

Advertisment

Rakshita shetty bigg boss

ಇನ್ನೂ ಒಂಟಿಯಾಗಿ ಮೊದಲಿಗೆ ಎಂಟ್ರಿ ಕೊಟ್ಟವರು ಕಾಕ್ರೋಚ್​ ಸುಧಿ, ಮಲ್ಲಮ್ಮ, ನಿರೂಪಕಿ ಜಾನ್ವಿ, ಧನುಷ್​ ಗೌಡ, ಮುದ್ದು ಲಕ್ಷ್ಮೀ ಖ್ಯಾತಿಯ ನಟ ಧ್ರುವಂತ್​, ಹೋರಾಟಗಾರ್ತಿ ನಟಿ ಅಶ್ವಿನಿ ಗೌಡ ವೀಕ್ಷಕರ ವೋಟಿಂಗ್​ ಮೇಲೆ ಒಂಟಿಯಾಗಿ ಕಾಲಿಟ್ಟರು. 

ಇನ್ನೂ ನಟಿ ಸ್ಪಂದನಾ ಸೋಮಣ್ಣ, ಸೋಷಿಯಲ್​ ಮೀಡಿಯಾ ಖ್ಯಾತಿಯ ರಕ್ಷಿತಾ ಶೆಟ್ಟಿ ಹಾಗೂ ನಾ ಡ್ರೈವರ ಗೀತೆಯ ಉತ್ತರ ಕರ್ನಾಟಕದ ಜನಪ್ರಿಯ ಗಾಯಕ ಮಾಳು ನಿಪನಾಳ ಒಟ್ಟಿಗೆ ಮೂವರು ಬಿಗ್​ ಬಾಸ್​ ಮನೆ ಪ್ರವೇಶ ಮಾಡಿದರು. ಇವರು ಒಂಟಿಯಾಗ್ಬೇಕಾ, ಇಲ್ಲ ಜಂಟಿ ಆಗ್ಬೇಕ ಅನ್ನೋದನ್ನ ಬಿಗ್​ ಬಾಸ್​ ನಿರ್ಧರಿಸಲಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

BBK12 kiccha sudeep Kichcha Sudeepa Bigg Boss Kannada 12
Advertisment
Advertisment
Advertisment