/newsfirstlive-kannada/media/media_files/2025/09/28/sudeep_bbk_womans-2025-09-28-22-54-59.jpg)
ಕಿಚ್ಚ ಸುದೀಪ್ ಅವರು ನಡೆಸಿಕೊಡುಂತಹ ಕನ್ನಡದ ಅತ್ಯಂತ ಬಿಗ್ ರಿಯಾಲಿಟಿ ಶೋ ಬಿಗ್​ಬಾಸ್ ಇಂದಿನಿಂದ ಆರಂಭವಾಗಿದೆ. ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡಿರುವ ಬಿಗ್​ಬಾಸ್ ಸೀಸನ್​ಗೆ ಈಗಾಗಲೇ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಈ ಮೊದಲೇ 9 ಸ್ಪರ್ಧಿಗಳ ಹೆಸರು ರಿವೀಲ್ ಮಾಡಿದ್ದರು. ಇದೀಗ ಇನ್ನು 9 ಕಂಟೆಸ್ಟೆಂಟ್​ಗಳ ಹೆಸರು, ಫೋಟೋ, ವಿಡಿಯೋ ರಿಲೀಸ್ ಮಾಡಿದ್ದಾರೆ.
ನಟ ಕಾಕ್ರೋಚ್ ಸುಧಿ, ಮಂಜು ಭಾಷಿಣಿ ಹಾಗೂ ಮಲ್ಲಮ್ಮ ಹೆಸರುಗಳನ್ನು ಘೋಷಣೆ ಮಾಡಲಾಗಿತ್ತು. ಇದಾದ ಮೇಲೆ ಡಾಗ್ ಸತೀಶ್, ಗಿಲ್ಲಿ ನಟ, ಆ್ಯಂಕರ್ ಜಾಹ್ನವಿ, ಧನುಷ್, ಕಾಮಿಡಿ ಕಲಾವಿದ ಚಂದ್ರಪ್ರಭ, ಮಂಜು ಭಾಷಿಣಿ, ಗೊಂಬೆ ರಾಶಿಕಾ ದೊಡ್ಮನೆಗೆ ಬಂದಿದ್ದಾರೆ. ಇದರ ಬೆನ್ನಲ್ಲೇ 9 ಕಂಟೆಸ್ಟೆಂಟ್​ಗಳು ಮನೆಗೆ ಬಂದಿದ್ದಾರೆ.
ಅಭಿಷೇಕ್ ಅವರು ಬಿಗ್​ಬಾಸ್​ ಮನೆಗೆ 10ನೇ ಸ್ಪರ್ಧಿಯಾಗಿ ಆಗಮಿಸಿದ್ದಾರೆ. ಮೌರ್ಯ, ಸಾರ್ಥಕ್ ಆಯ್ತು, ಈಗ ತನ್ನ ಹೊಸ ಲುಕ್‌ನಲ್ಲೇ ಹುಡುಗಿಯರ ಮನ ಗೆಲ್ಲಲು ಚೋರ ಅಭಿಷೇಕ್ ಬಿಗ್ ಬಾಸ್ ಮನೆಗೆ ಎಂಟ್ರಿಯಾಗಿದ್ದಾರೆ.
11ನೇ ಸ್ಪರ್ಧಿಯಾಗಿ ಮಾತಿನ ಮಲ್ಲಿ ಮಲ್ಲಮ್ಮ ಅವರು ಬಿಸ್​ ಬಾಸ್ ಮನೆಯ ಸದಸ್ಯರು ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಗಿಯೇ ಫೇಮಸ್ ಆಗಿದ್ದ ಮಲ್ಲಮ್ಮ ಅವರು ಮನೆಯಲ್ಲಿ ಏನೇನು ಮಾಡುತ್ತಾರೆ ಎಂದು ಜಸ್ಟ್ ವಾಚ್​..
12ನೇ ಕಂಟೆಸ್ಟೆಂಟ್​ ಆಗಿ ಅಶ್ವಿನಿ ಎಸ್.ಎನ್ ಬಂದಿದ್ದಾರೆ. ಪದವಿ ಆದ ಮೇಲೆ ಇವರು ನಿರೂಪಕಿ ಆದರು. ಮೊದಲ ಪ್ರಾಜೆಕ್ಟ್ ಅನುರಾಧ ಸಂಗಮ ಧಾರಾವಾಹಿಯಲ್ಲಿ ನಟಿಸಿ, ಕುಲವಧು, ಗಿರಿಜಾ ಕಲ್ಯಾಣ ಸೀರಿಯಲ್​ನಲ್ಲಿ ಅಭಿನಯಿಸಿದ್ದರು. ಮುದ್ದುಲಕ್ಷ್ಮೀ ಸೀರಿಯಲ್​ನಲ್ಲಿ ಅಶ್ವಿನಿ ಅವರು ನೆಗೆಟಿವ್ ಶೇಡ್‌ನಲ್ಲಿ ಸಖತ್ ಆಗಿಯೇ ಅಭಿನಯ ಮಾಡಿದ್ದರು.
ವ್ಯಕ್ತಿತ್ವದ ಆಟದಲ್ಲಿ ಗೆಲ್ಲೋ ವಿಶ್ವಾಸದಲ್ಲಿ ದೊಡ್ಮನೆಗೆ ಕಿರುತೆರೆ ಸ್ಟಾರ್ ಧ್ರುವಂತ್ ಪ್ರವೇಶಿಸಿದ್ದಾರೆ. ಇವರು ಬಿಗ್ ಬಾಸ್​ಗೆ 13ನೇ ಸ್ಪರ್ಧಿ ಆಗಿದ್ದಾರೆ.
ಬಿಗ್​ಬಾಸ್​ಗೆ 14ನೇ ಸ್ಪರ್ಧಿಯಾಗಿ ಯೂಟ್ಯೂಬರ್, ಸೋಷಿಯಲ್ ಮೀಡಿಯಾ ಸ್ಟಾರ್ ರಕ್ಷಿತಾ ಶೆಟ್ಟಿ ಆಗಮಿಸಿದ್ದಾರೆ. ಅಡುಗೆ ರೆಸಿಪಿ ಅನ್ನು ರಕ್ಷಿತಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ.
15ನೇ ಕಂಟೆಸ್ಟೆಂಟ್ ಆಗಿ ಬಾಡಿ ಬಿಲ್ಡರ್​ ಕರಿಬಸಪ್ಪ ಅವರು ಬಿಗ್​ ಬಾಸ್​ ಮನೆಗೆ ಬಂದಿದ್ದಾರೆ. ಇಂಟರ್ನ್ಯಾಷನಲ್ ಬಾಡಿ ಬಿಲ್ಡರ್ ಆಗಿದ್ದಾರೆ ಇವರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಗೆದ್ದಿರುವ ಕರಿಬಸಪ್ಪ ದೊಡ್ಮನೆಯಲ್ಲಿ ವಿನ್ ಆಗುತ್ತಾರಾ ಎಂದು ಕಾದು ನೋಡಬೇಕು.
ಉತ್ತರ ಕರ್ನಾಟಕದ ಜಾನಪದ ಜಲಾವಿದ ನಾ ಡ್ರೈವರಾ, ನೀ ನನ್ನ ಲವ್ವರಾ ಎಂದು ಹಾಡಿದ್ದ ಮಾಳು ಅವರು 16ನೇ ಕಂಟೆಸ್ಟೆಂಟ್ ಆಗಿದ್ದಾರೆ.
ಬಿಗ್​​ಬಾಸ್ ಮನೆಗೆ ಸಾಹಿತ್ಯಸಕ್ತೆ, ಧಾರಾವಾಹಿ ನಟಿ ಸ್ಪಂದನ ಎಂಟ್ರಿ ಕೊಟ್ಟಿದ್ದಾರೆ. ಮೈಸೂರಿನ ಈ ಚೆಲುವೆ ಬಿಗ್​​ಬಾಸ್​ಗೆ ಇದೀಗ ಬಂದಿದ್ದಾರೆ.
ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎನ್ನುವ ಅಶ್ವಿನಿ ಗೌಡ ಅವರು 18ನೇ ಕಂಟೆಸ್ಟೆಂಟ್​ ಆಗಿ ಬಿಗ್​ ಬಾಸ್​ ಮನೆಗೆ ಆಗಮಿಸಿದ್ದಾರೆ.
19ನೇ ಸ್ಪರ್ಧಿಯಾಗಿ RJ ಅಮಿತ್ ಅವರು ಮನೆಗೆ ಹೊಸ ಲುಕ್​ನಲ್ಲಿ ಬಂದಿದ್ದಾರೆ. ಮಾತಿನಲ್ಲೇ ಮೋಡಿ ಮಾಡೋ ಬೆಂಗಳೂರಿನ ಪ್ರತಿಭೆ ಅಮಿತ್ ಅವರ ಮ್ಯಾಜಿಕ್ ಬಿಗ್ ಬಾಸ್‌ನಲ್ಲಿ ಹೇಗಿರುತ್ತೆ ಎನ್ನುವುದು ಗೊತ್ತಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ