/newsfirstlive-kannada/media/media_files/2025/10/04/jahnavi_abhishek-2025-10-04-20-24-10.jpg)
ಬಿಗ್ ಬಾಸ್​ ಸೀಸನ್​- 12 ದಿನದಿಂದ ದಿನಕ್ಕೆ ವೀಕ್ಷಕರನ್ನು ತನ್ನಡೆಗೆ ಸೆಳೆಯುತ್ತಿದೆ. ಇದಕ್ಕೆ ಕಾರಣ ದೊಡ್ಮನೆಯಲ್ಲಿ ನಡೆಯುತ್ತಿರುವ ಕೆಲವು ಸನ್ನಿವೇಶಗಳು. ಮನೆಯ ಸದಸ್ಯರು ಏನೇನು ಮಾಡುತ್ತಾರೆ, ಏನೇನು ಮಾತನಾಡುತ್ತಿದ್ದಾರೆ ಎಂದು ನೋಡಲು, ಕೇಳಲು ಫ್ಯಾನ್ಸ್​ ಕಣ್ಣು, ಕಿವಿ ಚುರುಕಾಗಿವೆ. ಇದು ಈಗಿರುವಾಗಲೇ ದೊಡ್ಮನೆಯಲ್ಲಿ ಸ್ವಾರಸ್ಯಕರ ಸಂಗತಿಯೊಂದು ನಡೆದಿದ್ದು ನಟ ಅಭಿಷೇಕ್​ ಆಂಟಿ ಲವರ್ ಎನ್ನುವ ಪ್ರಶ್ನೆ ಮೂಡಿದೆ. ​
ಲಕ್ಷಣ ಹಾಗೂ ವಧು ಸೀರಿಯಲ್ ನಟ ಅಭಿಷೇಕ್ ಹಾಗೂ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಜಾಹ್ನವಿ ನಡುವೆ ವಯಸ್ಸಿನ ಕುರಿತು ಮಾತುಗಳ ಸಮರ ನಡೆದಿದೆ. ಜಾಹ್ನವಿ ಅವರನ್ನು ಅಭಿಷೇಕ್ ಫ್ಲರ್ಟ್ ಮಾಡಿದ್ದಾರೆ. ಇದೇ ವೇಳೆ ಜಾಹ್ನವಿ ತಮ್ಮ ವಿಚ್ಛೇದನ ಮತ್ತು ಮಾಜಿ ಪತಿಯ 2ನೇ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಡಿವೋರ್ಸ್ ಪಡೆಯುವ ಮೊದಲೇ ತಮ್ಮ ಸ್ನೇಹಿತೆಯನ್ನೇ ಪತಿ ಮದುವೆ ಆಗಿರುವ ಸತ್ಯವನ್ನ ಜಾಹ್ನವಿ ರಿವೀಲ್ ಮಾಡಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಗುಡುಗಿದ ಸುಧಿಗೆ ಫೈನಲಿಸ್ಟ್ ಕಿರೀಟ!
ಅಭಿಷೇಕ್ ಹಾಗೂ ಜಾಹ್ನವಿ ನಡುವೆ ವಯಸ್ಸಿನ ಬಗ್ಗೆ ಮಾತುಗಳ ನಡೆದಿದ್ದು ತನಗಿಂತ 10 ವರ್ಷ ದೊಡ್ಡವರಾದ ಜಾಹ್ನವಿ ಬಗ್ಗೆ ಅಭಿಷೇಕ್ ಫ್ಲರ್ಟ್ ಮಾಡಿದ್ದಾರೆ. ಮನೆಯ ಅಡುಗೆ ಮನೆ ಬಳಿ ಜಾಹ್ನವಿ ಇರುವಾಗ ಅಲ್ಲಿಗೆ ಬಂದ ಅಭಿಷೇಕ್‌ಗೆ ನಿಮ್ಮ ವಯಸ್ಸು ಎಷ್ಟು ಎಂದು ಕೇಳುತ್ತಾರೆ. ಇದಕ್ಕೆ ಅಭಿಷೇಕ್ ಈಗ ನಂದು ಮದುವೆ ವಯಸ್ಸು ಎಂದಿದ್ದಾರೆ. ಅಂದರೆ 21 ಆಗಿದೆಯಾ ಅಂತ ಜಾಹ್ನವಿ ಪ್ರಶ್ನೆ ಮಾಡಿದ್ದಾರೆ.
ಆಗ ನಿಮಗಿಂತ ದೊಡ್ಡವರು ಎಂದರೆ ನಿಮಗೆ ಇಷ್ಟನಾ ಎಂದು ಅಭಿಷೇಕ್​ರನ್ನು ಕೇಳುತ್ತಾರೆ. ಇದೇ ವೇಳೆ ಪಕ್ಕದಲ್ಲಿ ಕುಳಿತ್ತಿದ್ದ ಅಶ್ವಿನಿ, ಅಭಿಷೇಕ್‌ಗೆ ಬೇರೆ ಆಯ್ಕೆ ಇಲ್ಲ, ಆಂಟಿ ಲವರ್ ಎಂದು ತಮಾಷೆಯಾಗಿ ಹೇಳುತ್ತಾರೆ. ನಿಮ್ಮ ವಯಸ್ಸು 28 ಎನ್ನುವುದು ನನಗೆ ಗೊತ್ತು. ನಿಮಗಿಂತ 10 ವರ್ಷ ದೊಡ್ದವಳು ನಾ. ನನ್ನಂತವರು ಅಂದ್ರೆ ಇಷ್ಟನಾ ಎಂದು ಅಭಿಷೇಕ್‌ಗೆ ಜಾಹ್ನವಿ ಕೇಳುತ್ತಾರೆ. ಇದಕ್ಕೆ ಅಭಿಷೇಕ್, ನಿಮ್ಮನ್ನು ನೀವೂ ಆಂಟಿ ಅಂತ ಕರೆದುಕೊಳ್ತೀರಾ?. ಆದರೆ ಹಾಗೆ ಕಾಣಿಸಲ್ಲ ನೀವು ಅಂತ ಫ್ಲರ್ಟ್ ಮಾಡಿದ್ದಾರೆ. ಇದಕ್ಕೆ ನಗುತ್ತಲೇ ಟಾಂಗ್ ಕೊಟ್ಟ ಜಾಹ್ನವಿ ಆಂಟಿಯಂತೆ ಕಾಣದಂತೆ ಮೇಂಟೈನ್ ಮಾಡಿದ್ದೇನೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ